
ನವದೆಹಲಿ: ಅಖಿಲ ಭಾರತ ನ್ಯಾಯಾಂಗ ಸೇವಾ ವ್ಯವಸ್ಥೆ ಸೃಷ್ಟಿಸುವುದಕ್ಕೆ ಒಪ್ಪುವುದಿಲ್ಲ ಎಂದು ಕರ್ನಾಟಕ ಸರ್ಕಾರ ಪುನರುಚ್ಚರಿಸಿದೆ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮತ್ತು ಸರ್ಕಾರ ಒಲವು ಹೊಂದಿಲ್ಲ ಎನ್ನುವುದನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಭಾನುವಾರ ದೆಹಲಿಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನ್ಯಾಯಾ ಮೂರ್ತಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಸರ್ಕಾರದ ನಿಲುವನ್ನು ಪ್ರತಿಪಾದಿಸಿದ್ದಾರೆ. ನ್ಯಾಯಾಂಗ ಇಲಾಖೆಗೆ ಎಲ್ಲ ಮೂಲ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಿದೆ.
ಪ್ರಸಕ್ತ ಬಜೆಟಲ್ಲಿ ರು. 344 ಕೋಟಿ ನೀಡಲಾಗಿದೆ ಎಂದರು. ಜಿಲ್ಲಾ ನ್ಯಾಯಾಧೀಶರ ನೇಮಕ ಮಾಡಲು ಏಕರೂಪ ಮಾನದಂಡ ರೂಪಿಸಲುವ ನಿಟ್ಟಿನಲ್ಲಿ ಬಾರ್ ಕೌನ್ಸಿಲ್ ಮತ್ತು ನ್ಯಾಯಾಂಗ ಅಕಾಡೆಮಿ ನೆರವು ಪಡೆಯಲಾಗಿದೆ ಎಂದರು. ವ್ಯಾಜ್ಯಗಳಿವೆ: ಕರ್ನಾಟಕದಲ್ಲಿ 1.28 ಲಕ್ಷ ಚೆಕ್ ಬೌನ್ಸ್ ವ್ಯಾಜ್ಯಗಳಿವೆ. ಅವುಗಳನ್ನು ಪರ್ಯಾಯ ವ್ಯಾಜ್ಯ ಪರಿಹಾರ (ಎಡಿಆರ್) ವ್ಯವಸ್ಥೆ ಅಡಿ ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡುವ ನೆಗೊಷಿಯಬಲ್ ಇನ್
ಸ್ಟ್ರುಮೆಂಟ್ ಕಾಯ್ದೆಗೆ ತಿದ್ದುಪಡಿ ಮತ್ತು ವಾಹನ ಅಪಘಾತ ಪರಿಹಾರ ವ್ಯಾಜ್ಯಗಳ ಪರಿಹಾರಕ್ಕೆ ಅವಕಾಶ ಕೊಡುವ ಉದ್ದೇಶಿತ ಮೋಟಾರು ವಾಹನಗಳ ತಿದ್ದುಪಡಿ ಕಾಂುÉ್ದು
ಅಂಗೀಕಾರವಾಗುವುದನ್ನು ನಿರೀಕ್ಷಿಸುತ್ತಿ ದ್ದೇವೆ ಎಂದರು. ಹೈಕೋರ್ಟ್ ಸೂಚನೆ ಯಂತೆ ಕರ್ನಾಟಕ ಸರ್ಕಾರ ದೇಶಿಯ ಮತ್ತು ಅಂಕಾರಾಷ್ಟ್ರೀಯ ಪಂಚಾಯ್ತಿ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆದಿದೆ. ರಾಜ್ಯದ 854 ಕೋರ್ಟ್‍ಗಳ ಪೈಕಿ 776 ಕೋರ್ಟ್‍ಗಳಲ್ಲಿ ಇ-ಕೋರ್ಟ್‍ಗ ವ್ಯವಸ್ಥೆ ಜಾರಿಗೆ ತರಲಾಗಿದೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಮಾತುಕತೆ ಬೇಕು: ಬಾಕಿ ಪ್ರಕರಣಗಳು ಸೇರಿ ನ್ಯಾಯ ನೀಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರದ ವಿಚಾರದಲ್ಲಿ ನ್ಯಾಯಾಂ ಗ, ಶಾಸಕಾಂಗ ಹಾಗೂಕಾರ್ಯಾಂಗಗಳ ನಡುವೆ ಸಾಂಸ್ಥಿಕ ಮಾತುಕತೆ ಹಾಗೂ ಪರಸ್ಪರ ಸಹಭಾಗಿತ್ವದ ಪ್ರಯತ್ನ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಹೇಳಿದ್ದಾರೆ. ನ್ಯಾಯಾಂಗ ಮತ್ತು ಸಂಸತ್ತು ಸಹೋದರರಿದ್ದಂತೆ. ಇವೆರಡೂ ಪ್ರಜಾಪ್ರಭುತ್ವದ ಕೂಸು. ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗಗಳು ನ್ಯಾಯ ನೀಡಿಕೆಯಲ್ಲಿ ಸಮಾನ ಪಾಲುದಾರರು. ಮೂರೂ ಅಂಗಗಳು ಪರಸ್ಪರ ಕೈಜೋಡಿಸಬೇಕು ಎಂದು ನ್ಯಾ. ದತ್ತು ಹೇಳಿದ್ದಾರೆ.
Advertisement