ಭಾರತೀಯ ಖ್ಯಾತ ನಿರ್ದೇಶಕರೆಂದೇ ಹೆಸರು ಮಾಡಿದ್ದ ನೀರದ್ ಮಹಾಪಾತ್ರ ಅವರು ಹೃದಯ ಸ್ತಂಭನದಿಂದಾಗಿ ಫೆ.19ರಂದು ಸಾವನ್ನಪ್ಪಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಗೋವಿಂದ ಪನ್ಸಾರೆ
ಮಹಾರಾಷ್ಟ್ರದ ವಿಚಾರವಾದಿ ಲೇಖಕ ಹಾಗೂ ಕಮ್ಯುನಿಸ್ಟ್ ನಾಯಕರಾಗಿದ್ದ ಗೋವಿಂದ್ ಪನ್ಸಾರೆ ಅವರನ್ನು ಅನಾಮಿಕ ವ್ಯಕ್ತಿಗಳು ಫೆ.20ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರಿಗೆ.82 ವರ್ಷ ವಯಸ್ಸಾಗಿತ್ತು.
ವಿ,ಎಸ್. ರಾಘವನ್
ವೃದ್ಧಾಪ್ಯ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ಮತ್ತು ಅನುಭವಿ ತಮಿಳು ನಟ ವಿ.ಎಸ್. ರಾಘವನ್ ಅವರು ಜ.24 ರಂದು ಸಾವನ್ನಪ್ಪಿದ್ದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಕಾಗ ರಂಗನಾಥ್
ತೆಲುಗು ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿ ಖ್ಯಾತಿಗಳಿಸಿದ್ದ ಹಿರಿಯ ನಟ ಕಾಗ ರಂಗನಾಥ್ ಅವರು ಡಿ.19ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಹುಕುಂ ಸಿಂಗ್
1990-31ರವರೆಗು ಹರಿಯಾಣದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಹುಕುಂ ಸಿಂಗ್ ಅವರು ಫೆ.26ರಂದು ವಿಧಿವಶರಾಗಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮಲ್ಲಿ ಮಸ್ತಾನ್ ಬಾಬು
ಭಾರತದ ಪ್ರಸಿದ್ಧ ಪರ್ವತಾರೋಹಿ ಎಂದೇ ಖ್ಯಾತಿ ಗಳಿಸಿದ್ದ ಮಲ್ಲಿ ಮಸ್ತಾನ್ ಬಾಬು ಅವರ ಮೃತ ದೇಶ ಏ.5 ರಂದು ದೊರೆತಿತ್ತು. ಬಾಬು ಅವರು ಪರ್ವತಾರೋಹಣಕ್ಕಾಗಿ ಡಿಸೆಂಬರ್ 16ರಂದು ತೆರಳಿದ್ದರು. ಮಾರ್ಚ್ 24 ರಂದು ಅರ್ಜೆಂಟೀನಾದಿಂದ ಪರ್ವತಾರೋಹಣ ಪ್ರಾರಂಭಿಸಿದ್ದರು. ಮಾರನೇ ದಿನ ಅವರು ಶ
ಟಿ.ಸೈಲೋ
1979ರಿಂದ 1984ರ ವರೆಗೆ ಮಿಜೋರಾಂನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಟಿ ಸೈಲೋ ಅವರು ಹೃದಯಾಘಾತದಿಂದಾಗಿ ಮಾ.27 ರಂದು ಸಾವನ್ನಪ್ಪಿದ್ದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮಸುದುರ್ ರಹಮಾನ್ ಬೈದ್ಯ
ವಿಶ್ವದ ಮೊದಲ ಅಂಗವಿಕಲ ಈಜುಪಟು ಎಂದೇ ಖ್ಯಾತಿಗಳಿಸಿದ್ದ ಮಸುದುರ್ ರಹಮಾನ್ ಬೈದ್ಯ ಅವರು ಹೃದಯಾಘಾತದಿಂದಾಗಿ ಏ.26ರಂದು ಸಾವನ್ನಪ್ಪಿದ್ದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಬಿಜೋಯ ರೇ
ನ್ಯುಮೋನಿಯಾದಿಂದ ಬಳಲುತ್ತಿದ್ದ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಸತ್ಯಜಿತ್ ಅವರ ಪತ್ನಿ ಬಿಜೋಯ ರೇ ಅವರು ಜೂ.2 ರಂದು ಸಾವನ್ನಪ್ಪಿದ್ದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಹೇಮಂತ್ ಕನಿತ್ಕರ್
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ಕ್ರಿಕೆಟ್ ಆಟಗಾರ ಹೇಮಂತ್ ಕಸಿತ್ಕರ್ ಅವರು ಜೂ.9 ರಂದು ಸಾವನ್ನಪ್ಪಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಶೀಲಾ ಕೌಲ್
ಜವಾಹರಲಾಲ್ ನೆಹರೂ ಅವರ ಸೊಸೆ ಹಾಗೂ ಮಾಜಿ ಕೇಂದ್ರ ಸಚಿವೆಯಾಗಿದ್ದ ಶೀಲಾ ಕೌಲ್ ಅವರು ಜೂ.13 ರಂದು ವಿಧಿವಶರಾಗಿದ್ದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಅಲೆಕ್ಸ್ ಮ್ಯಾಥ್ಯೂ
ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಅಲೆಕ್ಸ್ ಮ್ಯಾಥ್ಯೂ ಅವರು ಹೃದಯಾಘಾತದಿಂದಾಗಿ ಜೂ.23 ರಂದು ಸಾವನ್ನಪ್ಪಿದ್ದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಓಂ ಪ್ರಕಾಶ್ ಮುಂಜಾಲ
ಕೈಗಾರಿಕೋದ್ಯಮಿ, ಹೀರೋ ಸೈಕಲ್ಸ್ ಲಿಮಿಟೆಡ್ ನ ಸ್ಥಾಪಕ ಅಧ್ಯಕ್ಷ ಓಂ ಪ್ರಕಾಶ್ ಮುಂಜಾಲ್ ಅವರು ಆ.13ರಂದು ವಿಧಿವಶರಾಗಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು
ಆಹುತಿ ಪ್ರಸಾದ್
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಖ್ಯಾತ ನಟ ಆಹುತಿ ಪ್ರಸಾದ್ ಅವರು ಜ.4ರಂದು ಸಾವನ್ನಪ್ಪಿದ್ದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಜಗದೀಶ್ ಕುಮಾರ್
ತೀವ್ರ ಹೃದಯಾಘಾತದಿಂದಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರು ನ.23 ರಂದು ಸಾವನ್ನಪ್ಪಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಶ್ರೀಹರಿ
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಜನಪ್ರಿಯ ಬಹುಭಾಷಾ ನಟ ಶ್ರೀಹರಿಯವರು ಅ.9 ರಂದು ನಿಧನರಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.