ಈರುಳ್ಳಿ
ಈರುಳ್ಳಿ

ಈರುಳ್ಳಿ ರೈತರಿಗೆ ಸರ್ಕಾರ ಅಭಯ

ಹೈದರಾಬಾದ್ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನ.27ರಂದು ಸಂಪುಟ ಸಭೆ ನಡೆಸುವುದರ ...

ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು  ನ.27ರಂದು ಸಂಪುಟ ಸಭೆ ನಡೆಸುವುದರ ಜತೆಗೆ  ಮಳೆಯಿಂದ ಹಾನಿಗೆ ಒಳಗಾದ ಈರುಳ್ಳಿ ಬೆಳೆಗಾರರ ರಕ್ಷಣೆಗೆ ಧಾವಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬುಧವಾರ ನಡೆದ ಸಚಿವ ಸಂಪುಟ  ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಂಡ ಈರುಳ್ಳಿ ಬೆಲೆಗೆ ರು.36 ರಿಂದ ರು.40 ಕೋಟಿ ಸಹಾಯಧನ  ನೀಡಲು ನಿರ್ಧರಿಸಲಾಗಿದೆ.

ದಾವಣಗೆರೆ , ಧಾರವಾಡ, ಚಿತ್ರದುರ್ಗ, ಗದಗ ಹಾಗೂ ಬಳ್ಳಾರಿಯಲ್ಲಿ ವಾರ್ಷಿಕ 83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ  ಬಿತ್ತನೆ ನಡೆಯುತ್ತಿತ್ತು. ಆದರೆ ಈ ವರ್ಷ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಅತಿವೃಷ್ಟಿಯಿಂದಾಗಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಹಾನಿಯಾಗಿದ್ದು, ಕೇಂದ್ರ ಸರ್ಕಾರದ ನಿಯಮ ಪ್ರಕಾರ ವಾಣಿಜ್ಯ ಬೆಳೆಗೆ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ. ಆದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಲು ಮುಂದಾಗಿದ್ದು, ಸಂಪುಟ ಉಪಸಮಿತಿ ನೀಡಿದ ವರದಿ ಆಧರಿಸಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ರೈತರಿಗೆ ಸಹಾಯಧನ ನೀಡಲಾಗುತ್ತದೆ.

ಪ್ರತಿ ಹೆಕ್ಟೇರ್‌ಗೆ ರು.9000 ನೀಡಲಾಗುವುದು ಎಂದು ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸಂಪುಟ ಸಭೆಯ ವಿವರ

ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸಲು ಕೊನೆಗೂ ಸರ್ಕಾರದ ಒಪ್ಪಿಗೆ . ಡಿಸೆಂಬರ್ 9 ರಿಂದ 20ರ ವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ ಅಧಿವೇಶನ

ಭಾರತೀಯ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿಗೆ ಕಾನೂನು ಆಯೋಗ ನೀಡಿದ್ದ ಶಿಫಾರಸಿಗೆ ಒಪ್ಪಿಗೆ

ವಿದ್ಯುತ್ ಪ್ರಸರಣ ಮಾರ್ಗ ರಚನೆಯ ರಹದಾರಿ ಪಡೆಯಲು ಭೂ ಮಾಲೀಕರಿಗೆ ನೀಡುತ್ತಿದ್ದ ಪರಿಹಾರದ ಜತೆಗೆ ಎಕ್ಸಗ್ರೇಷಿಯಾ ನೀಡಲು ಒಪ್ಪಿಗೆ. ತೋಟಗಾರಿಕಾ ಬೆಳೆ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಮಾರ್ಗದರ್ಶಿ ಬೆಲೆಯ ಶೇ.100 , ಲೈನ್ ಎಳೆಯುವುದಕ್ಕೆ ಶೇ. 50 ನಗರ ಪ್ರದೇಶದಲ್ಲಿ ಟವರ್‌ಗೆ ಶೇ.100 ಹಾಗೂ ಲೈನ್ ಎಳೆಯುವುದಕ್ಕೆ ಶೇ.75ರಷ್ಟು ಎಕ್ಸಗ್ರೇಷಿಯಾ.

ಮಲೆ ಮಹದೇಶ್ವರ ಪ್ರಾಧಿಕಾರ ವ್ಯಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ರು. 37.37 ಕೋಟಿ ಬಿಡುಗಡೆ.
ರಾಜ್ಯದ 189 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ ಊರು ನಮ್ಮ ಗ್ರಾಮ ಯೋಜನೆಗೆ ಅನುಮೋದನೆ
ಬಿಬಿಎಂಪಿ ನಗರೋತ್ಥಾನ  ಯೋಜನೆ ಅನ್ವಯ ರು.1000 ಕೋಟಿ ಬಿಡುಗಡೆ. ಪ್ರತಿ ಕ್ಷೇತ್ರಕ್ಕೆ ರು.40 ಲಕ್ಷ ಹಂಚಿಕೆ

ಶಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಆಸ್ತಿ ರಕ್ಷಿಸಿ ಅಭಿವೃದ್ಧಿಗೆ ಒಪ್ಪಿಗೆ. ಮೇಕೆದಾಟು ಹೊರತು ಪಡಿಸಿ ಒಟ್ಟು 18 ಸ್ವತ್ತು ಖಾಸಗಿಯವರಿಗೆ ಒಪ್ಪಿಸುವುದಕ್ಕೆ ನಿರ್ಧಾರ

Related Stories

No stories found.

Advertisement

X
Kannada Prabha
www.kannadaprabha.com