ತೆಲಂಗಾಣ ರಾಜಕೀಯದಲ್ಲಿ ಭಾರೀ ಸಂಚಲನ: ಚಿರಂಜೀವಿ ನಿವಾಸಕ್ಕೆ ಅಮಿತ್ ಶಾ ಭೇಟಿ; ಹಲವು ವಿಷಯಗಳ ಬಗ್ಗೆ ಚರ್ಚೆ!

ಮೇಲ್ನೋಟಕ್ಕೆ ಇದು, ಎಐಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲು, ಶಾ, ಇಬ್ಬರನ್ನು ಭೇಟಿಯಾಗಿದ್ದರು ಎಂದು ಸುದ್ದಿಯಾದರೂ, ಭವಿಷ್ಯದ ರಾಜಕೀಯದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಚಿರಂಜೀವಿ ಭೇಟಿಯಾದ ಅಮಿತ್ ಶಾ
ಚಿರಂಜೀವಿ ಭೇಟಿಯಾದ ಅಮಿತ್ ಶಾ
Updated on: 

ಹೈದರಾಬಾದ್ : ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೈದರಾಬಾದ್ ನಲ್ಲಿ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಒಂದು, ದಕ್ಷಿಣ ಭಾರತದ ಹೆಸರಾಂತ ಕಲಾವಿದರಾದ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ಅವರನ್ನು ಭೇಟಿಯಾಗಿದ್ದಾರೆ.

ಮೇಲ್ನೋಟಕ್ಕೆ ಇದು, ಎಐಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲು, ಶಾ, ಇಬ್ಬರನ್ನು ಭೇಟಿಯಾಗಿದ್ದರು ಎಂದು ಸುದ್ದಿಯಾದರೂ, ಭವಿಷ್ಯದ ರಾಜಕೀಯದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆದರೆ ಈ ಸಂದರ್ಭದಲ್ಲಿ, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ಜಾಗತಿಕ ತಾರೆ ರಾಮ್ ಚರಣ್.. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಶೇಷ ಸಭೆ ನಡೆಸಿದರು. ತಂದೆ-ಮಗ ಜೋಡಿ, ಚಲನಚಿತ್ರ ಕಲಾವಿದರ ಸುರಕ್ಷತೆ ಮತ್ತು ಘನತೆಗೆ ಬೆದರಿಕೆಯಾಗಿ ಪರಿಣಮಿಸಿರುವ ಡೀಪ್‌ಫೇಕ್ ವಿಷಯದ ಬಗ್ಗೆ ದೀರ್ಘವಾಗಿ ಚರ್ಚಿಸಿದರು.

ಇತ್ತೀಚಿನ ದಿನಗಳಲ್ಲಿ, ಚಲನಚಿತ್ರ ಸೆಲೆಬ್ರಿಟಿಗಳನ್ನು, ವಿಶೇಷವಾಗಿ ನಟಿಯರನ್ನು ಗುರಿಯಾಗಿಸಿಕೊಂಡು ಅಶ್ಲೀಲ ಡೀಪ್‌ಫೇಕ್ ವೀಡಿಯೊಗಳು ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ರಚಿಸುವುದು ಸಂಚಲನವನ್ನು ಉಂಟುಮಾಡುತ್ತಿದೆ ಎಂದು ತಿಳಿದಿದೆ.

ಚಿರಂಜೀವಿ ಭೇಟಿಯಾದ ಅಮಿತ್ ಶಾ
NCP ಎರಡು ಬಣಗಳ ವಿಲೀನಕ್ಕೆ ಅಮಿತ್ ಶಾ ಸಲಹೆ: ಕ್ಯಾರೆ ಎನ್ನದ ನಾಯಕರು; ಸುನೇತ್ರ ಪವಾರ್ ನಿವಾಸದಲ್ಲಿ ತುರ್ತು ಸಭೆ!

ಎಐ (AAI) ದುರ್ಬಳಕೆ, ಡೀಪ್’ಫೇಕ್ ಟೆಕ್ನಾಲಜಿ, ವಿಶೇಷವಾಗಿ ಚಿತ್ರೋದ್ಯಮದ ಕಲಾವಿದರನ್ನು ಟಾರ್ಗೆಟ್ ಮಾಡಿ ಆಕ್ಷೇಪಾರ್ಹ ಮತ್ತು ಮಾರ್ಪ್ ಮಾಡಿದ ವಿಡಿಯೋಗಳನ್ನು ಸೃಷ್ಟಿಸುವುದರ ವಿರುದ್ದ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೋರಿ ಚಿರಂಜೀವಿ ಮತ್ತು ರಾಮ್’ಚರಣ್, ಮನವಿಯನ್ನು ಮಾಡಿದ್ದಾರೆ.

ಚಿರಂಜೀವಿ ಮನವಿಗೆ ಕೂಡಲೇ ಸ್ಪಂದಿಸುವುದಾಗಿ ಅಮಿತ್ ಶಾ ಈ ವೇಳೆ ಭರವಸೆಯನ್ನು ನೀಡಿದ್ದಾರೆ. ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರಿಗೆ ಸಮನ್ವಯದ ಹೊಣೆಯನ್ನು ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X