ತಾಯಿಗೆ ಚಾಕುವಿನಿಂದ ಇರಿದು ಶಾಲಾ ವಾಟ್ಸಾಪ್ ಗ್ರೂಪ್‌ಗೆ ಮೆಸೇಜ್; ಬಳಿಕ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!

ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ.
Representative Image
ಸಾಂದರ್ಭಿಕ ಚಿತ್ರ
Updated on: 

ಗುವಾಹಟಿ: ಗುವಾಹಟಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ಚಾಕುವಿನಿಂದ ಇರಿದು, ಬಳಿಕ ಬಹುಮಹಡಿ ಕಟ್ಟಡವೊಂದರ ಮೇಲ್ಛಾವಣಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿರುವ ಖಾಸಗಿ ಶಾಲೆಯೊಂದರ ಈ ವಿದ್ಯಾರ್ಥಿ, ಶುಕ್ರವಾರ ರಾತ್ರಿ ಬಮುನಿಮೈದಾಂ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ತಾಯಿಯ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಇದರಿಂದ ಆಕೆಯ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ.

Representative Image
ವೇಶ್ಯಾವಾಟಿಕೆ ಆರೋಪ: ನಡು ರಸ್ತೆಯಲ್ಲೇ ಮಹಿಳೆಯರಿಗೆ ಥಳಿಸಿದ ಶಿವಸೇನೆ ಕಾರ್ಯಕರ್ತೆಯರು; ವಿಡಿಯೋ ವೈರಲ್!

ನಂತರ ನಗರದ ಎಬಿಸಿ(ABC) ಪ್ರದೇಶಕ್ಕೆ ತೆರಳಿದ ಆತ, ಅಲ್ಲಿನ ಕಟ್ಟಡವೊಂದರ ಮೇಲ್ಛಾವಣಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಕುವಿನಿಂದ ಇರಿಯಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X