ಅಕ್ರಮ-ಸಕ್ರಮ ಪ್ರಮಾಣ ಹೆಚ್ಚಳ

ಗ್ರಾಪಂ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಗ್ರಾಮೀಣ ಅಕ್ರಮ-ಸಕ್ರಮ ಕಾಯ್ದೆ ವ್ಯಾಪ್ತಿಯಲ್ಲಿಬರುವ ಪ್ರದೇಶ...
ವಿಧಾನ ಪರಿಷತ್‍
ವಿಧಾನ ಪರಿಷತ್‍

ವಿಧಾನಸಭೆ: ಗ್ರಾಪಂ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಗ್ರಾಮೀಣ ಅಕ್ರಮ-ಸಕ್ರಮ ಕಾಯ್ದೆ ವ್ಯಾಪ್ತಿಯಲ್ಲಿಬರುವ ಪ್ರದೇಶ ಪ್ರಮÁಣವನ್ನು ಹೆಚ್ಚಿಸಲು
ಮುಂದಾಗಿದೆ. ವಿಧಾನ ಪರಿಷತ್‍ನಲ್ಲಿ ಬಿಬಿಎಂಪಿ ವಿಭಜನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಸರ್ಕಾರ ಪಂಚಾಯ್ತಿ ರಾಜಕಾರಣಕ್ಕೆ ಅನುಕೂಲವಾಗುತ್ತದೆ
ಎಂಬ ದೃಷ್ಟಿಯಿಂದ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ-2015ನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸಕ್ರಮ ಜಾರಿಗೊಳಿಸುವ ಉದ್ದೇಶದಿಂದ ಸರ್ಕಾರ ಈಗಾಗಲೇ ಕಂದಾಯ ಇಲಾಖೆಯ 94 ಸಿ ನಿಯಮಕ್ಕೆ ತಿದ್ದುಪಡಿ ತಂದಿದೆ. ಇದರ ಪ್ರಕಾರ ಗ್ರಾಮಾಂತರ ಪ್ರದೇಶದ ಸರ್ಕಾರಿ ಭೂಮಿಯಲ್ಲಿ 2400 ಚದರ ಅಡಿ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅದನ್ನು ಸಕ್ರಮಗೊಳಿಸಲಾಗುತ್ತದೆ. ಆದರೆ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಮಂಡಿಸಿರುವ ಹೊಸ ವಿಧೇಯಕದ ಪ್ರಕಾರ ಅಕ್ರಮ-ಸಕ್ರಮದ ಪ್ರದೇಶವನ್ನು 4000 ಚದರ ಅಡಿಗೆ ವಿಸ್ತರಿಸಲಾಗುತ್ತದೆ. 94 ಸಿ ಜತೆಗೆ 95 ನಿಯಮಕ್ಕೂ ಇದೇ ಸಂದರ್ಭದಲ್ಲಿ ತಿದ್ದುಪಡಿ ತರಲಾಗಿದೆ. ಇದು ಭೂ ಪರಿವರ್ತನೆಗೆ ಸಂಬಂಧಿಸಿದ್ದು. ಅಕ್ರಮ -ಸಕ್ರಮ ವ್ಯಾಪ್ತಿಗೆ ಒಳಪಡುವ ಪ್ರದೇಶದ ಭೂ ಒಡೆತನವು 20 ಗುಂಟೆ ಮತ್ತು ಅದಕ್ಕಿಂತ ಕಡಿಮೆ ಇದ್ದಾಗ ಅರ್ಜಿ ಸ್ವೀಕರಿಸಿದ ಎರಡು ತಿಂಗಳೊಳಗೆ
ಜಿಲ್ಲಾ„ಕಾರಿ ತನ್ನ ನಿರ್ಧಾರ ತಿಳಿಸಲು ವಿಫಲನಾದರೆ ಅರ್ಜಿ ಮಂಜೂರಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಭೂ ವಿಸ್ತೀರ್ಣ 20 ಗುಂಟೆಗಿಂತ ಹೆಚ್ಚಾದಲ್ಲಿ ಅರ್ಜಿ ಸ್ವೀಕರಿಸಿದ
ನಾಲ್ಕು ತಿಂಗಳೊಳಗೆ ಜಿಲ್ಲಾಧಿಕಾರಿ ತನ್ನ  ಅನುಮತಿ ನೀಡದಿದ್ದರೆ ಅರ್ಜಿ ಮಂಜೂರಾಗಿದೆ ಎಂದು ಭಾವಿಸಬೇಕಾಗುತ್ತೆ. ಈ ತಿದ್ದುಪಡಿ ಸರ್ಕಾರ ಪ್ರಕಾರ ಸಕ್ರಮಗೊಳಿಸಿದ ಭೂಮಿಯನ್ನು ಕೇವಲ ಕೃಷಿ ಉದ್ದೇಶದ ತೋಟದ ಮನೆ ನಿರ್ಮಾಣಕ್ಕೆ ಮಾತ್ರ ಬಳಸಬೇಕು. ತೋಟದ ಮನೆ ಎಂಬ ಶಬ್ದ ವಾಣಿಜ್ಯ ಉದ್ದೇಶಕ್ಕೆಬಳಕೆಯಾಗುವಂತಿಲ್ಲ.  10 ಗುಂಟೆ ಭೂಮಿಗೆ ಮಾರ್ಗಸೂಚಿ ಬೆಲೆಯ ಶೇ.10ರಷ್ಟನ್ನು ರೈತರು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com