ಪರಿಷತ್ ಚುನಾವಣೆಯಲ್ಲಿ ವಾಟಾಳ್‌ ನಾಗರಾಜ್‌ ಪಡೆದ ಮತ 11

ಡಿಸೆಂಬರ್ 27ರಂದು ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ
ವಾಟಳ್ ನಾಗರಾಜ್
ವಾಟಳ್ ನಾಗರಾಜ್

ಮೈಸೂರು: ಡಿಸೆಂಬರ್ 27ರಂದು ನಡೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಅವರು ಮೊದಲ ಪ್ರಾಶಸ್ತ್ಯದ 11 ಮತಗಳನ್ನು ಮಾತ್ರ ಪಡೆದಿದ್ದಾರೆ.

ಸದಾ ಕನ್ನಡ ಪರ ಬೀದಿಗಿಳಿದು, ವಿನೂತನ ರೀತಿಯಲ್ಲಿ ಹೋರಾಟ ಮಾಡುತ್ತಾ ಸರ್ಕಾರದ ಮತ್ತು ಜನರ ಗಮನ ಸೆಳೆಯುತ್ತಿದ್ದ ವಾಟಾಳ್‌ ಅವರು ಕೇವಲ 11 ಮತಗಳನ್ನು ಪಡೆಯುವ ಮೂಲಕ ತೀವ್ರ ಮುಖಭಂಗ ಅನಭವಿಸಿದ್ದಾರೆ.

ಇಂದು ಮತ ಎಣಿಕೆ ನಡೆದ ನಗರದ ಊಟಿ ರಸ್ತೆಯ ಜೆಎಸ್‌ಎಸ್‌ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನತ್ತ ವಾಟಾಳ್‌ ನಾಗರಾಜ್‌ ಅವರು ಬೆಳಿಗ್ಗೆಯಿಂದಲೂ ಕಾಣಿಸಿಕೊಳ್ಳಲಿಲ್ಲ.

ಚಲಾವಣೆಯಾದ ಮತಗಳಲ್ಲಿ 427 ತಿರಸ್ಕೃತಗೊಂಡಿದ್ದು, 10 ಮತಗಳು ನೋಟಾ ಆಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com