3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್: ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್; ಅಸಾದುದ್ದೀನ್ ಓವೈಸಿ ಘೋಷಣೆ

ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ. ನವೆಂಬರ್ 26 ರಂದು ಬೃಹತ್ ರ್ಯಾಲಿಯನ್ನು ನಡೆಸುವುದಾಗಿಯೂ AIMIM ಮತ್ತು ASP ನಾಯಕರು ಘೋಷಿಸಿದ್ದಾರೆ.
Chandrashekhar Azad And  Asaduddin Owaisi
ಚಂದ್ರಶೇಖರ್ ಆಜಾದ್ ಮತ್ತು ಅಸಾದುದ್ದೀನ್ ಓವೈಸಿ
Updated on: 

ಲಕ್ನೋ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗಾಗಿ ‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ ಮತ್ತು ‘ಆಜಾದ್ ಸಮಾಜ್ ಪಾರ್ಟಿ’ ಮೈತ್ರಿ ಮಾಡಿಕೊಂಡಿವೆ.

ಗುರುವಾರ ಲಕ್ನೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಮೈತ್ರಿಕೂಟವು ASP ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದರು.

AIMIM ಮತ್ತು ASP ನಡುವಿನ ಈ ಮೈತ್ರಿಕೂಟವನ್ನು ‘ಸಾಮಾಜಿಕ್ ಪರಿವರ್ತನ್ ಮೋರ್ಚಾ’ ಎಂದು ಕರೆಯಲಾಗುತ್ತದೆ. ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ. ನವೆಂಬರ್ 26 ರಂದು ಬೃಹತ್ ರ್ಯಾಲಿಯನ್ನು ನಡೆಸುವುದಾಗಿಯೂ AIMIM ಮತ್ತು ASP ನಾಯಕರು ಘೋಷಿಸಿದ್ದಾರೆ.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ, ಹೊಸದಾಗಿ ರಚಿಸಲಾದ 'ಸಮಾಜಿಕ ಪರಿವರ್ತನ ಮೋರ್ಚಾ' (SPM) ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಜಾದ್ ಸಮಾಜ ಪಕ್ಷದ (ಕಾನ್ಶಿರಾಂ) ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಗುರುವಾರ ಘೋಷಿಸಿದರು. ಈ ಮೈತ್ರಿಯು, ಉತ್ತರ ಪ್ರದೇಶದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

Chandrashekhar Azad And  Asaduddin Owaisi
ಓವೈಸಿ ಜೊತೆ ಚಂದ್ರಶೇಖರ್ ಆಜಾದ್ ಮೈತ್ರಿ: ದಲಿತ-ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣು; UP ಚುನಾವಣೆಯಲ್ಲಿ ಹೊಸ ಸಮೀಕರಣ!

ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು, ಉತ್ತರ ಪ್ರದೇಶದಲ್ಲಿ ಇದೊಂದು ಪ್ರಬಲ ಪರ್ಯಾಯವಾಗಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಅವರು ತಿಳಿಸಿದರು. ಜಾತಿ ಭೇದವಿಲ್ಲದೆ, ಹಿಂದುಳಿದ ಮತ್ತು ದಲಿತ ಸಮುದಾಯಗಳು ಹಾಗೂ ಇತರ ಶೋಷಿತ ಮತ್ತು ಅಂಚಿನಲ್ಲಿರುವ ವರ್ಗಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳತ್ತ ಈ ಮೋರ್ಚಾ ಗಮನಹರಿಸಲಿದೆ ಎಂದು ಓವೈಸಿ ಹೇಳಿದರು. ಈ ಸಮುದಾಯಗಳನ್ನು ಹಿಂದಿನ ರಾಜಕೀಯ ಪಕ್ಷಗಳು ಕೇವಲ 'ವೋಟ್ ಬ್ಯಾಂಕ್' (ಮತ ಬ್ಯಾಂಕ್) ಗಳನ್ನಾಗಿ ಮಾತ್ರ ಪರಿಗಣಿಸಿವೆ ಎಂದು ಅವರು ಆರೋಪಿಸಿದರು.

ಶಿಕ್ಷಣ ವ್ಯವಸ್ಥೆಯ ಹದಗೆಟ್ಟ ಸ್ಥಿತಿ, ಯುವಜನರ ನಿರುದ್ಯೋಗ ಮತ್ತು ರೈತರ ಸಮಸ್ಯೆಗಳನ್ನು ಈ ಮೈತ್ರಿಕೂಟವು ಪ್ರಮುಖ ವಿಷಯಗಳಾಗಿ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ನಮ್ಮ ಸಹೋದರ ಚಂದ್ರಶೇಖರ್ ಆಜಾದ್ ಅವರು 'ಸಾಮಾಜಿಕ ಪರಿವರ್ತನ ಮೋರ್ಚಾ'ದ (SPM) ಮುಖ್ಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉತ್ತರ ಪ್ರದೇಶದಲ್ಲಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ," ಎಂದು ಓವೈಸಿ ಹೇಳಿದರು.

ಈ ಮೈತ್ರಿಕೂಟದ ಯಶಸ್ಸಿಗಾಗಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಹೇಳಿದ ಅವರು, ಮೋರ್ಚಾದ ಗೆಲುವು ಎಂದರೆ ಅದು ಉತ್ತರ ಪ್ರದೇಶದ ಜನರ ಗೆಲುವೇ ಆಗಿರುತ್ತದೆ ಎಂದು ಪ್ರತಿಪಾದಿಸಿದರು. ನವೆಂಬರ್ 26ರಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಓವೈಸಿ, ಇದು ರಾಜ್ಯದಲ್ಲಿ ಸಾಮಾಜಿಕ ಬದಲಾವಣೆಗಾಗಿ ನಡೆಯುವ ಚಳುವಳಿಯ ಆರಂಭವಾಗಿದೆ ಎಂದು ಬಣ್ಣಿಸಿದರು.

ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳನ್ನು ಟೀಕಿಸಿದ ಅವರು, ಆ ಪಕ್ಷಗಳು ಹಳೆಯ ರಾಜಕೀಯವನ್ನು ಪ್ರತಿನಿಧಿಸುತ್ತವೆ, ಆದರೆ 'ಸಾಮಾಜಿಕ ಪರಿವರ್ತನ ಮೋರ್ಚಾ' ಭವಿಷ್ಯದತ್ತ ಗಮನಹರಿಸುತ್ತದೆ ಎಂದು ಹೇಳಿದರು.

"ನಾವು ಭವಿಷ್ಯಕ್ಕಾಗಿ ರಾಜಕೀಯ ಮಾಡುತ್ತೇವೆ. ಉತ್ತಮ ಭವಿಷ್ಯವನ್ನು ರೂಪಿಸಲು ಉತ್ತರ ಪ್ರದೇಶದ ಜನರು ಚಂದ್ರಶೇಖರ್ ಆಜಾದ್ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ನಾವು ಭಾವಿಸುತ್ತೇವೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X