"ಸ್ಟಾಲಿನ್ ಸರ್, ಬಾಯಿ ಬಿಡಿ": ವೀರಮಣಿ ಸೆಕ್ಸ್ ಹಗರಣ ಉಲ್ಲೇಖಿಸಿ DMK ವಿರುದ್ಧ CM ವಿಜಯ್ ವಾಗ್ದಾಳಿ

ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಭಯಾನಕ ಪ್ರಕರಣದಲ್ಲೂ ಎಐಎಡಿಎಂಕೆ ಜೊತೆ, ಸ್ಟಾಲಿನ್ ಶಾಮೀಲಾಗಿದ್ದಾರೆ ಎಂದು ವಿಜಯ್ ಗಂಭೀರ ಆರೋಪ ಮಾಡಿದ್ದಾರೆ.
CM Vijay, stalin
ಸಿಎಂ ವಿಜಯ್, ಸ್ಟಾಲಿನ್
Updated on: 

ಚೆನ್ನೈ: ಉದ್ಯಮಿ ವೀರಮಣಿ ಸೆಕ್ಸ್ ಹಗರಣವನ್ನು ಉಲ್ಲೇಖಿಸಿ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು, "ಸ್ಟಾಲಿನ್ ಸರ್, ಮಾತನಾಡಿ" ಎಂದು ಆಗ್ರಹಿಸಿದ್ದಾರೆ.

ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಭಯಾನಕ ಪ್ರಕರಣದಲ್ಲೂ ಎಐಎಡಿಎಂಕೆ ಜೊತೆ, ಸ್ಟಾಲಿನ್ ಶಾಮೀಲಾಗಿದ್ದಾರೆ ಎಂದು ವಿಜಯ್ ಗಂಭೀರ ಆರೋಪ ಮಾಡಿದ್ದಾರೆ.

ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೆನ್ನೈ ಮೂಲದ ಗ್ರಾನೈಟ್ಸ್‌ ಉದ್ಯಮಿ ಹಾಗೂ ಜೆಮ್ ಗ್ರೂಪ್‌ನ ಅಧ್ಯಕ್ಷ ಆರ್. ವೀರಮಣಿಯನ್ನು ಪೋಕ್ಸೊ(POCSO) ಪ್ರಕರಣದಲ್ಲಿ ಬಂಧಿಸಲಾಗಿದೆ.

CM Vijay, stalin
ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್‌ ಅಧ್ಯಕ್ಷ ವೀರಮಣಿ ಸೆಕ್ಸ್ ಹಗರಣ: ಮತಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಲೋಕಲ್ 'Epstein files' ಎಂದ ನೆಟ್ಟಿಗರು!

ವೀರಮಣಿ ಸೆಕ್ಸ್ ಹಗರಣದ ಬಗ್ಗೆ ಹಿಂದಿನ ಡಿಎಂಕೆ ಆಡಳಿತದಲ್ಲಿ ದೂರು ದಾಖಲಾಗಿದ್ದರೂ, ಇಡೀ ಅಪರಾಧ ಮತ್ತು ಅದರ ಇತಿಹಾಸವನ್ನು ಹೂತುಹಾಕಲಾಯಿತು ಎಂದು ವಿಜಯ್ ಆರೋಪಿಸಿದ್ದಾರೆ.

"ಅಸಲಿಗೆ ಆ ಪ್ರಕರಣವೇನು ಎಂದು ತಮಿಳುನಾಡು ಪ್ರಶ್ನಿಸುತ್ತಿದೆ. ಸ್ಟಾಲಿನ್ ಅವರೇ, ಬಾಯಿ ಬಿಡಿ, ದನಿ ಎತ್ತಿ; ನಿಮ್ಮೊಂದಿಗೆ ಕೈಜೋಡಿಸಿರುವ ಎಐಎಡಿಎಂಕೆ(AIADMK) ಕೂಡ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಈ ವಿಷಯದಲ್ಲೂ ಒಳಒಪ್ಪಂದವಿದೆಯೇ? ಈ ವಿಚಾರದಲ್ಲೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ನೀವು ಮೌನವಾಗಿಯೇ ಉಳಿಯುತ್ತೀರಾ?" ಎಂದು ವಿಜಯ್ ಪ್ರಶ್ನಿಸಿದ್ದಾರೆ.

ಎಐಎಡಿಎಂಕೆಯ ಕೆ. ಮರಗಥಂ ಕುಮಾರವೇಲ್ ಅವರ ರಾಜೀನಾಮೆಯಿಂದಾಗಿ ತೆರವಾದ ಸ್ಥಾನಕ್ಕೆ ಅಕ್ಟೋಬರ್ 6ರಂದು ನಡೆಯುವ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಸಿಎಂ ವಿಜಯ್, ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ವೀರಮಣಿ 2003 ಅಥವಾ ಅದಕ್ಕೂ ಮುಂಚೆಯೇ ಇನ್ನೂ ಅನೇಕ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕೇಂದ್ರ ಅಪರಾಧ ವಿಭಾಗ(CCB)ದ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com