ಶೀಘ್ರವೇ ಬಿಡಿಎ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭ: ಸಿದ್ದರಾಮಯ್ಯ

ದಾರಿ ಬಿಟ್ಟುಹೋಗಿದ್ದ ಬಿಡಿಎಗೆ ಆಪರೇಷನ್ ಮಾಡಲಾಗಿದೆ. ಇದೀಗ ಸ್ವಲ್ಪ ದಾರಿಗೆ ಬಂದಿದೆ. ಇನ್ನಷ್ಟು ದಾರಿ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನಸಭೆ: ದಾರಿ ಬಿಟ್ಟುಹೋಗಿದ್ದ ಬಿಡಿಎಗೆ ಆಪರೇಷನ್ ಮಾಡಲಾಗಿದೆ. ಇದೀಗ ಸ್ವಲ್ಪ ದಾರಿಗೆ ಬಂದಿದೆ. ಇನ್ನಷ್ಟು ದಾರಿಗೆ ತರಲಾಗುತ್ತದೆ. ಶೀಘ್ರವೇ ಬಿಡಿಎಯಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್‍ನ ಚಲುವರಾಯಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು, ಬಿಡಿಎಯಿಂದ ನಿವೇಶನ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಬಡಾವಣೆಗಳನ್ನೂ ನಿರ್ಮಿಸಲಾಗುತ್ತದೆ. ಶೀಘ್ರದಲ್ಲೇ ಹೊಸ ಬಡಾವಣೆಗಳ ನಿವೇಶನಗಳ ವಿತರಣೆ ಮಾಡಲಾಗುವುದು ಎಂದರು.

ಹತ್ತು ವರ್ಷಗಳಿಂದ ನಿವೇಶನ ನೀಡುವುದನ್ನೇ ಬಿಡಿಎ ಮರೆತಿದೆ. ಬಿಡಿಎಗೆ ಬೇರೆ ಕಾರ್ಯ ನೀಡಿ. ನಿರ್ಮಾಣ ಕಾಮಗಾರಿಗಳನ್ನು ಮಾಡುವುದು ಹಾಗೂ ನಿವೇಶನ ನೀಡುವುದು ಬಿಡಿಎಯಿಂದ ಸಾಧ್ಯವಾಗುತ್ತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಸವರಾಜ ಬೊಮ್ಮಯಿ, ಬಿಬಿಎಂಪಿ ವಿಭಜನೆಗೆ ಹೊರಟಿದ್ದೀರಿ. ಅದರ ಬದಲು ಬಿಡಿಎ ವಿಕೇಂದ್ರೀಕರಣಗೊಳಿಸಿ. ಬೃಹತ್ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯನಿರ್ವಹಣೆ ಬಿಡಿಎಯಿಂದ ಸಾಧ್ಯ ಇಲ್ಲ ಎಂದರು.

ಅಲ್ಲದೆ, ಬಳ್ಳಾರಿಯ ಮಣ್ಣು, ಬೆಂಗಳೂರಿನ ನೆಲದ ಪ್ರಭಾವಕ್ಕೆ ಜಾರಿಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಳ್ಳಾರಿ ಮಣ್ಣು, ಬೆಂಗಳೂರು ನೆಲದ ಬಗ್ಗೆ ನಿಮಗೆ ಅತಿ ಪ್ರೀತಿ. ಎಲ್ಲವೂ ನಿಮಗೆ ಗೊತ್ತೇ ಇದೆ ಅಲ್ಲವೇ ಬೊಮ್ಮಾಯಿ' ಎಂದು ತಿರುಗೇಟು ನೀಡಿದರು.

`ಹೌದು ಎಲ್ಲ ಕಂಡಿ ದ್ರೀರಿ, ಇರುಳು ಕಂಡ ಬಾವಿಗೆ ಹಗಲು ಬೀಳ ಬೇಡಿ ಎಂದಷ್ಟೇ ಹೇಳುತ್ತಿದ್ದೇನೆ ಎಂದರು ಬೊಮ್ಮಾಯಿ. `ಇಲ್ಲ ಇಲ್ಲಾ ಜಾರೋ ಪ್ರಶ್ನೇನೇ ಇಲ್ಲ. ಹಗಲಾದರೂ ಅಷ್ಟೇ, ರಾತ್ರಿಯಾದರೂ ಅಷ್ಟೇ ಎಂದು ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com