ಅಭ್ಯರ್ಥಿಗಳ ಬದಲಾವಣೆ: ಜೆಡಿಎಸ್ ಅತೃಪ್ತಿ ಸ್ಫೋಟ

ಬೂದಿ ಮುಚ್ಚಿದ ಕೆಂಡಂತಿದ್ದ ಜೆಡಿಎಸ್ ಒಳಗಿನ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ...
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
Updated on
ಬೆಂಗಳೂರು: ಬೂದಿ ಮುಚ್ಚಿದ ಕೆಂಡಂತಿದ್ದ ಜೆಡಿಎಸ್ ಒಳಗಿನ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಾಯಕರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಕೆಲವು ಶಾಸಕರು ಗುಡುಗಿದ್ದಾರೆ. 
ಖಾಸಗಿ ಹೊಟೇಲ್ ನಲ್ಲಿ ದಿನವಿಡೀ ಪ್ರತ್ಯೇಕ ಸಭೆ ನಡೆಸಿ ಅವರು ಮುಂದಿನ ನಡೆಗಳನ್ನೂ ಚರ್ಚಿಸಿದ್ದಾರೆ. ಇದೇ ಧೋರಣೆ ಮುಂದುವರಿದರೆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ಎನ್ನುವ ಸಂದೇಶವನ್ನೂ ರವಾನಿಸಿ ದ್ದಾರೆ. ಇದರಿಂದ ಜೆಡಿಎಸ್ ಸ್ಪರ್ಧಿಸಿ ರುವ ಕಡೆ ಅತೃಪ್ತ ಶಾಸಕರ ಬೆಂಬಲವಿಲ್ಲದೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. 
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಬುಧ ವಾರ ಮತ್ತೆ 3 ಸ್ಥಾನಗಳಿಗೆ ಅಭ್ಯರ್ಥಿ ಗಳನ್ನು ಪ್ರಕಟಿಸಿದೆ. ವಿಜಯಪುರಕ್ಕೆ ಕಾಂತಪ್ಪ ಇಂಟಿಕೇರಿ, ಬೆಳಗಾವಿಗೆ ಟಿ.ಬಿ. ನಾಯಕ್, ಬಳ್ಳಾರಿಗೆ ಪ್ರದೀಪ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದು, ನಾಮಪತ್ರಗಳನ್ನೂ ಸಲ್ಲಿಸಿದ್ದಾರೆ. 
ಕೊನೇ ಕ್ಷಣದಲ್ಲಿ ಮಣೆ: 10 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದ ಜೆಡಿಎಸ್ ಕೊನೆ ಹಂತದಲ್ಲಿ ಪಕ್ಷಕ್ಕೆ ಬಂದ ಉದ್ಯಮಿಗಳು, ರಾಜಕೀಯ ಮುಖಂಡರು ಮತ್ತು ಇತರ ನಾಯಕರಿಗೆ ಮಣೆ ಹಾಕಿ ಟಿಕೆಟ್ ನೀಡಿದೆ. 
ಇದರೊಂದಿಗೆ ಪಕ್ಷದಿಂದ ಕಣಕ್ಕಿಳಿದ ಅಭ್ಯರ್ಥಿಗಳ ಸಂಖ್ಯೆ 19ಕ್ಕೇರಿದೆ. ಬೆಂಗಳೂರು ನಗರ ಜಿಲ್ಲೆಯಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ, ಆಯ್ಕೆ ಮಾಡಿದ್ದ ಅಧಿಕೃತ ಅಭ್ಯರ್ಥಿಗಳನ್ನು ನಾಲ್ಕು ಕ್ಷೇತ್ರಗಳಲ್ಲಿ ದಿಢೀರ್ ಬದಲಿಸುವ ಮೂಲಕ ಅನುಮಾನಕ್ಕೆ ಎಡೆಯಾಗಿತ್ತು. ಅಷ್ಟೇ ಅಲ್ಲ. ಇದರಿಂದ ಪಕ್ಷದ ಕೆಲವು ಶಾಸಕರಿಗೆ ಅಸಮಾಧಾನವನ್ನೂ ತಂದಿತ್ತು.  
ಖಾಸಗಿ ಹೋಟೆಲ್‍ನಲ್ಲಿ ಸಭೆ: ಈ ಹಿನ್ನೆಲೆಯಲ್ಲಿ ಬುಧವಾರ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಾದ ಚಲುವರಾಯಸ್ವಾಮಿ, ಗೋಪಾಲಯ್ಯ, ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಪುಟ್ಟಣ್ಣ ಹಾಜರಿದ್ದರು. ಬೆಳಗ್ಗೆ 12ಕ್ಕೆ ಆರಂಭವಾದ ಸಭೆ ಸಂಜೆ 5 ಗಂಟೆವರೆಗೂ ನಡೆದಿತ್ತು. ಪಕ್ಷದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳು ಮತ್ತು ನಿರ್ಧಾರಗಳ ಬಗ್ಗೆ ಚರ್ಚಿಸಲಾಗಿತ್ತು. 
ಹಾಗೆಯೇ ಪರಿಷತ್ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಶಾಸಕರ ಅಭಿಪ್ರಾಯಕ್ಕೆ ಬೆಲೆ ನೀಡುವುದಾಗಿ ಭರವಸೆ ನೀಡಿದ್ದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಉಲ್ಟಾ ಹೊಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗು, ಧಾರವಾಡ, ಮಂಡ್ಯ ಕ್ಷೇತ್ರಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಬದಲಿಸಿದ್ದ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. 
ವಿಶೇಷವಾಗಿ ಮಂಡ್ಯದಲ್ಲಿ ಸ್ಥಳೀಯ ಶಾಸಕ ಚಲುವರಾಯಸ್ವಾಮಿ ಸಲಹೆಯಂತೆಯೇ ರಾಮಕೃಷ್ಣ ಅವರಿಗೆ ಟಿಕೆಟ್ ನೀಡಿ, ನಂತರದಲ್ಲಿ ಅಪ್ಪಾಜಿಗೌಡ ಎಂಬುವರಿಗೆ ಟಿಕೆಟ್ ನೀಡಿದ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com