ಜಾರಂಗೆ ಆಡಿಯೋ ಕ್ಲಿಪ್ ಪ್ರಕರಣ: ಸಂಜಯ್ ರಾವತ್, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆರೋಪವೇನು?

ಮನೋಜ್ ಜಾರಂಗೆ ಅವರಿಗೆ '500 ಕೋಟಿ ರೂ.' ನೀಡಲಾಗಿದೆ ಎಂದು ಉಲ್ಲೇಖಿಸುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಆಡಿಯೋ ಕ್ಲಿಪ್ ಅನ್ನು ಸಿದ್ಧಪಡಿಸಿದ ಆರೋಪವನ್ನು ಶಿವಸೇನೆ-ಯುಬಿಟಿ ಬಣದ ನಾಯಕ ಸಂಜಯ್ ರಾವತ್ ಅವರ ಮೇಲೆ ಹೊರಿಸಿದೆ.
Sanjay Raut, Rahul Gandhi
ಸಂಜಯ್ ರಾವತ್, ರಾಹುಲ್ ಗಾಂಧಿ
Updated on: 

ಮುಂಬೈ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಆಡಿಯೋ ಕ್ಲಿಪ್ ಪ್ರಕರಣ ಮಹಾರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವಂತೆಯೇ ಬಿಜೆಪಿಗೆ ಅಪಖ್ಯಾತಿ ತರುವಈ 'ಒಪ್ಪಂದ'ದ ಹಿಂದೆ ರಾಹುಲ್ ಗಾಂಧಿ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮನೋಜ್ ಜಾರಂಗೆ ಅವರಿಗೆ '500 ಕೋಟಿ ರೂ.' ನೀಡಲಾಗಿದೆ ಎಂದು ಉಲ್ಲೇಖಿಸುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಆಡಿಯೋ ಕ್ಲಿಪ್ ಅನ್ನು ಸಿದ್ಧಪಡಿಸಿದ ಆರೋಪವನ್ನು ಶಿವಸೇನೆ-ಯುಬಿಟಿ ಬಣದ ನಾಯಕ ಸಂಜಯ್ ರಾವತ್ ಅವರ ಮೇಲೆ ಹೊರಿಸಿದೆ.

ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಮನೋಜ್ ಜಾರಂಗೆ ನಡುವೆ ಬಿರುಕು ಮೂಡಿಸುವುದು ಈ ಕೃತ್ಯದ ಉದ್ದೇಶವಾಗಿದೆ. ಇದರ ಮೂಲಕ ಕಾಂಗ್ರೆಸ್ ಮತ್ತು ಶಿವಸೇನೆ-ಯುಬಿಟಿ ಬಣಗಳಿಗೆ ರಾಜಕೀಯ ಲಾಭ ಮಾಡಿಕೊಡುವುದಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.

ಅಗತ್ಯವಿದ್ದರೆ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಶಿವಸೇನೆ-ಯುಬಿಟಿ ಸಂಸದರಿಗೆ ರಾಹುಲ್ ಗಾಂಧಿಯವರಿಂದ ಹಣಕಾಸಿನ ನೆರವು ಸಿಕ್ಕಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿಯ ಮುಖ್ಯ ವಕ್ತಾರ ನವನಾಥ್ ಬಾನ್ ಆಗ್ರಹಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾನ್, ನವಿ ಮುಂಬೈನ ವಾಶಿಯಲ್ಲಿರುವ 'ವಾರ್ ರೂಮ್' ಒಂದರಿಂದ ಸಂಜಯ್ ರಾವತ್ ಈ ಪಿತೂರಿಯನ್ನು ರೂಪಿಸಿದ್ದಾರೆ. ಬಿಜೆಪಿಗೆ ಅಪಖ್ಯಾತಿ ತರುವ ಗುತ್ತಿಗೆಯನ್ನು ರಾವತ್ ಅವರು ರಾಹುಲ್ ಗಾಂಧಿಯವರಿಂದ ಪಡೆದಿದ್ದಾರೆ. ಕಳೆದ ಕೆಲವು ದಿನಗಳಿಂದ ರಾವತ್ ಅವರು ನಿರಂತರವಾಗಿ ರಾಹುಲ್ ಗಾಂಧಿಯವರ ಅಜೆಂಡಾವನ್ನೇ ಮುಂದಿಡುತ್ತಿದ್ದಾರೆ ಎಂದು ಹೇಳಿದರು.

ಯೂಟ್ಯೂಬ್‌ನಲ್ಲಿ ಲಭ್ಯವಿರುವ ಧ್ವನಿ ಮಾದರಿಗಳನ್ನು (voice samples) ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಒಗ್ಗೂಡಿಸಿ, ಕಳೆದ ಸುಮಾರು ಎರಡು ತಿಂಗಳುಗಳಿಂದ ರಾವತ್ ಈ ಆಡಿಯೋ ಕ್ಲಿಪ್ ತಯಾರಿಸುವ ಕೆಲಸದಲ್ಲಿ ತೊಡಗಿದ್ದರು ಎಂದು ಅವರು ಆರೋಪಿಸಿದರು.

"ಸಂಜಯ್ ರಾವತ್ ಅವರು 'ಸಾಮ್ನಾ' ಪತ್ರಿಕೆಯ ಕಚೇರಿಯಲ್ಲಿ ಈ ಸಂಭಾಷಣೆಗಳ ಸ್ಕ್ರಿಪ್ಟ್ ಸಿದ್ಧಪಡಿಸಿದ್ದರು. ಆರಂಭದಲ್ಲಿ 100 ಕೋಟಿ ರೂ.ಗಳ ಆರೋಪವನ್ನು ಹೊರಿಸಲು ಯೋಚಿಸಿದ್ದರು, ಆದರೆ ಮಾಧ್ಯಮಗಳ ಗಮನವನ್ನು ಹೆಚ್ಚು ಸೆಳೆಯಲು ಆ ಮೊತ್ತವನ್ನು 500 ಕೋಟಿ ರೂ.ಗೆ ಏರಿಸಿದರು ಎಂದು ಬಾನ್ ಆರೋಪಿಸಿದರು.

Sanjay Raut, Rahul Gandhi
₹500 ಕೋಟಿ ವಿವಾದ: ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಜಾರಂಗೆ! ಡೀಲ್ ನಿರಾಕರಿಸಿದ ಶಿಂಧೆ

ಸಾಮ್ನಾ' ಪತ್ರಿಕೆಯು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಯುಬಿಟಿ ಬಣದ ಮುಖವಾಣಿಯಾಗಿದೆ. ಈ ಆಡಿಯೋ ಕ್ಲಿಪ್ ಅನ್ನು ನಂತರ ಛತ್ರಪತಿ ಸಂಭಾಜಿನಗರದ ವ್ಯಕ್ತಿಯೊಬ್ಬರಿಗೆ ನೀಡಲಾಯಿತು ಮತ್ತು ಅವರು ಅದನ್ನು ಮನೋಜ್ ಜಾರಂಗೆ ತಲುಪಿಸಿದರು ಎಂದು ಬಾನ್ ಆರೋಪಿಸಿದ್ದಾರೆ.

ಹೆಚ್ಚುತ್ತಿರುವ ವಿವಾದದ ನಡುವೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರದಂದು ವಿಧಿವಿಜ್ಞಾನ ತನಿಖೆಗೆ (ಫಾರೆನ್ಸಿಕ್ ತನಿಖೆ) ಆದೇಶಿಸಿದ್ದಾರೆ. ಅದೇ ವೇಳೆ ಜಾರಂಗೆ ಅವರು ನಿಷ್ಪಕ್ಷಪಾತವಾದ ವಿಶೇಷ ತನಿಖಾ ತಂಡದ (SIT) ತನಿಖೆಗೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com