ಖಾಸಗಿ ಮೀಸಲು; ಗಂಭೀರ ಚರ್ಚೆಯಾಗಲಿ

ಜಾತಿ ವ್ಯವಸ್ಥೆ ಹೋಗುವವರೆಗೂ ಮೀಸಲು ನೀಡುವಂತೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ...
Caste reservation
Caste reservation

ಬೆಂಗಳೂರು: ಖಾಸಗಿ ಕ್ಷೇತ್ರದಲ್ಲಿ ಜಾತಿ ಮೀಸಲು ನೀಡುವ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಾತಿ ವ್ಯವಸ್ಥೆ ಹೋಗುವವರೆಗೂ ಮೀಸಲು ನೀಡುವಂತೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೀಸಲು ನೀಡುವುದರಿಂದ ಮಾತ್ರ ಜಾತಿವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಕ್ರಮೇಣವಾಗಿ ಮೀಸಲು ಮಹತ್ವವೂ ಕಡಿಮೆಯಾಗುತ್ತಿದೆ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆ ಯಾಗಿದ್ದು, ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಕೆಲಸಕ್ಕಿಂತ ಖಾಸಗಿ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದೆ. ಆದರೆ, ಖಾಸ ಗಿಯಲ್ಲಿ ಮೀಸಲು ವ್ಯವಸ್ಥೆಯಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಿಸಮಾನತೆ ಸೃಷ್ಟಿಯಾಗಲು ಖಾಸಗಿ ಕ್ಷೇತ್ರದಲ್ಲೂ ಮೀಸಲು ನೀಡುವ ಬಗ್ಗೆ ಚರ್ಚೆಯಾಗಬೇಕಿದೆ ಎಂದರು. ಡಾ.ಬಾಬು ಜಗಜೀವನರಾಂ 108ನೇ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. `ಚಲನಶೀಲತೆ ಇಲ್ಲದ ಜಾತಿಯಿಂದಾಗಿ ಎಷ್ಟೇ ಹೋರಾಟ ನಡೆದರೂ ಜನರಿಗೆ ಅಂಟಿರುವ ಜಾತಿ ಹಣೆಪಟ್ಟಿ ಬದಲಾಗುತ್ತಿಲ್ಲ. ವರ್ಗರಹಿತ, ಜಾತಿರಹಿತ ವ್ಯವಸ್ಥೆ ನಿರ್ಮಿಸಲು ಕೆಳವರ್ಗದ ಜನರಿಗೆ ಹೆಚ್ಚಿನ ಅವಕಾಶ ಹೆಚ್ಚಿನ ನೀಡಬೇಕು. ಕಾಯಕ-ದಾಸೋಹದ ಮೂಲಕ ಸಮಾನತೆ ತರಲು ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ತರಲಾಯಿತು. ಇತ್ತೀಚೆಗೆ ತಂದಿರುವ ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆಯಿಂದ ಕೆಳಜಾತಿಗೆ ನೀಡಬೇಕಾದ ಯೋಜನೆಯ ಹಣದ ದುರ್ಬಳಕೆ ತಪ್ಪಿದೆ' ಎಂದರು. ಬಯಲುಸೀಮೆ ಜನರಿಗೆ ಸರ್ಕಾರ ಕುಡಿಯುವ ನೀರು ನೀಡಲಿದೆ. ಎತ್ತಿನಹೊಳೆ ಹಾಗೂ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಭರವಸೆ ನೀಡಿದರು. ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್. ಮುನಿಸ್ವಾಮಿ ಅವರಿಗೆ `ಡಾ.ಬಾಬು ಜಗಜೀವನರಾಂ
ಪ್ರಶಸ್ತಿ' ಪ್ರದಾನ ಮಾಡಲಾಯಿತು. ಪ್ರಶಸ್ತಿಯು ರು. 5 ಲಕ್ಷ ನಗದು ಹಾಗೂ ಬಂಗಾರದ ಪದಕ ಒಳಗೊಂಡಿದೆ. ಸಂಸದ ಕೆ.ಎಚ್.ಮುನಿಯಪ್ಪ, ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಡಾ. ಸಿದ್ದಲಿಂಗಯ್ಯ, ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್ ಹಾಜರಿದ್ದರು.



ಸದಾಶಿವ ವರದಿ ಅನುಷ್ಠಾನ: ಮುಖ್ಯಮಂತ್ರಿ
ನ್ಯಾ.ಸದಾಶಿವ ಆಯೋ ಗದ ವರದಿ ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ ಕೇಂದ್ರ ಸರ್ಕಾರಕ್ಕೆಕಳುಹಿಸಲಾಗುತ್ತದೆ. ವರದಿ ಅನುಷ್ಠಾನಗೊಳುಸಲು ಪೂರ್ಣ ಬೆಂಬಲ ನೀಡುವ ಬಗ್ಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಮತ್ತೆ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಚರ್ಚಿಸಲಾಗುವುದು. ಚರ್ಚೆ ಬಳಿಕ ತೀರ್ಮಾ ನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಸಂಸತ್ತಿನಲ್ಲಿ ಚರ್ಚೆಯ ಮೂಲಕ ಕೇಂದ್ರ ಸರ್ಕಾರವೇ ವರದಿಗೆ ಒಪ್ಪಿಗೆ ನೀಡಬೇಕಿದೆ. ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ವರದಿ ಅನುಷ್ಠಾನಕ್ಕೆ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸಿಎಂ ಜತೆ ದಲಿತರು: ಸಚಿವ ಆಂಜನೇಯ
ಸಚಿವ ಎಚ್.ಆಂಜನೇಯ ಮಾತನಾಡಿ, `ಬಾಬು ಜಗಜೀವನರಾಂ ತಮ್ಮ ಜೀವನದುದ್ದಕ್ಕೂ ದಲಿತರಿಗಾಗಿ ದುಡಿದರು. ಇದೇ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗಾಗಿ ಸಾಕಷ್ಟು ಯೋ ಜನೆ ತಂದಿದ್ದಾರೆ. ರಾಜ್ಯದಲ್ಲಿ ಜನಸಂಖ್ಯೆ ಆಧಾರದಲ್ಲಿ ಯೋ ಜನೆಯ ಲಾಭ ನೀಡಲು ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ. ದೇಶದಲ್ಲಿ ಯÁವ ರಾಜ್ಯವೂ ಈ ಸಾಧನೆ ಮಾಡಿಲ್ಲ. ಬ್ರಿಟಿಷರ ಕಾಲದಲ್ಲಿ ನಡೆದಿದ್ದ ಸಮೀಕ್ಷೆಯನ್ನೇ ಆಧಾರವಾಗಿರಿಸಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಮುಂದೆ ನಡೆಸಲಿರುವ ಸಮೀಕ್ಷೆಯಿಂದ ಕಟ್ಟಕಡೆಯ ವ್ಯಕ್ತಿಗೆ  ಯೋಜನೆಯ ಲಾಭ ದೊರೆಯಲಿದೆ. ಆದರೆ ದಲಿತರಿಗೆ ಏನೂ ಮಾಡಿಲ್ಲ ಎಂಬ ಅಪಸ್ವರ ಕೇಳಿಬರುತ್ತಿದೆ. ದಲಿತರು ಕೂಡಾ ಮುಖ್ಯಮಂತ್ರಿಗಳೊಂದಿಗಿದ್ದಾರೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com