ಪ್ರಳಯ ಪೀಡಿತ ಚೆನ್ನೈಯನ್ನು ವಿಮಾನದಲ್ಲಿ ವೀಕ್ಷಿಸುತ್ತಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಪ್ರೆಸ್ ಇನ್ಫಾರ್‌ಮೇಷನ್ ಬ್ಯೂರೋ ಟ್ವೀಟ್ ಮಾಡಿತ್ತು. ಫೋಟೋಶಾಪ್ ಮಾಡಿದ ಫೋಟೋ ಟ್ವಿಟರ್‌ನಲ್ಲಿ ಟೀಕೆಗೆ ಒಳಪಟ್ಟು ವೈರಲ್ ಆಗುತ್ತಿದ್ದಂತೆ ಪಿಐಬಿ ಆ ಟ್ವೀಟ್‌ನ್ನು ಡಿಲೀಟ್ ಮಾಡಿತ್ತು.
ಹಂಗೇರಿಯ ರೋಜ್ಕೆ ಗ್ರಾಮದಲ್ಲಿ ಪ್ರಾಣಭಯದಿಂದ ಓಡುತ್ತಿರುವ ವಲಸೆಗಾರನನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಿರುವ ಪತ್ರಕರ್ತೆ. ಮಾನವೀಯತೆ ಇಲ್ಲದೆ ವರ್ತಿಸಿದ ಆಕೆಯನ್ನು ತದನಂತರ ಕೆಲಸದಿಂದ ವಜಾ ಮಾಡಲಾಯಿತು
ಫೋಟೋ ಕ್ಲಿಕ್ಕಿಸಲು ಕ್ಯಾಮೆರಾ ತೆಗೆದ ಫೋಟೋ ಜರ್ನಲಿಸ್ಟ್ ಮುಂದೆ ಎರಡೂ ಕೈಗಳನ್ನೆತ್ತಿ ಶರಣಾಗತಿಯಾದ ಸಿರಿಯಾದ ಬಾಲಕಿ. ಈ ಫೋಟೋ 2012ರಲ್ಲಿ ತೆಗೆದಿದ್ದಾದರೂ, ಈ ವರ್ಷ ಟ್ವೀಟ್ ಮಾಡಲಾಗಿತ್ತು.
ಫೋಟೋ ಕೃಪೆ -ಟ್ವಿಟರ್
ಕೆಎಫ್‌ಸಿಯಲ್ಲಿ ಹುರಿದ ಇಲಿ ಸಿಕ್ಕಿದೆ ಎಂದು ಆರೋಪಿಸಿ ಈ ಫೋಟೋವನ್ನು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಇದು ಇಲಿ ಅಲ್ಲ ಎಂದು ಕೆಎಫ್‌ಸಿ ಸಾಬೀತು ಪಡಿಸಿತ್ತು.
ಫೋಟೋ ಕೃಪೆ ಫೇಸ್‌ಬುಕ್
ಫರ್ಖಾನ್ ಜವೇದ್ ಚಿತ್ರಿಸಿದ ಬ್ಯಾಡ್ ಗರ್ಲ್ ಪೋಸ್ಟರ್.
ಫೋಟೋ ಕೃಪೆ -ಫೇಸ್‌ಬುಕ್
ಟಿರ್ಕಿಯ ಕಡಲ ಕಿನಾರೆಯಲ್ಲಿ ಬಿದ್ದಿದ್ದ 3ರ ಹರೆಯದ ಅಯ್ಲಾನ್ ಕುರ್ದಿ ಎಂಬ ಸಿರಿಯಾ ಹುಡುಗನ ಮೃತದೇಹ. ಕಿನಾರೆಗೆ ಅಪ್ಪಳಿಸಿದ ಮಾನವೀಯತೆ ಎಂಬ ಹ್ಯಾಶ್‌ಟ್ಯಾಗ್ ನಲ್ಲಿ ಈ ಫೋಟೋ ವೈರಲ್ ಆಗಿದ್ದು, ಸಿರಿಯಾದ ಪರಿಸ್ಥಿತಿಯ ಸಂಕೇತವಾಗಿ ಈ ಫೋಟೋವನ್ನು ಬಿಂಬಿಸಲಾಗುತ್ತಿದೆ.
ಫೋಟೋ ಕೃಪೆ -ಟ್ವಿಟರ್
ಕೆನಡಾದ ಪತ್ರಕರ್ತ ವೀರಿಂದರ್ ಜುಬ್ಬಾಲ್ ಅವರನ್ನು ಉಗ್ರನನ್ನಾಗಿ ಚಿತ್ರಿಸಿದ ಫೋಟೋಶಾಪ್ ಫೇಕ್ ಫೋಟೋ.
ಫೋಟೋ ಕೃಪೆ- ಟ್ವಿಟರ್
ನಾಸಾ ಬಿಡುಗಡೆ ಮಾಡಿದ ಕುಬ್ಜ ಗ್ರಹ ಪ್ಲೋಟೋದ ಚಿತ್ರ
ಫೋಟೋ ಕೃಪೆ- ನಾಸಾ
ಟೀವಿ ಕಲಾವಿದೆ ಬ್ರೂಸ್ ಜೆನ್ನೆರ್ ಕ್ಯಾಟೆಲಿಮ್ ಜೆನ್ನಪ್ ಆಗಿ ಬದಲಾದಾಗ ವ್ಯಾನಿಟಿ ಫೇರ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಕವರ್‌ಪೇಜ್
ಫೋಟೋ ಕೃಪೆ -ಫೇಸ್‌ಬುಕ್
ಟೀವಿ ಕಲಾವಿದೆ ಬ್ರೂಸ್ ಜೆನ್ನೆರ್ ಕ್ಯಾಟೆಲಿಮ್ ಜೆನ್ನಪ್ ಆಗಿ ಬದಲಾದಾಗ ವ್ಯಾನಿಟಿ ಫೇರ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಕವರ್‌ಪೇಜ್
ಫೋಟೋ ಕೃಪೆ -ಫೇಸ್‌ಬುಕ್
ಮೇ ತಿಂಗಳಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ವೇಳೆ 4 ಹರೆಯದ ಬಾಲಕ, ತನ್ನ ಎರಡರ ಹರೆಯದ ತಂಗಿಯನ್ನು ಅಪ್ಪಿ ಹಿಡಿದುಕೊಂಡು ರಕ್ಷಿಸುತ್ತಿರುವ ಫೋಟೋ.