TMC ಸರ್ಕಾರದ ವಿರುದ್ಧ ಅಮಿತ್ ಶಾ 'ಚಾರ್ಜ್ ಶೀಟ್' ಬಿಡುಗಡೆ: ಬಂಗಾಳ ಚುನಾವಣೆ ದೇಶದ ಭದ್ರತೆಗಾಗಿ ಒಂದು ಯುದ್ಧ!

"ದೇಶದ ಭದ್ರತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಚುನಾವಣೆ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ" ಎಂದು ಅಮಿತ್ ಶಾ ಹೇಳಿದರು.
Amit Shah releases 'charge sheet' against TMC government, says Bengal polls key to nation's security
ಅಮಿತ್ ಶಾ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಚುರುಕುಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶನಿವಾರ ಟಿಎಂಸಿ ಸರ್ಕಾರದ ವಿರುದ್ಧ 'ಚಾರ್ಜ್ ಶೀಟ್' ಬಿಡುಗಡೆ ಮಾಡಿದ್ದಾರೆ ಮತ್ತು ಈ ಚುನಾವಣೆ ಕೇವಲ ರಾಜ್ಯಕ್ಕಾಗಿ ಮಾತ್ರವಲ್ಲದೆ ದೇಶದ ಭದ್ರತೆಗಾಗಿ ಒಂದು ಯುದ್ಧವಾಗಿದೆ ಎಂದಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 15 ವರ್ಷಗಳ ಆಡಳಿತದಲ್ಲಿ ರಾಜ್ಯವು, "ಒಳನುಸುಳುವಿಕೆ, ರಾಜಿ ರಾಜಕೀಯದಿಂದ ದೇಶದ ಗಡಿ ಅಭದ್ರತೆಗೆ ಪ್ರಮುಖ ಕಾರಿಡಾರ್" ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

"ದೇಶದ ಭದ್ರತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಚುನಾವಣೆ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ" ಎಂದು ಅಮಿತ್ ಶಾ ಹೇಳಿದರು.

Amit Shah releases 'charge sheet' against TMC government, says Bengal polls key to nation's security
ಬಂಗಾಳ ಚುನಾವಣೆ: 144 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ; ಮತ್ತೆ ಮಮತಾ ವಿರುದ್ಧ ಸುವೇಂದು ಕಣಕ್ಕೆ

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಸ್ಸಾಂ ಮೂಲಕ ಒಳನುಸುಳುವಿಕೆ ಮಾರ್ಗಗಳನ್ನು "ಮುಚ್ಚಲಾಗುವುದು" ಎಂದು ಹೇಳಿದ ಅಮಿತ್ ಶಾ, ಪಶ್ಚಿಮ ಬಂಗಾಳವು ಈಗ ಒಳನುಸುಳುವಿಕೆಗೆ "ಉಳಿದಿರುವ ಏಕೈಕ ಮಾರ್ಗ" ಎಂದು ಆರೋಪಿಸಿದರು.

"ಒಳನುಸುಳುವವರು ದೇಶಕ್ಕೆ ಪ್ರವೇಶಿಸಿ ಗಲಭೆಗಳನ್ನು ಸೃಷ್ಟಿಸುತ್ತಿರುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ" ಎಂದು ಅವರು ಅಮಿತ್ ಶಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com