ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ವೇಳೆ ತಮಿಳುನಾಡು ಸಚಿವ 45 ಲಕ್ಷ ರೂ ಮೌಲ್ಯದ 'ದುಬಾರಿ ವಾಚ್' ಧರಿಸಿದ್ರಾ? ನೆಟ್ಟಿಗರ ಕುತೂಹಲ

ಈ ಭೇಟಿಯ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಸಚಿವರು ಸುಮಾರು 45 ಲಕ್ಷ ರೂ. ಮೌಲ್ಯದ ಐಷಾರಾಮಿ 'ರೋಲೆಕ್ಸ್ ಡೇಟೋನಾ' (Rolex Daytona) ವಾಚ್ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳುತ್ತಿದ್ದರು.
Pralhad Joshi, A Rajmohan
ಪ್ರಲ್ಹಾದ್ ಜೋಶಿ, ಸಚಿವ ಎ. ರಾಜಮೋಹನ್
Updated on: 

ಚೆನ್ನೈ: ತಮಿಳುನಾಡು ಶಾಲಾ ಶಿಕ್ಷಣ ಸಚಿವ ಎ. ರಾಜಮೋಹನ್ ಅವರು ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಇತ್ತೀಚಿಗೆ ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾದಾಗ ಅವರು ಹಾಕಿದ್ದ ವಾಚ್ ನೆಟ್ಟಿಗರ ಗಮನ ಸೆಳೆದಿತ್ತು.

ಈ ಭೇಟಿಯ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಸಚಿವರು ಸುಮಾರು 45 ಲಕ್ಷ ರೂ. ಮೌಲ್ಯದ ಐಷಾರಾಮಿ 'ರೋಲೆಕ್ಸ್ ಡೇಟೋನಾ' (Rolex Daytona) ವಾಚ್ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳುತ್ತಿದ್ದರು.

ಈ ಬಗ್ಗೆ ತಮ್ಮ 'ಎಕ್ಸ್' (X) ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಾಜಮೋಹನ್, ಆ ವಾಚ್ ಬೆಲೆ ಕೇವಲ 5,500 ರೂ. ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವರು, ವಾಚ್ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ, ಯಾರಾದರೂ ಬೇಕಿದ್ದರೆ ಅದನ್ನು 5,500 ರೂ.ಗೆ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.

Pralhad Joshi, A Rajmohan
ತಮಿಳುನಾಡು: ಮಾಜಿ ಸಿಎಂ MK ಸ್ಟಾಲಿನ್ ಸೋಲಿಸಿದ್ದ ಕೊಲತ್ತೂರು TVK ಶಾಸಕ ವಿ.ಎಸ್. ಬಾಬು ನಿಧನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X