ಆರೋಗ್ಯದಲ್ಲಿ ಏರುಪೇರು: ಡಿಸ್ಚಾರ್ಜ್ ಆಗಿ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾದ ಶರದ್ ಪವಾರ್

ಪವಾರ್ ಅವರ ಪುತ್ರಿ ಹಾಗೂ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಅವರು, ತಮ್ಮ ತಂದೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ತಿಳಿಸಿದ್ದಾರೆ.
Sharad pawar
ಶರದ್ ಪವಾರ್
Updated on: 

ಮುಂಬೈ: ಅನಾರೋಗ್ಯಕ್ಕೆ ತುತ್ತಾಗಿ ಪುಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು ಬುಧವಾರ ಬಿಡುಗಡೆಯಾಗಿದ್ದರು. ಆದರೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರಿಂದ ಕೆಲವೇ ಗಂಟೆಗಳಲ್ಲಿ ಮುಂಬೈ ಆಸ್ಪತ್ರೆಯಲ್ಲಿ ಮತ್ತೆ ದಾಖಲಾಗಿದ್ದಾರೆ.

ಪವಾರ್ ಅವರ ಪುತ್ರಿ ಹಾಗೂ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಅವರು, ತಮ್ಮ ತಂದೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಕೆಮ್ಮು ಮತ್ತು ಎದೆ ನೋವಿನ ಸಮಸ್ಯೆಯಿಂದಾಗಿ ನವೆಂಬರ್ 2 ರಂದು ಪುಣೆಯ 'ರೂಬಿ ಹಾಲ್ ಕ್ಲಿನಿಕ್'ಗೆ ದಾಖಲಾಗಿದ್ದ 85 ವರ್ಷದ ಹಿರಿಯ ರಾಜಕಾರಣಿ ಶರದ್ ಪವಾರ್, ಬುಧವಾರ ಅಲ್ಲಿಂದ ಬಿಡುಗಡೆಗೊಂಡಿದ್ದರು.

ಪವಾರ್ ಅವರು ರೂಬಿ ಹಾಲ್ ಕ್ಲಿನಿಕ್‌ನಲ್ಲಿ ದಾಖಲಾಗಿದ್ದಾಗ, ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು ಎಂದು ಸುಪ್ರಿಯಾ ಸುಳೆ ತಿಳಿಸಿದ್ದರು.

ಅಲ್ಲದೆ, ರೂಬಿ ಹಾಲ್ ಕ್ಲಿನಿಕ್‌ನಿಂದ ಬಿಡುಗಡೆಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪವಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ಪವಾರ್ ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

Sharad pawar
ಸುಪ್ರಿಯಾ ಸುಳೆ ದೇಶ ನೋಡ್ಕೋತಾರೆ, ನೀವು ವಿಶ್ರಾಂತಿ ಪಡೆಯಿರಿ: ಶರದ್ ಪವಾರ್ ಗೆ ಪ್ರಧಾನಿ ಮೋದಿ ಕಿವಿಮಾತು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X