96 ನೇ ಅಕಾಡೆಮಿ ಅವಾರ್ಡ್ಸ್: 'ಓಪನ್ ಹೈಮರ್' ಗೆ ಅತ್ಯುತ್ತಮ ಸಿನಿಮಾ ಸೇರಿ 7 ಪ್ರಶಸ್ತಿ!

96 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಓಪನ್ ಹೈಮರ್ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗಳಿಸಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮPTI

ಲಾಸ್ ಏಂಜಲೀಸ್: 96 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಓಪನ್ ಹೈಮರ್ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗಳಿಸಿದೆ.

ಅತ್ಯುತ್ತಮ ನಟನ ವಿಭಾಗದಲ್ಲಿ ಸಿಲಿಯನ್ ಮರ್ಫಿ, ಪೋಷಕ ನಟನ ವಿಭಾಗದಲ್ಲಿ ರಾಬರ್ಡ್ ಡೌನಿ ಜ್ಯೂನಿಯರ್, ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ನೋಲನ್ ಆಸ್ಕರ್ ಪ್ರಶಸ್ತಿ ಪಡೆದಿದ್ದು, ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್ ಹೈಮರ್ ಚಿತ್ರ ತಂಡ ವಿವಿಧ ವಿಭಾಗಗಳಲ್ಲಿ ಬರೊಬ್ಬರಿ 7 ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ 'ಟು ಕಿಲ್ ಎ ಟೈಗರ್' ಹಿಂದಿಕ್ಕಿ ಆಸ್ಕರ್ ಗೆದ್ದ '20 ಡೇಸ್ ಇನ್ ಮಾರಿಯುಪೋಲ್‌'!

ಇನ್ನು ಪೂರ್ ಥಿಂಗ್ಸ್ ಸಿನಿಮಾದಲ್ಲಿ ಬೆಲ್ಲಾ ಬ್ಯಾಕ್ಸ್ಟರ್ ಪಾತ್ರ ನಿರ್ವಹಿಸಿದ್ದ, ಎಮ್ಮಾ ಸ್ಟೋನ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದಿದೆ.

ಸ್ಟೋನ್ "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್" ನ ಲಿಲಿ ಗ್ಲಾಡ್‌ಸ್ಟೋನ್ ಅವರೂ ಸಹ ಆಸ್ಕರ್ ಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಒಂದು ವೇಳೆ ಗ್ಲಾಡ್‌ಸ್ಟೋನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಈ ಪ್ರಶಸ್ತಿಗೆ ಭಾಜನರಾದ ಮೊದಲ ಸ್ಥಳೀಯ ಅಮೆರಿಕನ್ ಆಗಿರುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com