Uttarakhand helicopter crash: ಛಿದ್ರ ಛಿದ್ರವಾಗಿ ಬಿದ್ದ ಹೆಲಿಕಾಪ್ಟರ್, ಸುಟ್ಟುಕರಕಲಾದ ಸ್ಥಿತಿಯಲ್ಲಿ ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಪತ್ತೆ!

ಮೃತರನ್ನು ಪೈಲಟ್ ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48) ಬೆಂಗಳೂರು ಮೂಲದ ಪ್ರಯಾಣಿಕರಾದ ವಿ.ಬಿ ಶಂಕರ್‌ಗೌಡ (39) ಅರುಣ್ ಸಾಲಂಕೆ (44) ಬಾಚಿಹಳ್ಳಿ ಪ್ರತಾಪ್ ಗೌಡ (49) ಹುಲಿಯೂರುದುರ್ಗದ ಹೆಚ್‌ಎನ್ ನಟರಾಜು (51)ಎಂದು ಗುರುತಿಸಲಾಗಿದೆ
all deceased
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರು
Updated on: 

ಚಮೋಲಿ: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಘನ ಘೋರ ದುರಂತದಲ್ಲಿ ಕರ್ನಾಟಕದ ಐವರು ದುರ್ಮರಣ ಹೊಂದಿದ್ದಾರೆ. ದೆಹಲಿ ಮೂಲದ ಪೈಲಟ್ ಕೂಡಾ ಸಾವನ್ನಪ್ಪಿದ್ದು, ಜೋಶಿ ಮಠದ ಹಾಥಿ ಕಣಿವೆ ಪ್ರದೇಶದಲ್ಲಿ ಸುಟ್ಟುಕರಲಾದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸ್ಥಳೀಯ ರಕ್ಷಣಾ ತಂಡಗಳಿಗೆ ಹಾಥಿ ಕಣಿವೆ ಪ್ರದೇಶದ ಚೈನ್ (Chaien) ಗ್ರಾಮದ ಬಳಿ ಹೊಗೆ ಕಾಣಿಸಿಕೊಂಡಿದೆ. ಬಳಿಕ ಅಲ್ಲಿಗೆ ತೆರಳಿ ನೋಡಿದಾಗ ವಿಧ್ರ ವಿಧ್ರವಾಗಿ ಬಿದ್ದ ಹೆಲಿಕಾಪ್ಟರ್ ಹಾಗೂ ಸುಟ್ಟುಕರಲಾದ ಪರಿಸ್ಥಿತಿಯಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ.

ಸ್ಥಳೀಯ ರಕ್ಷಣಾ ತಂಡಗಳು ಮೃತದೇಹಗಳನ್ನು ರಸ್ತೆ ಮೂಲಕ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಪೈಲಟ್ ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48) ಬೆಂಗಳೂರು ಮೂಲದ ಪ್ರಯಾಣಿಕರಾದ ಸಿಸಿಬಿ ಇನ್ಸ್ ಕೆಪ್ಟರ್ ಅರುಣ್ ಸಾಲಂಕೆ (44), ವಿ.ಬಿ ಶಂಕರ್‌ಗೌಡ (39) ಬಾಚಿಹಳ್ಳಿ ಪ್ರತಾಪ್ ಗೌಡ (49) ಹುಲಿಯೂರುದುರ್ಗದ ಹೆಚ್‌ಎನ್ ನಟರಾಜು (51) ಮತ್ತು ಸುಧೀರ್ ಎಂದು ಗುರುತಿಸಲಾಗಿದೆ.

ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ: ಬೆಂಗಳೂರಿನಲ್ಲಿ ವಾಸವಿದ್ದ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಸುಧೀರ್, ಶಂಕರ್ ಗೌಡ, ನಟರಾಜ್ ಅವರೊಂದಿಗೆ ಚಾರ್ ಧಾಮ್ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

ಹೈಕೋರ್ಟ್ ವಕೀಲ ಶಂಕರಗೌಡ: ತುಮಕೂರಿನ ಶಂಕರಗೌಡ ವೃತ್ತಿಯಲ್ಲಿ ಹೈಕೋರ್ಟ್ ವಕೀಲರಾಗಿದ್ದರು. ಪತ್ನಿ ಹಾಗೂ ಒಂದು ಮಗು ಜೊತಗೆ ಸಪ್ತಗಿರಿ ಬಡಾವಣೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಇನ್ನೂ ಹಾಸನ ಜಿಲ್ಲೆ ಬಾಚಿಹಳ್ಳಿ ಗ್ರಾಮದ ಪ್ರತಾಪ್ ಗೌಡ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಇವರು ಯಸಳೂರು ಜಿಲ್ಲಾ ಪಂಚಾಯಿತಿಯಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ.

ತುಮಕೂರಿನ ಹುಲಿಯೂರುದುರ್ಗದ ಹೆಚ್‌ಎನ್ ನಟರಾಜು ಸಾವನ್ನಪ್ಪಿದ್ದು, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಐವರು ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.

all deceased
ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಸಾವು, VIDEO

ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈ. ಲಿಮಿಟೆಡ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್, VT-HCX ಮಧ್ಯಾಹ್ನ 1.14 ರ ಸುಮಾರಿಗೆ ಟೇಕ್ ಆಫ್ ಆಗಿ ಜೋಶಿಮಠ ಕಣಿವೆಯ ಮೇಲೆ ಹಾರುವಾಗ ಸಂಪರ್ಕ ಕಳೆದುಕೊಂಡಿತು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಗಣ್ಯರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X