
ಬೆಂಗಳೂರು: ಜೆಡಿಎಸ್ ಮತ್ತು ಜೆಡಿಯು ವಿಲೀನಕ್ಕೆ ಇದು ಸರಿಯಾದ ಸಮಯವಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಎರಡು ವರ್ಷಗಳ ಹಿಂದೆಯೇ ರಾಷ್ಟ್ರ ಮಟ್ಟದಲ್ಲಿ ಜನತಾ ಪರಿವಾರ ಒಂದಾಗಬೇಕೆಂದು ತೀರ್ಮಾನ ಮಾಡಿ ಮುಲಾಯಂ ಸಿಂಗ್ ಅವರಿಗೆ ಜವಾಬ್ದಾರಿ ವಹಿಸಿದ್ದೆವು, ಈಗ ಬಿಹಾರ ಚುನಾವಣೆ ಫಲಿತಾಂಶದ ನಂತರ ಈ ನಿಟ್ಟಿನಲ್ಲಿ ರಾಜ್ಯ ಜೆಡಿಎಸ್ ಮತ್ತು ಜೆಡಿಯು ಮುಖಂಡರು ಸಭೆಯನ್ನು ನಡೆಸಲಾಗಿದೆ. ಆದರೆ, ಸದ್ಯಕ್ಕೆ ಜೆಡಿಎಸ್ ಮತ್ತು ಜೆಡಿಯು ವಿಲೀನ ಇಲ್ಲ ಎಂದರು.
ರಾಜ್ಯದಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಿಪಿಎಂ ಮತ್ತು ಸಿಪಿಐ ಜತೆ ಮೈತ್ರಿ ಕುರಿತು ಮಾತನಾಡಲು ಸಿದ್ದ ಇದ್ದೇನೆ. ಆದರೆ, ಜೆಡಿಯು ಜತೆ ಮೈತ್ರಿ ಮಾತುಕತೆ ಇಲ್ಲ. ಚಿನ್ಹೆ ವಿಚಾರ ವಾಗಿಯೂ ಜೆಡಿಯು ಮತ್ತು ಜೆಡಿಎಸ್ ನಡುವೆ ಒಂದಷ್ಟು ಗೊಂದಲ ಇದೆ ಎಂದು ಹೇಳಿದರು.
ರಾಷ್ಟ್ರ ಮಟ್ಟದಲ್ಲಿ ನಾಯಕರು ಸಭೆ ನಡೆಸಿ ವಿಲೀನ ಕುರಿತು ಅಂತಿಮ ತೀರ್ಮಾನ ಮಾಡುತ್ತೇವೆ. ಆದರೆ ಕೇರಳದಲ್ಲಿ ಮುಂದಿನ 3 ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತೆ. ಈ ಸಂದರ್ಭ ಎಡ ಪಂಥೀಯರ ಜತೆಗಿನ ನಮ್ಮ ಪಕ್ಷದ ಮೈತ್ರಿ ಅಲ್ಲಿ ಮುಂದುವರಿಯಲಿದೆ ಎಂದರು. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದರು.
Advertisement