'ಪಾರದರ್ಶಕವಾಗಿ ಜಂಟಿ ಪರೀಕ್ಷೆ ಮಾಡೋಣ': ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ತೈಲ ಕಂಪೆನಿಗಳು

ರಾಜ್ಯದ ಚಿಲ್ಲರೆ ಇಂಧನ ಮಾರಾಟ ಕೇಂದ್ರಗಳಲ್ಲಿ ಶೇ.26ರಿಂದ ಶೇ.31.2ರವರೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ. ಇದು ನಿಗದಿಪಡಿಸಿರುವ ಶೇ.20ರ (E20) ಮಿತಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ನಿನ್ನೆ ಸಚಿವ ರಿಜ್ವಾನ್ ಆರ್ಷದ್ ಆರೋಪಿಸಿದ್ದರು.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ನ್ನು ಇಂಧನ ಕೇಂದ್ರಗಳು ಮಾರಾಟ ಮಾಡುತ್ತಿವೆ ಎಂಬ ಕರ್ನಾಟಕ ಸರ್ಕಾರದ ಆರೋಪಗಳನ್ನು ತೈಲ ಮಾರುಕಟ್ಟೆ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬಲವಾಗಿ ತಳ್ಳಿಹಾಕಿವೆ.

ರಾಜ್ಯದ ಚಿಲ್ಲರೆ ಇಂಧನ ಮಾರಾಟ ಕೇಂದ್ರಗಳಲ್ಲಿ ಶೇ.26ರಿಂದ ಶೇ.31.2ರವರೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ. ಇದು ನಿಗದಿಪಡಿಸಿರುವ ಶೇ.20ರ (E20) ಮಿತಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ನಿನ್ನೆ ಸಚಿವ ರಿಜ್ವಾನ್ ಆರ್ಷದ್ ಆರೋಪಿಸಿದ್ದರು. ಈ ಆರೋಪಗಳ ಬೆನ್ನಲ್ಲೇ ತೈಲ ಕಂಪನಿಗಳು ಸ್ಪಷ್ಟನೆ ನೀಡಿವೆ.

Representational image
ಶೇ. 31.2ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ: ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ! Video

ಮೂರು ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತ್ಯೇಕವಾದರೂ ಸಮನ್ವಯದ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ನಿಗದಿತ ವೈಜ್ಞಾನಿಕ ವಿಧಾನಗಳ ಅಡಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಸರ್ಕಾರದ ಆರೋಪಗಳಿಗೆ ಯಾವುದೇ ಆಧಾರ ಕಂಡುಬಂದಿಲ್ಲ ಎಂದು ತಿಳಿಸಿವೆ.

ಕರ್ನಾಟಕದಿಂದ ಸಂಗ್ರಹಿಸಿದ ಮಾದರಿಗಳೂ ಸೇರಿದಂತೆ ದೇಶಾದ್ಯಂತ ನಡೆಸಿದ ಗುಣಮಟ್ಟದ ಪರೀಕ್ಷೆಗಳು ನಿಯಂತ್ರಣ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿವೆ ಎಂದು ಕಂಪನಿಗಳು ಹೇಳಿವೆ.

ತೈಲ ಕಂಪನಿಗಳ ಪ್ರಕಾರ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಲಾದ ಒಟ್ಟು 893 ಇಂಧನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಕರ್ನಾಟಕದಿಂದ ಸಂಗ್ರಹಿಸಿದ 56 ಮಾದರಿಗಳೂ ಸೇರಿವೆ. ಪರೀಕ್ಷೆಗೊಳಪಡಿಸಿದ ಎಲ್ಲ ಮಾದರಿಗಳಲ್ಲೂ ಎಥೆನಾಲ್ ಮಿಶ್ರಣದ ಪ್ರಮಾಣ ಅನುಮತಿಸಲಾದ ಶೇ.19ರಿಂದ ಶೇ.21ರ ಮಿತಿಯೊಳಗೇ ಇರುವುದು ಕಂಡುಬಂದಿದೆ.

ವಿವಾದಕ್ಕೆ ತೆರೆ ಎಳೆಯಲು ಮತ್ತು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳು ಕರ್ನಾಟಕ ಸರ್ಕಾರದೊಂದಿಗೆ ಜಂಟಿ ಪರೀಕ್ಷೆ ನಡೆಸುವಂತೆ ಅಧಿಕೃತವಾಗಿ ಮನವಿ ಮಾಡಿವೆ. ಪಾರದರ್ಶಕವಾಗಿ, ಸ್ವತಂತ್ರವಾಗಿ ಹಾಗೂ ವೈಜ್ಞಾನಿಕವಾಗಿ ಪರಿಶೀಲಿಸಬಹುದಾದ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಕಂಪನಿಗಳು ಕೋರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X