
ವಿಧಾನಸಭೆ: ರಾಜ್ಯದಲ್ಲಿ 1.60 ಲಕ್ಷ ಹೊಸ ಪಡಿತರ ಕಾರ್ಡ್‍ಗಳನ್ನು ವಿತರಿಸಿದ್ದು, ಪ್ರತಿ ನಿತ್ಯವೂ 3-4 ಸಾವಿರ ಕಾರ್ಡ್ ವಿತರಣೆ ಆಗುತ್ತಿದೆ. ಹೊಸ ಕಾರ್ಡ್‍ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಬಜೆಟ್‍ನಲ್ಲಿ ಘೋಷಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿಯ ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, ಕಾರ್ಡ್ ಪಡೆಯಲು ಮತದಾನದ ಗುರುತಿನ ಚೀಟಿ ಮಾತ್ರ ಕಡ್ಡಾಯ. ಅಂತ್ಯೋದಯ ಕಾರ್ಡ್‍ಗಳನ್ನು ರದ್ದು ಮಾಡಿಲ್ಲ. ಇನ್ನೆರಡು ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆಲ್ಲ ಕಾರ್ಡ್ ನೀಡಲಾಗುತ್ತದೆ ಎಂದು ವಿವರಿಸಿದರು.
ಬೋಗಸ್ ಕಾರ್ಡ್‍ಗಳು ಹೆಚ್ಚಾಗಿದ್ದು, ಅರ್ಜಿ ಸಲ್ಲಿಸಿದವರಿಗೆಲ್ಲ ಕಾರ್ಡ್ ನೀಡಲಾಗಿದೆ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು. ಬೋಗಸ್ ಹಾಗೂ ವಿತರಣೆಯ ಅಕ್ರಮ ಮಾಡಿದ್ದೇ ನೀವು. ನಿಮ್ಮ ಸರ್ಕಾರ ಇದ್ದಾಗ ಅರ್ಜಿ ನೀಡಿದವರಿಗೆಲ್ಲ ಕಾರ್ಡ್ ನೀಡಿದ್ದೀರಿ ಎಂದು ಸಚಿವರು ಟೀಕಿಸಿದರು.
Advertisement