ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ...
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಅಖೈರುಗೊಳಿಸಿದ್ದು, ಶನಿವಾರ ಕೋಲಾರ ಹೊರತುಪಡಿಸಿ ಉಳಿದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಜಿ. ಪರಮೇಶ್ವರ ಅವರು ಮತ್ತೊಂದು ಸುತ್ತು ಮಾತುಕತೆ ನಡೆಸಿ, ಗೊಂದಲ ಇದ್ದ ನಾಲ್ಕು ಸ್ಥಾನಗಳ ಬಗ್ಗೆ ಚರ್ಚಿಸಿದರು. ನಂತರ ರಾಹುಲ್‍ಗಾಂಧಿ ಅವರ ನಿವಾಸಕ್ಕೆ ತೆರಳಿ, ಸುಮಾರು ಒಂದು ತಾಸು ಚರ್ಚಿಸಿ ಪಟ್ಟಿ ಅಂತಿಮಗೊಳಿಸಿದ್ದರು.

ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು- ನಾರಾಯಣಸ್ವಾಮಿ
ಬೆಂಗಳೂರು ಗ್ರಾಮಾಂತರ- ರವಿ
ಮೈಸೂರು- ಧರ್ಮಸೇನಾ
ಬೀದರ್- ವಿಜಯïಸಿಂಗ್
ಕಲಬುರಗಿ- ಅಲ್ಲಮಪ್ರಭು ಪಾಟೀಲ್
ಧಾರವಾಡ- ಶ್ರೀನಿವಾಸ ಮಾನೆ
ಧಾರವಾಡ- ನಾಗರಾಜ ಛಬ್ಬಿ
ಚಿತ್ರದುರ್ಗ- ರಘು ಆಚಾರ್
ಮಂಡ್ಯ- ಶಿವರಾಮಗೌಡ
ವಿಜಯಪುರ-ಎಸ್.ಆರ್.ಪಾಟೀಲ್
ಕೊಡಗು- ಚಂದ್ರ ಮೌಳಿ
ಬೆಳಗಾವಿ-ವೀರಕುಮಾರ್ ಪಾಟೀಲ್
ಉತ್ತರ ಕನ್ನಡ- ಶ್ರೀಕಾಂತ್ ಘೋಟ್ನೇಕರ್
ಶಿವಮೊಗ್ಗ- ಪ್ರಸನ್ನಕುಮಾರ್
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
ಹಾಸನ- ಗೋಪಾಲಸ್ವಾಮಿ
ದಕ್ಷಿಣ ಕನ್ನಡ- ಪ್ರತಾಪ್ ಚಂದ್ರ ಶೆಟ್ಟಿ
ತುಮಕೂರು- ಆರ್.ರಾಜೇಂದ್ರ
ರಾಯಚೂರು - ಇಟಗಿ ಬಸವರಾಜು
ಬಳ್ಳಾರಿ - ಕೆ.ಸಿ.ಕೊಂಡಯ್ಯ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com