ಯಾವುದೇ ಸಂದರ್ಭದಲ್ಲೂ TVKಗೆ ಬೆಂಬಲ ಇಲ್ಲ- AIADMK; ನಿರೀಕ್ಷೆಯಲ್ಲಿದ್ದ ವಿಜಯ್ ಗೆ ಶಾಕ್!

ಟಿವಿಕೆ ತನ್ನ ಚೊಚ್ಚಲ ಚುನಾವಣಾ ಪ್ರವೇಶದಲ್ಲಿ 108 ಸ್ಥಾನಗಳನ್ನು ಗಳಿಸಿದೆ. ಆದಾಗ್ಯೂ, ಸರ್ಕಾರ ರಚಿಸಲು ಅದಕ್ಕೆ 10 ಶಾಸಕರ ಬೆಂಬಲದ ಅಗತ್ಯವಿದೆ.
TVK chief Vijay
ನಟ ರಾಜಕಾರಣಿ ವಿಜಯ್ online desk
Updated on

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂಗೆ ಬೆಂಬಲ ನೀಡುವುದಿಲ್ಲ ಎಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಬುಧವಾರ ತಿಳಿಸಿದೆ.

ಪಕ್ಷ ಇಲ್ಲಿಯವರೆಗೆ ಯಾವುದೇ ಸಂದರ್ಭದಲ್ಲೂ ಟಿವಿಕೆಯನ್ನು ಬೆಂಬಲಿಸಿಲ್ಲ ಎಂದು ಅದು ಹೇಳಿದೆ.

ಟಿವಿಕೆ ತನ್ನ ಚೊಚ್ಚಲ ಚುನಾವಣಾ ಪ್ರವೇಶದಲ್ಲಿ 108 ಸ್ಥಾನಗಳನ್ನು ಗಳಿಸಿದೆ. ಆದಾಗ್ಯೂ, ಸರ್ಕಾರ ರಚಿಸಲು ಅದಕ್ಕೆ 10 ಶಾಸಕರ ಬೆಂಬಲದ ಅಗತ್ಯವಿದೆ.

TVK chief Vijay
ವಿಜಯ್ ಸಿಎಂ ಕನಸಿಗೆ ತಣ್ಣೀರು?: ತಮಿಳುನಾಡಿನಲ್ಲಿ ರಾಜಕೀಯ ಸಂಚಲನ, DMK-AIADMK ಮೈತ್ರಿ ಸರ್ಕಾರ ರಚನೆ?

ಎಐಎಡಿಎಂಕೆ ಶಾಸಕರು ಸರ್ಕಾರ ರಚಿಸುವಲ್ಲಿ ತಮಿಳಗ ವೆಟ್ರಿ ಕಳಗಂ ನ್ನು ಬೆಂಬಲಿಸುವ ಚುನಾವಣೋತ್ತರ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ ಎಂಬ ಮಾಧ್ಯಮಗಳ ವರದಿಗಳಿಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕೆ ಪಿ ಮುನುಸಾಮಿ, ಎಐಎಡಿಎಂಕೆ ಟಿವಿಕೆಯನ್ನು ಬೆಂಬಲಿಸುತ್ತಿದೆ ಎಂಬ ಸುದ್ದಿ ಹರಡುತ್ತಿದೆ

"ಇದು ಸಂಪೂರ್ಣವಾಗಿ ಸುಳ್ಳು. ಯಾವುದೇ ಸಂದರ್ಭದಲ್ಲೂ ಎಐಎಡಿಎಂಕೆ ಟಿವಿಕೆಯನ್ನು ಬೆಂಬಲಿಸುವುದಿಲ್ಲ. ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ (ಎಡಪ್ಪಾಡಿ ಕೆ ಪಳನಿಸ್ವಾಮಿ) ಅವರ ಸೂಚನೆಯ ಮೇರೆಗೆ ನಾವು ಈ ಸ್ಪಷ್ಟೀಕರಣವನ್ನು ನೀಡುತ್ತಿದ್ದೇವೆ" ಎಂದು ಎಐಎಡಿಎಂಕೆ ಮುಖ್ಯಸ್ಥರೊಂದಿಗಿನ ಸಭೆಯಿಂದ ಹೊರಬಂದ ಮುನುಸಾಮಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com