ನಿರ್ಮಾಪಕಿ ವಿಜಯಲಕ್ಷ್ಮಿಸಿಂಗ್ ನಾಮಪತ್ರ ಸಲ್ಲಿಕೆ

ಕೊನೆಯ ಪಟ್ಟಿಯಲ್ಲಿ ಚಿತ್ರ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಕಾವೇರಿಪುರದಿಂದ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬಸವನಗುಡಿಯಿಂದ ಹರಸಾಹಸ ಪಟ್ಟು ಟಿಕೆಟ್ ಪಡೆದಿರುವುದು ವಿಶೇಷ...
ವಿಜಯಲಕ್ಷ್ಮಿ ಸಿಂಗ್
ವಿಜಯಲಕ್ಷ್ಮಿ ಸಿಂಗ್
Updated on

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿಯ ಕೊನೆ ಪಟ್ಟಿ ಪ್ರಕಟಗೊಂಡಿದೆ. ಭಾನುವಾರ ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸದಸ್ಯರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಸೋಮವಾರ ಬೆಳಗ್ಗೆ ಬಿಡುಗಡೆಗೊಂಡಿತು. ಕೊನೆಯ ಪಟ್ಟಿಯಲ್ಲಿ ಚಿತ್ರ ನಿರ್ಮಾಪಕಿ ವಿಜಯಲಕ್ಷ್ಮಿ  ಸಿಂಗ್ ಕಾವೇರಿಪುರದಿಂದ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಬಸವನಗುಡಿಯಿಂದ ಹರಸಾಹಸ ಪಟ್ಟು ಟಿಕೆಟ್ ಪಡೆದಿರುವುದು ವಿಶೇಷ.

ಮತ್ತಿಕೆರೆ- ಜೈ ಪ್ರಕಾಶ್ ಎಂ.ಸಿ., ಮಲ್ಲೇಶ್ವರ- ಎನ್ .ಜಯಪಾಲ, ಗಾಯತ್ರಿನಗರ- ಧ್ರುತಿ ನಾಗರಾಜ್, ಗಂಗಾನಗರ- ಪ್ರಮೀಳಾ ಆನಂದ್, ಗಂಗೇನಹಳ್ಳಿ- ಎಂ.ನಾಗರಾಜು, ವಸಂತನಗರ- ಸಂಪತ್‍ಕುಮಾರ್, ಸಂಪಂಗಿರಾಮ ನಗರ- ಆನಂದ್, ದೊಮ್ಮಲೂರು- ಎ. ಮರಿಯಪ್ಪಸ್ವಾಮಿ, ವನ್ನಾರಪೇಟೆ- ಕೆ.ಶಿವಕುಮಾರ್, ನೀಲಸಂದ್ರ- ಮುತ್ತು, ಶಾಂತಿನಗರ- ಆರ್.ವಿ.ನಾಗರತ್ನ ಯಾದವ್, ದತ್ತಾತ್ರೇಯ ದೇವಸ್ಥಾನ- ದತ್ತಾ, ಸುಭಾಷ್ ನಗರ- ಎಸ್.ಬಾಬು, ಬಿನ್ನಿಪೇಟೆ- ಪುಷ್ಪಾ ರಾಣಿ, ಕಾವೇರಿಪುರ- ವಿಜಯಲಕ್ಷ್ಮಿ ಸಿಂಗ್, ಜಗಜೀವನರಾಮ್ ನಗರ- ಸರೋಜ ಚಂದ್ರಶೇಖರ್, ಆಜಾದ್ ನಗರ- ರಾಜಕುಮಾರಿ ಚಕ್ರಪಾಣಿ, ಬಸವನಗುಡಿ- ಬಿ.ಎಸ್. ಸತ್ಯನಾರಾಯಣ, ಪದ್ಮನಾಭ ನಗರ- ಎಲ್.ಶೋಭಾ ಆಂಜನಪ್ಪ, ಚಿಕ್ಕಲ್ಲಸಂದ್ರ- ಸುಪ್ರಿಯ ಶೇಖರ್, ಗುರಪ್ಪನಪಾಳ್ಯ- ಬಾಬಾಫಕ್ರುದ್ದೀನ್, ಕೆಂಪೇಗೌಡ ವಾರ್ಡ್- ಚಂದ್ರಮ್ಮ, ಚೌಡೇಶ್ವರಿ- ವಾಣಿಶ್ರೀ ವಿಶ್ವನಾಥ್, ಅಟ್ಟೂರು- ನೇತ್ರಾ ಪಲ್ಲವಿ, ಯಲಹಂಕ ಉಪನಗರ- ಎಂ.ಸತೀಶ್, ಎ.ನಾರಾಯಣಪುರ- ವಿ.ಸಿ.ರಾಜು, ಎಚ್ ಎಎಲ್ ವಿಮಾನ ನಿಲ್ದಾಣ- ಡಾ.ವೈ.ಆರ್.ಶಶಿಧರ್, ಥಣಿಸಂದ್ರ- ಸಾವಿತ್ರಮ್ಮ, ವಿದ್ಯಾರಣ್ಯಪುರ- ಕುಸುಮ, ದೊಡ್ಡಬೊಮ್ಮ ಸಂದ್ರ- ಜಯಲಕ್ಷ್ಮಿ ಪಿಳ್ಳಪ್ಪ, ಕೆಂಗೇರಿ- ವಿ.ವಿ.ಸತ್ಯನಾರಾಯಣ, ಹೆಮ್ಮಿಗೆಪುರ- ಡಿ.ಎಚ್. ರಾಮಚಂದ್ರ, ಜೆ.ಪಿ.ಉದ್ಯಾನವನ- ಮಮತಾ, ಯಶವಂತಪುರ- ಎ.ಶೇಖರ್, ಲಗ್ಗೆರೆ- ಟಿ.ಎಸ್.ವಿ.ಗಾಯತ್ರಿ, ಮುನೇಶ್ವರ ನಗರ- ಕಲಾವತಿ, ಆಡುಗೋಡಿ- ಜಾನಕಮ್ಮ, ಮಡಿವಾಳ- ಎನ್.ಬಾಬು, ಎಚ್‍ಎಸ್‍ಆರ್‍ಲೇ ಔಟ್- ಕೆ.ಗುರುಮೂರ್ತಿ ರೆಡ್ಡಿ, ಉತ್ತರಹಳ್ಳಿ- ಹನುಮಂತಯ್ಯ, ಬೇಗೂರು- ಸಿ.ಶ್ರೀನಿವಾಸ, ಸಿಂಗಸಂದ್ರ- ವಿ.ಶಾಂತಾ, ಎಚ್.ಬಿ.ಆರ್. ಲೇಔಟ್- ಕೆ.ನಾರಾಯಣಸ್ವಾಮಿ.

ಮಾಧ್ಯಮ ಪರಿಶೀಲನಾ ಸಮಿತಿ ರಚನೆ
ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಬಿಬಿಎಂಪಿ ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡದಲ್ಲಿ `ಮಾಧ್ಯಮ ಪರಿಶೀಲನಾ ಸಮಿತಿ' ರಚಿಸಲಾಗಿದೆ. ಪತ್ರಿಕೆ, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಮಾಡುವ ಚುನಾವಣಾ ಪ್ರಚಾರಗಳನ್ನು ಮಾಧ್ಯಮ ಪರಿಶೀಲನಾ ಸಮಿತಿಯಿಂದ ದೃಢೀಕರಿಸಿ ಪ್ರಚಾರ ಮಾಡಬೇಕು. ರಾಜಕೀಯ ಪಕ್ಷಗಳು, ಚುನಾವಣಾ
ಅಭ್ಯರ್ಥಿಗಳು ಮಾಧ್ಯಮಕ್ಕೆ ಜಾಹಿರಾತು ನೀಡಲು ಹಾಗೂ ಪ್ರಚಾರ ಸಾಮಗ್ರಿ ಬಳಸಲು ಸಮಿತಿಯ ಅನುಮತಿ ಪಡೆದುಕೊಳ್ಳಬೇಕು. ಚುನಾವಣಾ ಜಾಹಿರಾತು ಪ್ರಮಾಣಿಕರಿಸಲು ಪ್ರಚಾರದ ಆರಂಭಕ್ಕೆ 3 ದಿನ ಮುಂಚಿತವಾಗಿ ಸಮಿತಿಗೆ ಅರ್ಜಿಗಳನ್ನು ಸಲ್ಲಿಸಬೇಕು. ರಾಜಕೀಯ ಪಕ್ಷಗಳ ಹೊರತಾಗಿ ಇತರೆ ವ್ಯಕ್ತಿಗಳು 7 ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಅನುಬಂಧ-1 ಮತ್ತು ಜಾಹೀರಾತಿನ ಸಿಡಿ, ದೃಢೀಕೃತ ಸಂಭಾಷಣೆಯ ಹಸ್ತ ಪ್ರತಿಗಳನ್ನು ದ್ವಿ ಪ್ರತಿಯಲ್ಲಿ ಸಮಿತಿಗೆ ಸಲ್ಲಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com