ಹಾಲಿನ ದರ ಹೆಚ್ಚಳ ಪ್ರಸ್ತಾವ ಇಲ್ಲ

ಹಾಲಿನ ದರ ಹೆಚ್ಚಳ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಎಚ್. ಎಸ್ ಮಹಾದೇವ ...
ಹಾಲು
ಹಾಲು

ಬೆಂಗಳೂರು: ಹಾಲಿನ ದರ ಹೆಚ್ಚಳ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಎಚ್. ಎಸ್ ಮಹಾದೇವ ಪ್ರಸಾದ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ವಲಯದಲ್ಲಿ ಚರ್ಚೆಗಳು ನಡೆದಿವೆ. ಆದರೆ ಇನ್ನೂ ಅಧಿಕೃತವಾಗಿ ಪ್ರಸ್ತಾವ ಸಲ್ಲಿಕೆಯಾಗಿಲ್ಲ. ಹೀಗಾಗಿ ಸದ್ಯಕ್ಕೆ ಹಾಲಿನ ದರ ಹೆಚ್ಚಿಸುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದರು.

ಬೇರೆ ರಾಜ್ಯದಲ್ಲಿನ ಪರಿಸ್ಥಿತಿಗೂ ನಮ್ಮಲ್ಲಿನ ಸ್ಥಿತಿಗೂ ತಾಳೆ ಹಾಕಿ ನೋಡಿರುವ ಕೆಎಂಎಫ್ ಅಧಿಕಾರಿಗಳು ರು. 3 -ರು.4 ಹೆಚ್ಚು ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ವರದಿ ಸಲ್ಲಿಕೆಯಾದ ನಂತರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ ಎಂದು ಹೇಳಿದರು.  ಕಬ್ಬು ಬೆಳೆಗಾರಿಗೆ  ಕಾರ್ಖಾನೆ ಮಾಲೀಕರು ಬಾಕಿ ನೀಡಬೇಕಿರುವ  ಹಿನ್ನೆಲೆಯಲ್ಲಿ  ಸೋಮವಾರ ಮಹತ್ವದ ಸಭೆ ನಡೆದಿದೆ. ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳೇನು ಎಂಬುದನ್ನು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಎಫ್ ಆರ್ ಪಿ ಆಧರಿಸಿ  ದರ ನಿಗದಿ ಮಾಡಿದ್ದರೂ ಬಾಕಿ ಪಾವತಿ ಮಾಡುವಾಗ ಪ್ರತಿ ಟನ್‌ಗೆ ರು.700 ಸಹಾಯಧನ ನೀಡಿದ್ದಾರೆ. ರಾಜ್ಯದಲ್ಲೂ ಸರ್ಕಾರ ಇದೇ ಮಾದರಿಯಲ್ಲಿ ನೆರವು ನೀಡಬೇಕು. ಇಲ್ಲವಾದರೆ ಸದ್ಯದ ಸ್ಥಿತಿಯಲ್ಲಿ ನಮಗೆ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದರು.

ರೈತರಿಗೆ ರು.25000 ಸಿಗಬೇಕು ಎಂಬುದು ನನ್ನ ನಿಲುವು. ಜನವರಿ 2 ರಂದು ಸಿಎಂ ಸಿದ್ಧರಾಮಯ್ಯ ಅವರ ಜತೆ ಸಕ್ಕರೆ  ಕಾರ್ಖಾನೆ ಮಾಲೀಕರ ಸಭೆ ನಡೆಯುವ ಸಾಧ್ಯತೆ ಇದೆ ಎಂದರು. ರಾಜ್ಯ ಸರ್ಕಾರ ನೀಡಿದ ಭರವಸೆಯಿಂದ ನುಣಚಿಕೊಂಡಿಲ್ಲ. ಕೆಲ ದಿನ ವಿಳಂಬವಾಗುತ್ತದೆಯಷ್ಟೆ. ಕೇಂದ್ರ ಸರ್ಕಾರದ ನೆರವೂ ಅಗತ್ಯ. ಆಮದು ಸುಂಕವನ್ನು ಶೇ. 40 ರಷ್ಟು ಹೆಚ್ಚಿಸುವಂತೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರಿಗೆ ರಾಜ್ಯ ಸರ್ಕಾರ ಮನವಿ ನೀಡಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದರು.

ರಾಜ್ಯದಲ್ಲಿ ಕಬ್ಬಿಗೆ ಬದಲಾಗಿ ಪರ್ಯಾಯ ಬೆಳೆ ಬೆಳೆಯುವತ್ತ ರೈತರು ಮುಂದಾಗಬೇಕೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಅವರು, ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಬೆಳೆದ ಕಬ್ಬು ಸಕಾಲದಲ್ಲಿ ಅರೆಯುವಂತಾಗಬೇಕು. ಆ ದಿಶೆಯಲ್ಲಷ್ಟೇ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com