
ಕಳಸಾ ಬಂಡೂರಿ ಜಲ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಸಿಎಂ ಪರ್ಸೇಕರ್ ಗೆ ಪತ್ರ ಬರೆದಿದ್ದಾರೆ. ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರ ನೇತೃತ್ವದ ಜಗದೀಶ್ ಶೆಟ್ಟರ್ ಅವರನ್ನು ಒಳಗೊಂಡ ನಿಯೋಗ ನಿಮ್ಮ ಭೇಟಿಗೆ ಬರಲಿದೆ. ಇದಕ್ಕೆ ಅವಕಾಶ ನೀಡಿ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಇದಕ್ಕೆ ಅವಕಾಶ ನೀಡಿ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಫೆ 23ರಂದು ಮಹ ದಾಯಿ ನ್ಯಾಯಾಧೀಕರಣದ ವಿಚಾರಣೆ ನಡೆಯಲಿದ್ದು, ಸಿಎಂ ಪತ್ರಕ್ಕೆ ಮಹತ್ವ ಬಂದಿದೆ.
ನೇತ್ರಾವತಿ ನದಿಯಿಂದ ಬಯಲು ಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಯ ಹಣೆಬರಹ ಡಿ.26ರಂದು ನಿರ್ಧಾರವಾಗಲಿದೆ. ಎತ್ತಿನಹೊಳೆ ಪ್ರಸ್ತಾಪ ಪರಿಶೀಲಿಸುತ್ತಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರಾದೇಶಿಕ ಸಬಲೀಕರಣ ಸಮಿತಿ ಯೋಜನೆ ಆರಂಭವಾಗುವ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದೆ.
ಈಗಾಗಲೇ ಈ ಯೋಜನೆಗೆ ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಅವರ ವಿರೋಧವಿದೆ. ಇದೀಗ ಕೇಂದ್ರದ ಉನ್ನತ ಸಮಿತಿ ಭೇಟಿ ನೀಡಲು ನಿರ್ಧರಿಸಿರುವುದು ಕೊಂಚ ಆತಂಕ ಮೂಡಿಸಿದೆ. ಆದರೆ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಮುಂದುವರಿಸಿರುವುದಾಗಿ ಸರ್ಕಾರ ಹೇಳಿಕೆ ನೀಡಿದ್ದು, ಇದನ್ನು ಸುಪ್ರೀಂಕೋರ್ಟ್‍ನ ಹಸಿರು ಪೀಠ ಒಪ್ಪಿಕೊಂಡಿದೆ. ಹಾಗೆಯೇ ಹಿಂದಿನ ನೀರಾವರಿ ಯೋಜನೆಗಳಿಗೆ ಅರಣ್ಯ ಭೂಮಿ ಬಳಸಿಕೊಳ್ಳಲು ನೀಡಿರುವ ಅನುಮತಿ ಆಧಾರದ ಮೇಲೆಯೇ ಎತ್ತಿನ ಹೊಳೆಗೂ ಒಪ್ಪಿಗೆ ನೀಡುವ ಬಗ್ಗೆ ಪರಿಶೀಲಿಸುತ್ತದೆ ಎಂದು ಕೇಂದ್ರ ಉನ್ನತ ಸಮಿತಿ ಹೇಳಿದೆ. ಇದರೊಂದಿಗೆಯೋಜನೆ ಬಗ್ಗೆ ಸರ್ಕಾರ ಆಶಾಭಾವನೆ ಇಟ್ಟುಕೊಳ್ಳುವಂತೆ ಆಗಿದೆ.
ಶುಕ್ರವಾರ ನಡೆದಿದ್ದೇನು?: ನೀರಿಲ್ಲದೆ ಬವಣೆ ಪಡುತ್ತಿರುವ ಬಯಲು ಸೀಮೆಯ 5 ಜಿಲ್ಲೆಗಳಿಗೆ ನೇತ್ರಾವತಿಯಿಂದ ನೀರು ಹರಿ ಸುವ ಈ ಯೋಜನೆಗೆ ಸುಮಾರು 13.93 ಹೆಕ್ಟೇರ್ ಅರಣ್ಯ ಪ್ರದೇಶ ವನ್ನು ಬಳಸಿಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಈಗಾಗಲೇ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಪ್ರಾದೇಶಿಕ ಸಬಲೀಕರಣ ಸಮಿತಿಗೆ ಪ್ರಸ್ತಾಪನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೋರಮಂಗಲದ ಕೇಂದ್ರಿಯ ಸದನದಲ್ಲಿ ಶುಕ್ರವಾರ ನಿವೃತ್ತ ಐಎಫ್ಎಸ್ ಅಧಿಕಾರಿ ಶಿವರಾಜ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಯೋಜನೆ ಬಗ್ಗೆ ಸದಸ್ಯರು ಮತ್ತು ತಾಂತ್ರಿಕ ತಜ್ಞರು ಯೋಜನೆಯ ಸಾಧಕ-ಬಾಧಕ ಚರ್ಚಿಸಿದರು ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಸಮಿತಿ ಡಿ.26ರಂದು ಭೇಟಿ ನೀಡಲು ದಿನವನ್ನೂ ನಿಗದಿ ಮಾಡಲಾಯಿತು.
ಸಮಿತಿಯ ಎಲ್ಲಾ ಸದಸ್ಯರು ಸಕಲೇಶಪುರದಲ್ಲಿರುವ ಯೋಜನೆ ಆರಂಭದ ಸ್ಥಳ ಪರಿಶೀಲಿಸಲಿದ್ದು, ಅಲ್ಲಿನ ಜನರ ಅಭಿಪ್ರಾಯ ಕೇಳಲಿದ್ದಾರೆ. ನಂತರ ಅನುಮತಿ ನೀಡಬೇಕೇ, ಬೇಡವೇ ಎನ್ನುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
21ಕ್ಕೆ ವಿಚಾರಣೆ: ಈ ಮಧ್ಯೆ ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರವಾದಿಗಳು ಚೆನ್ನೈನಲ್ಲಿರುವ ಹಸಿರು ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಡಿ.21ರ ಸೋಮವಾರ ವಿಚಾರಣೆಗೆ ಬರಲಿದೆ. ಕೇಂದ್ರ ಪರಿಸರ ಇಲಾಖೆ ಅನುಮತಿ ಇಲ್ಲದೆ ರಾಜ್ಯ ಸರ್ಕಾರ ಈ ಯೋಜನೆ ರೂಪಿಸುತ್ತಿದೆ ಎಂದು ದೂರು ಸಲ್ಲಿ-ಸಲಾಗಿತ್ತು.
Advertisement