ಹಿನ್ನೋಟ 2016: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ತಾರೆಯರು
2008ರಲ್ಲಿ ತೆರೆಕಂಡ ಘಜನಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ತೊಟ್ಟುಮಾಕಳ್ ಅವರು ಮೈಕ್ರೋಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಅವರೊಂದಿಗೆ ಜನವರಿ 19, 2016ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದಕ್ಷಿಣ ಭಾರತದ ನಟಿ ಅರ್ಚನಾ ಕವಿ ಅವರು ಹಾಸ್ಯ ಕಲಾವಿದ ಅಭಿಶ್ ಮ್ಯಾಥ್ಯೂ ಅವರೊಂದಿಗೆ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಫೆಬ್ರವರಿ 4, 2016ರಂದು ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರು ಸೌದಿ ಅರೆಬಿಯಾದ ಮಾಡೆಲ್ ಸಫಾ ಬೇಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಫೆಬ್ರವರಿ 29, 2016ರಂದು ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ತನ್ನ ಅಮೆರಿಕನ್ ಬಾಯ್ ಫ್ರೆಂಡ್ ಜೀನ್ ಗುಡ್‌ಇನಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಮಾರ್ಚ್ 3, 2016ರಂದು ಬಾಲಿವುಡ್ ನಟಿ ಉರ್ಮಿಳಾ ಮಾತೊಡ್ಕರ್ ಅವರು ಕಾಶ್ಮೀರಿ ಉದ್ಯಮಿ ಮೋಹ್ಸಿನ್ ಅಖ್ತರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಮಾರ್ಚ್ 3, 2016ರಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ತಮ್ಮ ದೀರ್ಘಕಾಲದ ಗೆಳತಿ ಮಾಜಿ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು.
ಮಾರ್ಚ್ 8, 2016ರಂದು ಕ್ರಿಕೆಟಿಗ ಮೋಹಿತ್ ಶರ್ಮಾ ಅವರು ತಮ್ಮ ದೀರ್ಘಕಾಲದ ಗೆಳತಿ ಸ್ವೇತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.
ಮಾರ್ಚ್ 30, 2016ರಂದು ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ದ್ವಿತೀಯ ಪುತ್ರಿ ಶ್ರೀಜಾ ಅವರು ಬೆಂಗಳೂರಿನ ದೇವನಹಳ್ಳಿ ಸಮೀಪವಿರುವ ಚಿರಂಜೀವಿಯ ಪ್ರಕೃತಿ ಫಾರ್ಮ್ ಹೌಸ್ ನಲ್ಲಿ ತನ್ನ ಬಾಲ್ಯದ ಗೆಳೆಯ ಕಲ್ಯಾಣ್ ರನ್ನು ವರಿಸಿದರು.
ಏಪ್ರಿಲ್ 17, 2016ರಂದು ರಾಜ್ ಕೋಟ್ ನಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ತಮ್ಮ ಗೆಳತಿ ರಿವಾ ಸೋಲಂಕಿರನ್ನು ಬಂಧು ಬಾಂಧವರ ಸಮಾಕ್ಷಮದಲ್ಲಿ ವಿವಾಹವಾದರು.
ಏಪ್ರಿಲ್ 30, 2016ರಂದು ಬಾಲಿವುಡ್ ನಟಿ ಬಿಪಾಶಾ ಬಸು ಅವರು ನಟ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಜೂನ್ 27, 2016ರಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಸ್ಥಾನದ ಡುಂಗರಪುರ್ ರಾಜಮನೆತನದ ತ್ರಿಷಿಕಾ ಕುಮಾರಿ ಸಿಂಗ್ ಅವರೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರು.
ಆಗಸ್ಟ್ 28, 2016ರಂದು ಕನ್ನಡಿಗ ಕ್ರಿಕೆಟರ್ ಅಭಿಮನ್ಯು ಮಿಥುನ್ ಅವರು ತಮಿಳು ಚಿತ್ರನಟಿ ರಾಧಿಕಾ ಶರತ್ ಕುಮಾರ್ ಅವರ ಪುತ್ರಿ ರಯಾನೆಯನ್ನು ವರಿಸಿದ್ದಾರೆ.
ನವೆಂಬರ್ 16, 2016ರಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಬ್ರಹ್ಮಣಿ-ರಾಜೀವ್ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು.
ನವೆಂಬರ್ 24, 2016ರಂದು ಮಲಯಾಳಂನ ಖ್ಯಾತ ತಾರಾ ಜೋಡಿ ದಿಲೀಪ್ ಮತ್ತು ಕಾವ್ಯ ಮಾಧವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.
ನವೆಂಬರ್ 30, 2016ರಂದು ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಬ್ರಿಟನ್-ಮಾರಿಷಸ್ ಮೂಲದ ಮಾಡೆಲ್ ಮತ್ತು ನಟಿ ಹಜೆಲ್ ಕೀಚ್ ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದ ಪ್ರಕಾರ ವಿವಾಹವಾದರು.
ಡಿಸೆಂಬರ್ 9, 2016ರಂದು ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.