

ವಿಧಾನಪರಿಷತ್ತು: ಬಿಬಿಎಂಪಿಯ ವಾರ್ಡ್‍ಗಳು ಅವೈಜ್ಞಾನಿಕವಾಗಿದ್ದರೆ ಅವುಗಳನ್ನು ಮರು ಹಂಚಿಕೆ ಮಾಡಿರಿ. ಆದರೆ ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ವಿಭಜನೆ ಮಾಡಿ ಬೆಂಗಳೂರನ್ನು ಶಾಪಗ್ರಸ್ತಗೊಳಿಸಬೇಡಿ ಎಂದು ಬಿಜೆಪಿ ಸದಸ್ಯವಿ.ಸೋಮಣ್ಣ ಹೇಳಿದ್ದಾರೆ. ಪಾಲಿಕೆಗಳ ತಿದ್ದುಪಡಿ ವಿಧೇಯಕಗಳ ಮೇಲಿನ ಚರ್ಚೆ ನಡೆಸಿ, `ಯಾವುದೇ ಕಾರಣಕ್ಕೂಯಾರದೋ ಹೆಸರಿನಲ್ಲಿ ವಿಭಜನೆಗೆ ಅವಕಾಶ ನೀಡಬಾರದು' ಎಂದು ವಾದಿಸಿದರು. ಬಿಬಿಎಂಪಿ ವಿಭಜನೆ ಸಂಬಂಧ ಹಿರಿಯ ಅ„ಕಾರಿಗಳಾದ ಬಿ.ಎಸ್.ಪಾಟೀಲ್ ಮತ್ತು ಸಿದ್ದಯ್ಯರನ್ನು ನೇಮಿಸಲಾಗಿತ್ತು. ಆದರೆ, ಅವರ ಸಲಹೆಗಳನ್ನೇ ಪಡೆದಿಲ್ಲ. ಅವರೊಂದಿಗೆ ಸಂವಾದ ನಡೆಸಿಲ್ಲ. ವಿಭಜನೆ ವಿಚಾರದಲ್ಲಿ ಸರ್ಕಾರ ತಜ್ಞರ ಸಮಿತಿಯನ್ನು ಸಂಪೂರ್ಣ ಕತ್ತಲಲ್ಲೆ ಇರಿಸಿದೆ. ತರಾತುರಿಯಲ್ಲಿ ನಿರ್ಧಾರ ಮಾಡಿದೆ. ಹೀಗಾಗಿ ತಜ್ಞರ ಸಮಿತಿ ಅತ್ಯಂತ ಕೆಟ್ಟ ಹಾಗೂ ಅವೈಜ್ಞಾನಿಕ ವರದಿ ನೀಡಿದ್ದು, ಇದನ್ನಾಧರಿಸಿ ವಿಭಜನೆ ಮಾಡ ಬಾರದು. ಇದರಿಂದ ಕೆಂಪೇಗೌಡರ ಬೆಂಗಳೂರು ನಾಶವಾಗುತ್ತದೆಂದು ಆತಂಕ ವ್ಯಕ್ತಪಡಿಸಿದರು.
ಬಿಬಿಎಂಪಿ ಬೇಡ ಎಂದಿದ್ದ ಸೋಮಣ್ಣ
ಬಿಬಿಎಂಪಿ ಅಗತ್ಯವನ್ನು ಎತ್ತಿ ಹಿಡಿಯುತ್ತಿದ್ದ ಸೋಮಣ್ಣ, ಹಿಂದಿನ ಕಾಂಗ್ರೆಸ್ ಆಡಳಿತದ ಹುಳುಕುಗಳನ್ನು ಹೊರ ಹಾಕಿದರು. ಆಗ ಆಕ್ಷೇಪ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸೋಮಣ್ಣ ಈಗ ವಿಭಜನೆ ಬೇಡ ಎನ್ನುತ್ತಿದ್ದಾರೆ. ಆದರೆ ಹಿಂದೆ ಬಿಜೆಪಿ ಸರ್ಕಾರ, ಬಿಬಿಎಂಪಿ ರಚಿಸುವಾಗ ಕಾಂಗ್ರೆಸ್‍ನಲ್ಲಿದ್ದ ಸೋಮಣ್ಣ ಕೂಡ ಇದರ
ವಿರುದಟಛಿ ಹೋರಾಡಿದ್ದರು ಎಂದು ಹೇಳಿದರು. ಇದಕ್ಕೆ ಸೂಕ್ತ ಉತ್ತರ ನೀಡಲಾಗದ ಸೋಮಣ್ಣ, `ಅಂದಿನ ಜನ ಸಂಖ್ಯೆ, ಸ್ಥಿತಿಯೇ ಬೇರೆ ಇತ್ತು. ಈಗಿನ ಸಮಸ್ಯೆಗಳೇ
ಬೇರೆ' ಎಂದು ಹೇಳಿದರು. ಒಂದು ಹಂತದಲ್ಲಿ ಸೋಮಣ್ಣ ಕೂಡ ಬಿಬಿಎಂಪಿ ಆಡಳಿತ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಎರಡು ವರ್ಷಗಳಿಂದೀಚೆಗೆ ಬಿಬಿಎಂಪಿ ಆಡಳಿತ ಹದ
ಗೆಟ್ಟಿದೆ ಎಂದರು.