ಭೂ ಅಕ್ರಮ ಪ್ರಕರಣಕ್ಕೆ ಮತ್ತೆ ಜೀವ: ಅಡಿ ಅಳಿಯನ ವಿರುದ್ಧ ಕೇಸ್ ದಾಖಲು

ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಅಳಿಯ ಕೆಎಎಸ್ ಅಧಿಕಾರಿ ಜಿ.ಎಂ ವಗಂಗಾಧರ ಸ್ವಾಮಿ ಸೇರಿದಂತೆ 13 ಮಂದಿ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ...
ಸುಭಾಷ್ ಬಿ. ಅಡಿ
ಸುಭಾಷ್ ಬಿ. ಅಡಿ

ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಅಳಿಯ ಕೆಎಎಸ್ ಅಧಿಕಾರಿ ಜಿ.ಎಂ ವಗಂಗಾಧರ ಸ್ವಾಮಿ ಸೇರಿದಂತೆ 13 ಮಂದಿ  ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದಾಖಲಾಗಿದ್ದ ಭೂ ಅಕ್ರಮ ಪ್ರಕರಣ ಮರುಜೀವ ಪಡೆದುಕೊಂಡಿದೆ. ಬೊಮ್ಮನಹಳ್ಳಿ ನಗರಸಭೆ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ ಎಂಬುವರು ಸೋಮವಾರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಪ್ರಕರಣದ ಎಫ್  ಐಆರ್ ದಾಖಲಾಗಿ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಪ್ರಮುಖ ಆರೋಪಿ ಅಂದಿನ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಹೈಕೋರ್ಟ್ ಮೊರೆ ಹೋಗಿದ್ದರು. ಸರ್ಕಾರದ ಉನ್ನತ ಅಧಿಕಾರಿಯ ಪಾಸಿಕ್ಯೂಷನ್‍ಗೆ ಸರ್ಕಾರದ ಅನುಮತಿ ಪಡೆಯದೇ ಲೋಕಾಯುಕ್ತ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು
ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು. ಆದರೆ, ಪ್ರಕರಣದಲ್ಲಿ ದೂರುದಾರರು ಅಗತ್ಯ
ಪ್ರಕ್ರಿಯೆ ಪೂರ್ಣಗೊಳಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ಆದೇಶಿಸಿದ್ದರು. ಆದರೆ, ದೂರುದಾರ ಮಾರ್ಕಂಡೇಯ ಎಸ್.ಗೊಂಬೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿಯವರಿಗೆ ದೂರು ನೀಡಿದ್ದೇನೆ ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ . ದೂರು ಸ್ವೀಕರಿಸಿರುವ ಸೋನಿಯಾ ನಾರಂಗ್, ಪ್ರಕರಣದಲ್ಲಿ ಯಾವ ರೀತಿ ಮುಂದುವರೆಯಬೇಕು ಎನ್ನುವುದರ ಬಗ್ಗೆ ಕಾನೂನು ಘಟಕಕ್ಕೆ ಪತ್ರ ಬರೆದು ಅಭಿಪ್ರಾಯ ಕೋರಿದ್ದಾರೆ. ವಿನಾಯಕ ಹೌಸ್ ಬಿಲ್ಡಿಂಗ್ ಸೊಸೈಟಿ ಯಶವಂತಪುರ ಹೋಬಳಿ ನಾಗರಬಾವಿ ಗ್ರಾಮದಲ್ಲಿ 78 ಎಕರೆಯಲ್ಲಿ ಬಡಾವಣೆ ನಿರ್ಮಿಸಿತ್ತು. ಈ ಪೈಕಿ ಎರಡು ಎಕರೆ ಜಮೀನು ಎಸ್‍ಸಿ ಎಸ್ಟಿಗೆ ಮೀಸಲಾಗಿತ್ತು. ಆದರೆ, ಈ ಜಮೀನನ್ನು ಒಡತಿ ಗಾಳಿ ಹನುಮಮ್ಮ, ಮತ್ತೊಮ್ಮೆ ಜಮೀನು ಮಾರಾಟಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಅಭಿಪ್ರಾಯ ಕೋರಿ ಸರ್ಕಾರ ಜಿಲ್ಲಾಧಿಕಾರಿಗೆ ಪತ್ರ
ಬರೆದಿತ್ತು. ಸರ್ಕಾರದಿಂದ ನೋಟಿಫೈ ಆಗಿದ್ದ ಜಮೀನನ್ನು ಸರ್ಕಾರ ಹೊರತು ಪಡಿಸಿ ಖಾಸಗಿ ವ್ಯಕ್ತಿಗಳು ಮರು ಮಾರಾಟ ಮಾಡುವಂತಿಲ್ಲ ಎಂದು ತಿಳಿದಿದ್ದರೂ ಜಿಲ್ಲಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿ ಜಮೀನು ಮಾರಾಟ ಮಾಡಬಹುದೆಂದು ಸರ್ಕಾರಕ್ಕೆ ವರದಿ ನೀಡಿದ್ದರು. ಈ ಬಗ್ಗೆ ಮಾರ್ಕಂಡೇಯ ಎನ್ನುವವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು, ಅಂದಿನ ವಿಶೇಷ ಜಿಲ್ಲಾ„ಕಾರಿ ಜಿ.ಎಸ್.ನಾಯಕ್, ಬೆಂಗಳೂರು ನಗರ ಜಿಲ್ಲಾ„ಕಾರಿ ಎಂ.ಕೆ.ಅಯ್ಯಪ್ಪ, ವಿಶೇಷ ತಹಸೀಲ್ದಾರ್  ಆರ್.ಕೃಷ್ಣಯ್ಯ, ಎ.ಎಸ್.ಪಾಟೀಲ್, ತಹಸೀಲ್ದಾರ್ ಬಿ.ಶಿವಸ್ವಾಮಿ, ಸಹಾಯಕ ಕಮೀಷನರ್ ಜಿ.ಎಂ. ಗಂಗಾಧರ ಸ್ವಾಮಿ, ತಹಸೀಲ್ದಾರ್ ಆರ್.ಸುಮಾ, ಸರ್ವೇಯರ್ ಎಂ.ಎನ್.ಶ್ರೀನಿವಾಸರೆಡ್ಡಿ, ಖಾಸಗಿ ವ್ಯಕ್ತಿ ಗಾಳಿ ಹನುಮಮ್ಮ ಹಾಗೂ ಮಿರ್ಲೆ ವರದರಾಜು ವಿರುದಟಛಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com