ಕಾಂಗ್ರೆಸ್ ಅಭ್ಯರ್ಥಿಯಿಂದ ದುಂಡಾ ವರ್ತನೆ ಆರೋಪ
ಕಾಂಗ್ರೆಸ್ ಅಭ್ಯರ್ಥಿಯಿಂದ ದುಂಡಾ ವರ್ತನೆ ಆರೋಪ

ಕಾಂಗ್ರೆಸ್ ಅಭ್ಯರ್ಥಿಯಿಂದ ದುಂಡಾ ವರ್ತನೆ: ಅವಧಿ ಮುಗಿದ ನಂತರವೂ ಮತದಾನ ಮಾಡಿಸಿದ ಆರೋಪ

ಕಾಂಗ್ರೆಸ್ ನ ಅಭ್ಯರ್ಥಿ ಎಂ. ಆಂಜನಪ್ಪ ವಿರುದ್ಧ ಮತದಾನ ಮುಕ್ತಾಯಗೊಂಡ ನಂತರವೂ ಇಬ್ಬರನ್ನು ಕರೆತಂದು ಮತದಾನ ಮಾಡಿಸಿರುವವ ಆರೋಪ ಕೇಳಿಬಂದಿದೆ.

ಬೇಗೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ವಾರ್ಡ್ ನ ಕಾಂಗ್ರೆಸ್ ನ ಅಭ್ಯರ್ಥಿ ಎಂ. ಆಂಜನಪ್ಪ ವಿರುದ್ಧ ಮತದಾನ ಮುಕ್ತಾಯಗೊಂಡ ನಂತರವೂ ಇಬ್ಬರನ್ನು ಕರೆತಂದು ಮತದಾನ ಮಾಡಿಸಿರುವವ ಆರೋಪ ಕೇಳಿಬಂದಿದೆ.

ಖಾಸಗಿ ಮಾಧ್ಯಮವೊಂದಿ ಪ್ರಕಟಿಸಿರುವ ವರದಿ ಪ್ರಕಾರ, ಸಂತ ತೆರೇಸಾ ಹಿರಿಯ ಪ್ರಾಥಮಿಕ ಮತಗಟ್ಟ ಸಂಖ್ಯೆ 10 ರಲ್ಲಿ ಮತದಾನ ಮುಕ್ತಾಯಗೊಂಡ ನಂತರವೂ ಇಬ್ಬರನ್ನು ಕರೆತಂದ ಕಾಂಗ್ರೆಸ್ ಅಭ್ಯರ್ಥಿ ಆಂಜನಪ್ಪ, ಅಕ್ರಮವಾಗಿ ಮತದಾನ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ನಿಗದಿಯಾಗಿದ್ದ ಸಮಯ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತದಾನಕ್ಕೆ ಅವಕಾಶ ನೀಡಲು ನಿರಾಕರಿಸಿದ ಚುನಾವಣಾಧಿಕಾರಿಗಳಿಗೆ ಪೊಲೀಸರ ಎದುರೇ ಆಂಜನಪ್ಪ ಧಮ್ಕಿ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅಂತಿಮವಾಗಿ ಇಬ್ಬರು ಮತದಾರರನ್ನು ಒತ್ತಾಯಪೂರ್ವಕವಾಗಿ ಮತದಾನ ಮಾಡಿಸುವಲ್ಲಿ ಆಂಜನಪ್ಪ ಯಶಸ್ವಿಯಾಗಿದ್ದಾರೆ.

ಚುನಾವಣಾಧಿಕಾರಿಗಳು ಮನವಿ ಮಾಡಿದರೂ ದುಂಡಾವರ್ತನೆ ತೋರಿದ ಆಂಜನಪ್ಪ ಮತಗಟ್ಟೆಯ ಬೀಗ ತೆಗೆಸಿ ಮತದಾನ ಮಾಡಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಅಲ್ಲದೇ ಈ ಘಟನೆಯ ವರದಿಯನ್ನು ಪ್ರಕಟಿಸದಂತೆ ಮಾಧ್ಯಮಕ್ಕೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com