ಫೆಬ್ರುವರಿ 5ರಂದು 'ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ' ಎಂದು ಹಾಡಿದ ಮುದ್ದಾದ ಹುಡುಗಿ ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಅವರು ಸಿಟಿಒ ಕಂಪೆನಿಯ ಸಹ ಸಂಸ್ಥಾಪಕ ಶೈಲಾದಿತ್ಯ ಮುಖ್ಯೋಪಾಧ್ಯಾಯ ಅವರನ್ನು ವರಿಸಿದರು.
ನವೆಂಬರ್ 29ರಂದು ನಟ ಮಯೂರ್ ಪೇಟಲ್ ಅವರು ಮಂಗಳೂರು ಮೂಲದ ಕಾವ್ಯ ಎಸ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಕ್ಟೋಬರ್ 30ರಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರು ಉದ್ಯಮಿ ಪುತ್ರಿ ರಾಜಶ್ರೀ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಕ್ಟೋಬರ್ 25ರಂದು ಸ್ಯಾಂಡಲ್ವುಡ್ ನಟ ಪ್ರಜ್ವಲ್ ದೇವರಾಜ್ ಅವರು ತಮ್ಮ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಕ್ಟೋಬರ್ 29ರಂದು ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರು ಚಿತ್ರನಟಿ ಗೀತಾ ಬಸ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಆಗಸ್ಟ್ 31ರಂದು ಸ್ಯಾಂಡಲ್ ವುಡ್ ಹಿರಿಯ ನಟ ಶಿವರಾಜ್ ಕುಮಾರ್ ಅವರ ಪುತ್ರಿ ಡಾ. ನಿರುಪಮಾ ಅವರು ಮನೆಯವರ ಒಪ್ಪಿಗೆ ಪಡೆದು ತಾನು ಪ್ರೀತಿಸಿದ ದಿಲೀಪ್ ಅವರನ್ನು ವರಿಸಿದರು.
ಆಗಸ್ಟ್ 20ರಂದು ಚುರುಕಿನ ಆಟದ ವ್ಯಕ್ತಿತ್ವವುಳ್ಳ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದರು.
ಜುಲೈ 7, 2015ರಂದು ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ದೆಹಲಿ ಮೂಲದ ಮೀರಾ ರಜಪೂತ್‌ರನ್ನು ಮಂಗಳವಾರ ವಿವಾಹವಾದರು. ದೆಹಲಿ ಹೊರವಲಯದ ಫಾರ್ಮ್ ಹೌಸ್‌ವೊಂದರಲ್ಲಿ ಸರಳವಾಗಿ ಮದುವೆ ನೆರವೇರಿದ್ದು, ಕೇವಲ ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಏಪ್ರಿಲ್ 3, 2015ರಂದು ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಡಿಸೆಂಬರ್ 13ರಂದು ಕ್ರಿಕೆಟಿಗ, ಡಬಲ್ ಸೆಂಚುರಿ ವೀರ ರೋಹಿತ್ ಶರ್ಮಾ ಅವರು ರಿತಿಕಾ ಸಜ್ ದೇ ಜತೆಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.