ಹಿಂದುಳಿದ ತಾಲೂಕುಗಳಿಗೆ ಕೈಗಾರಿಕೆ: ಸಿದ್ದರಾಮಯ್ಯ

ಹೈದರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾರತೀಯ ಆವಿಷ್ಕಾರ ಸಮ್ಮೇಳನ ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ(ಕೆಪಿಎನ್) ಚಿತ್ರ
ಭಾರತೀಯ ಆವಿಷ್ಕಾರ ಸಮ್ಮೇಳನ ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ(ಕೆಪಿಎನ್) ಚಿತ್ರ

ಬೆಂಗಳೂರು: ಹೈದರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ನಗರದಲ್ಲಿ ಏರ್ಪಡಿಸಿರುವ `11ನೇ ಭಾರತೀಯ ಆವಿಷ್ಕಾರ ಸಮ್ಮೇಳನ'  ಉದ್ಘಾಟಿಸಿ ಮಾತನಾಡಿದರು. ಪ್ರಾದೇಶಿಕವಾಗಿ ಹಿಂದುಳಿದಿರುವ ಹೈ-ಕ ಸೇರಿದಂತೆ ಹಿಂದುಳಿದ ತಾಲೂಕು ಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಕೈಗಾರಿಕಾಬಿsವೃದಿಟಛಿಗೆ ಉತ್ತೇಜನ ನೀಡಲಾಗುವುದು. ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಒಟ್ಟಾರೆಬೆಳವಣಿಗೆಗೆ ಅಣಿಗೊಳಿಸಲಾಗುವುದು ಎಂದರು.

ಸಮಾಜದ ಎಲ್ಲ ವಿಭಾಗಗಳಲ್ಲಿಯೂ ಶ್ರಮದ ಹಂಚಿಕೆಯಾದರೆ ಆರ್ಥಿಕತೆ ತಾನಾಗಿಯೇ ವೃದ್ಧಿಸುತ್ತದೆ. ಮಾಜಿ ಸೈನಿಕರು, ಮಹಿಳೆಯರು ಸೇರಿದಂತೆ ಎಲ್ಲ ಸಮುದಾಯಗಳಲ್ಲೂ ಉದ್ಯಮ ಶೀಲರನ್ನಾಗಿ ಮಾಡಿದಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ರಾಜ್ಯ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದ್ದು `ಕರ್ನಾಟಕ ಪ್ರವಾಸೋದ್ಯಮ ನೀತಿ' ಜಾರಿಗೆ ತರಲಾಗಿದೆ. ರಾಜ್ಯವನ್ನು ಉತ್ತಮ ದರ್ಜೆಯ ಪ್ರವಾಸಿ ತಾನವಾಗಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಖಾಸಗಿ ಸಹಭಾಗಿತ್ವದಡಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಆಕರ್ಷಿಸಲಾಗುವುದು. ಹಸಿರು ಸಂರಕ್ಷಣೆಗೆ ಆದ್ಯತೆ ನೀಡುವುದರೊಂದಿಗೆ ಸೋಲಾರ್ ನೀತಿ ಪರಿಷ್ಕರಿಸಲಾಗಿದೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಪ್ರೋತ್ಸಾಹ ನೀಡುವುದು ಸರ್ಕಾರದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದರು.

ಸಿಐಐ ಕಾರ್ಯ ಶ್ಲಾಘನೀಯ: ರಾಜ್ಯದಲ್ಲಿ ಕೈಗಾರಿಕೆ ಅಬಿವೃದ್ಧಿಗೆ `ನೂತನ ಕೈಗಾರಿಕಾ ನೀತಿ ಜಾರಿಗೆ ತಂದಿದ್ದು, ಸರಿಸುಮಾರು ರೂ.5 ಲಕ್ಷ ಕೋಟಿ ಹೂಡಿಕೆಗೆ ಬೇಕಾದ ವಾತಾವರಣ ರೂಪಿಸಲಾಗಿದೆ.

ಸಿಐಐ ಸಹವರ್ತಿಯಾಗಿ ಕೆಲಸ ಮಾಡುತ್ತಿದೆ. ಸಿಐಐ 2005ರಿಂದ ಹಮ್ಮಿಕೊಂಡು ಬರುತ್ತಿರುವ `ಭಾರತೀಯ ಆವಿಷ್ಕಾರ ಶೃಂಗಸಭೆ ಈ ದಶಕದ ಮೈಲಗಲ್ಲಾಗಿದೆ ಎಂದು ಶ್ಲಾಘಿಸಿದರು. ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಮಾತನಾಡಿ, ಬೆಂಗಳೂರು ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಇನ್‍ಕ್ಯುಬೇಷನ್ ಕೇಂದ್ರ ಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉದ್ಯಮಶೀಲತಾ ತರಬೇತಿ ನೀಡುವ ಆಶಯ ಸರ್ಕಾರ ದ್ದಾಗಿದೆ ಎಂದು ತಿಳಿಸಿದರು.

ಸಿಐಐ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಆವಿಷ್ಕಾರ ಸಮ್ಮೇಳನದ ಮುಖ್ಯಸ್ಥ ಎಸ್.ಗೋಪಾಲಕೃಷ್ಣನ್ ಮಾತನಾಡಿ, ಈ ಶೃಂಗಸಭೆ ಸಂಪತ್ತು ಕ್ರೋಡೀಕರಣ ಹಾಗೂ ಮಧ್ಯಮ ವರ್ಗದ ದೇಶ ಎಂಬ ಹಣೆಪಟ್ಟಿಯಿಂದ ಭಾರತವನ್ನು ಹೊರ ತರುವುದು, ಸ್ಥಳೀಯ ಮಟ್ಟದಲ್ಲಿನ ಪ್ರತಿಭೆಗಳನ್ನು ಹೊರತೆಗೆಯಲು ಬೇಕಾದ ಕೌಶಲ್ಯಾಭಿವೃದ್ಧಿ ಮತ್ತು ವಿಫುಲ ಅವಕಾಶ ಕಲ್ಪಿ ಸುವ ಉದ್ದೇಶ ಹೊಂದಿದೆ ಎಂದರು. ಒಕ್ಕೂಟದ ಅಧ್ಯಕ್ಷ ಶೇಖರ್ ವಿಶ್ವನಾಥನ್ ಸ್ವಾಗತಿಸಿದರು. ಉಪಾಧ್ಯಕ್ಷ ರವಿ ರಾಘವನ್ ವಂದಿಸಿದರು. 500ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com