ಬಿಹಾರ ಸಿಎಂ ಚೌಧರಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಸ್ಥಳೀಯ ಗಾಯಕನ ಬಂಧನ

"ಮಗಧ ಪ್ರದೇಶದ ಸ್ಥಳೀಯ ಗಾಯಕ ಮತ್ತು ಗೀತರಚನೆಕಾರ ಚುನ್ನು ಲಾಲ್ ಯಾದವ್ ಅವರು ಮುಖ್ಯಮಂತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ
arrest
ಬಂಧನ online desk
Updated on

ಪಾಟ್ನ: ಬಿಹಾರದ ಜೆಹನಾಬಾದ್ ಜಿಲ್ಲೆಯಲ್ಲಿ ಬುಧವಾರ ಸ್ಥಳೀಯ ಗಾಯಕನೊಬ್ಬನನ್ನು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಖ್ದುಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರಿಪುರ ಗ್ರಾಮದ ನಿವಾಸಿ ಚುನ್ನು ಲಾಲ್ ಯಾದವ್ (35) ಈ ಪೋಸ್ಟ್ ಮೂಲಕ ಮುಖ್ಯಮಂತ್ರಿಯ ವರ್ಚಸ್ಸು ಮತ್ತು ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

arrest
Video: ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯವೇನಿದೆ? ಮನೆಯೊಳಗೆ ಇರಬೇಕು; ಬಿಹಾರ ಶಿಕ್ಷಣ ಸಚಿವ ಮಿಥಿಲೇಶ್ ವಿವಾದಾತ್ಮಕ ಹೇಳಿಕೆ

"ಮಗಧ ಪ್ರದೇಶದ ಸ್ಥಳೀಯ ಗಾಯಕ ಮತ್ತು ಗೀತರಚನೆಕಾರ ಚುನ್ನು ಲಾಲ್ ಯಾದವ್ ಅವರು ಮುಖ್ಯಮಂತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ ಮತ್ತು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಾರೆ. ಈ ವಿಷಯ ನಂತರ ವೈರಲ್ ಆಗಿತ್ತು. ಅವರನ್ನು ಬಂಧಿಸಲಾಗಿದೆ" ಎಂದು ಎಸ್‌ಡಿಪಿಒ (ಘೋಶಿ) ಕೃತಿ ಕಮಲ್ ವರದಿಗಾರರಿಗೆ ತಿಳಿಸಿದ್ದಾರೆ.

ಪಾಟ್ನಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com