ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು: 37 ಜಿಲ್ಲೆಗಳ ಪೈಕಿ 33ರಲ್ಲಿ ಮುನ್ನಡೆ; BJPಗೆ ತೀವ್ರ ಮುಖಭಂಗ!

ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
Congress scores decisive win over BJP in Rajasthan local polls, leads in 33 of 37 districts
ಕಾಂಗ್ರೆಸ್ ಮುಖಂಡರ ಗೆಲುವಿನ ಸಂಭ್ರಮ
Updated on: 

ಜೈಪುರ: ರಾಜಸ್ಥಾನದ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ರಾಜ್ಯ ಚುನಾವಣಾ ಆಯೋಗದ (SEC) ಮಾಹಿತಿಯ ಪ್ರಕಾರ, ಕಾಂಗ್ರೆಸ್ 3,701 ಪಂಚಾಯತ್ ಸಮಿತಿ ಸ್ಥಾನಗಳನ್ನ (ಬಿಜೆಪಿ 2,181 ಸ್ಥಾನಗಳನ್ನು ಪಡೆದಿದೆ) ಮತ್ತು 599 ಜಿಲ್ಲಾ ಪರಿಷತ್ ಸ್ಥಾನಗಳನ್ನು (ಆಡಳಿತ ಪಕ್ಷ 301 ಸ್ಥಾನಗಳನ್ನು ಪಡೆದಿದೆ) ಗೆದ್ದುಕೊಂಡಿದೆ.

Congress scores decisive win over BJP in Rajasthan local polls, leads in 33 of 37 districts
ರಾಜಸ್ಥಾನ ಪಂಚಾಯತ್ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಗೆಲುವು; ಆಡಳಿತರೂಢ BJPಗೆ ತೀವ್ರ ಮುಖಭಂಗ!

ಮತ ಎಣಿಕೆ ನಡೆದ 37 ಜಿಲ್ಲೆಗಳ ಪೈಕಿ 33 ಜಿಲ್ಲೆಗಳಲ್ಲಿ ಪಂಚಾಯತ್ ಸಮಿತಿ ಮಟ್ಟದಲ್ಲಿ ಕಾಂಗ್ರೆಸ್, ಬಿಜೆಪಿಗಿಂತ ಉತ್ತಮ ಸಾಧನೆ ಮಾಡಿದೆ. ಅಜ್ಮೀರ್, ಬಲೋತ್ರಾ, ಸಲುಂಬರ್ ಮತ್ತು ಉದಯಪುರ ಸೇರಿ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದೆ.

ಡಿಸೆಂಬರ್‌ನಲ್ಲಿ ಅಧಿಕಾರಾವಧಿಯ ಮೂರು ವರ್ಷಗಳನ್ನು ಪೂರೈಸಲಿರುವ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಫಲಿತಾಂಶ ತೀವ್ರ ಹಿನ್ನಡೆಯಾಗಿದೆ.

ಇಂದು ಸಂಜೆ ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, 37 ಜಿಲ್ಲೆಗಳಲ್ಲಿನ ಒಟ್ಟು 7,543 ಪಂಚಾಯತ್ ಸಮಿತಿ ಸ್ಥಾನಗಳ ಪೈಕಿ 7,393 ಸ್ಥಾನಗಳ ಮತ್ತು 1,275 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 981 ಸ್ಥಾನಗಳಿಗೆ ಫಲಿತಾಂಶ ಪ್ರಕಟಿಸಲಾಗಿದೆ.

ಇತರ ಪಕ್ಷಗಳ ಪೈಕಿ, ನಾಗೌರ್ ಸಂಸದ ಹನುಮಾನ್ ಬೆನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ(RLP) 496 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಭಾರತ್ ಆದಿವಾಸಿ ಪಕ್ಷ (BAP) 276, ಬಹುಜನ ಸಮಾಜ ಪಕ್ಷ (BSP) 60, ಸಿಪಿಐ(ಎಂ) 50 ಮತ್ತು ಆಮ್ ಆದ್ಮಿ ಪಕ್ಷ (AAP) 2 ಸ್ಥಾನಗಳನ್ನು ಪಡೆದಿವೆ. ಪಕ್ಷೇತರ ಅಭ್ಯರ್ಥಿಗಳು 627 ಸ್ಥಾನಗಳನ್ನು ಗೆದ್ದಿದ್ದಾರೆ.

ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ, ಆರ್‌ಎಲ್‌ಪಿ (RLP) 37 ಸ್ಥಾನಗಳನ್ನು, ಬಿಎಪಿ (BAP) 22 ಸ್ಥಾನಗಳನ್ನು, ಬಿಎಸ್‌ಪಿ (BSP) ಮತ್ತು ಸಿಪಿಐ(ಎಂ) ತಲಾ 6 ಸ್ಥಾನಗಳನ್ನು ಗೆದ್ದುಕೊಂಡರೆ, ಪಕ್ಷೇತರರು 10 ಸ್ಥಾನಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X