ಪ್ರತಿಭಟನೆ
ಪ್ರತಿಭಟನೆ

ಸಚಿವರ ಗೈರು; ಬಿಜೆಪಿ ಸಭಾತ್ಯಾಗ

ಸದನದಲ್ಲಿ ಸಚಿವರ ಗೈರು ಹಾಜರಿ ವಿರೋಧಿ ಸಿ ಪ್ರತಿಪಕ್ಷ ಬಿಜೆಪಿ ಶುಕ್ರವಾರ ಸಭಾತ್ಯಾಗ ಮಾಡಿ ಪ್ರತಿಭಟಿಸಿದರು...
Published on

ವಿಧಾನಪರಿಷತ್ತು: ಸದನದಲ್ಲಿ ಸಚಿವರ ಗೈರು ಹಾಜರಿ ವಿರೋಧಿ ಸಿ ಪ್ರತಿಪಕ್ಷ ಬಿಜೆಪಿ ಶುಕ್ರವಾರ ಸಭಾತ್ಯಾಗ ಮಾಡಿ ಪ್ರತಿಭಟಿಸಿದರು. ಬೆಳಗ್ಗೆ 10ಗಂಟೆಗೆ ನಿಗದಿಯಾಗಿದ್ದ ಸದನದಲ್ಲಿ 11ಗಂಟೆಯಾಗಿದ್ದರೂ ಕಡ್ಡಾಯವಾಗಿ ಬರಬೇಕಿದ್ದ ಸಚಿವರಲ್ಲಿ 7ಮಂದಿ ಗೈರು ಹಾಜರಾಗಿದ್ದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿ, ಎಲ್ಲಾ ಪ್ರಶ್ನೆಗಳಿಗೂ ಸಭಾನಾಯಕರೇ ಹೇಗೆ ಉತ್ತರಿಸುತ್ತಿದ್ದಾರೆ. ಹಾಗಿದ್ದರೆ ಸಚಿವರೇಕೆ ಬೇಕು ಎಂದು ರೇಗಿದರು. ಇದಕ್ಕೆ ಸಭಾನಾಯಕ ಎಸ್. ಆರ್.ಪಾಟೀಲ್ ಸಮಜಾಯಿಷಿ ನೀಡಲು ಬಂದಾಗ. ವಿರೋಧಿಸಿ ಈಶ್ವರಪ್ಪ, ಸದನಕ್ಕೆ 7ಮಂದಿ ಸಚಿವರು ಬಂದಿಲ್ಲ. ಯೋಗ್ಯತೆ ಇಲ್ಲದಿದ್ದ ಮೇಲೆ ಅವರು ಏಕೆ ಸಚಿವರಾಗಬೇಕು. ಸಚಿವರಾದ ಮೇಲೆ ಸದನಕ್ಕೆ ಬಂದು ಉತ್ತರಿಸಬೇಕು ಎಂದು ಕಿಡಿಕಾರಿದರು. ಆಗ ಎಸ್.ಆರ್.ಪಾಟೀಲ್, ಸಚಿವರು ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಬರುತ್ತಾರೆ ಎಂದರು. ಅದಕ್ಕೆ ಸಿಡಿಮಿಡಿಗೊಂಡ ಈಶ್ವರಪ್ಪ, ಸದನಕ್ಕಿಂತಲೂ ಮುಖ್ಯವಾದ ಕೆಲಸಯಾವುದಿರುತ್ತದೆ ಎಂದು ಗೈರು ಸಚಿವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸಚಿವರು ಗೈರು ಹಾಗೂ ಸರ್ಕಾರದ ನಿರ್ಲಕ್ಷ ಖಂಡಿಸಿ ಸಭಾತ್ಯಾಗ ಮಾಡಿದರು.

 ಭೂ ಸ್ವಾಧೀನದ ಬಗ್ಗೆ ಸರ್ಕಾರದಿಂದ ಕಾಯ್ದೆ

ನಂತರ ಬಿಜೆಪಿಯ ಸಿ.ಎಚ್.ವಿಜಯಶಂಕರ್, ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪರಿಚ್ಛೇದ 95ಕ್ಕೆ ತಿದ್ದುಪಡಿ ತರುವ ಕುರಿತ ಖಾಸಗಿ
ವಿಧೇಯಕ ಮಂಡಿಸಿದರು. ನಂತರ ಮಾತನಾಡಿ, ಕೃಷಿ ಭೂಮಿಯನ್ನು ಕೃಷಿಯೇ ತರ ಉದ್ದೇಶಕ್ಕೆ ನೀಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸದ್ಯ ಇರುವ ಕಾಯ್ದೆಯನ್ನು ಇನ್ನೂ ಕಠಿಣವಾಗುವಂತೆ ಅಮೂಲಾಗ್ರ ಬದಲಾವಣೆ ಮಾಡಬೇಕು. ಕೃಷಿ ಭೂಮಿಯನ್ನು ಕೈಗಾರಿಕೆ ಮತ್ತು ಇತರ ಉದ್ದೇಶಗಳಿಗೆ ನೀಡುತ್ತಿರುವು
ದರಿಂದ ಸಾಂಪ್ರದಾಯಿಕ ಬೆಳೆಗಳು ನಾಶವಾಗುತ್ತಿವೆ. ಇದರಿಂದಸಾಂಪ್ರದಾಯಿಕ ಗುಡಿ ಕೈಗಾರಿಕೆಗಳೂ ನಶಿಸಿ ಹೋಗುತ್ತಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಈಗ ಇರುವ ಕಾಯ್ದೆ  ಪ್ರಕಾರ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಒಂದು ಎಕರೆ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲು ಕನಿಷ್ಠ 1 ವರ್ಷಬೇಕಾಗುತ್ತದೆ. ಆದ್ದರಿಂದ ಈಗಿನ
ಕಾನೂನು ತುಂಬಾ ಕಠಿಣವಿದ್ದು, ನಿಮ್ಮ ತಿದ್ದುಪಡಿ ವಿಧೇಯಕವನ್ನು ವಾಪಸ್ ಪದೆಯುವುದು ಸೂಕ್ತ ಎಂದರು.

ಆದರೂ ವಿಜಯಶಂಕರ್ ಮೈಸೂರು ವಿಳ್ಯದೆಲೆ, ನಂಜನಗೂಡು ರಸಬಾಳೆ ಯಂತ ಸಾಂಪ್ರದಾಯಿಕ ಬೆಳೆಗಳು ನಾಶವಾಗುತ್ತಿರುವುದಕ್ಕೆ ಭೂ ಸ್ವಾಧೀನ
ಕಾಯ್ದೆಯೇ  ಕಾರಣ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಸಾದ್, ಈ ವಿಧೇಯಕವನ್ನು ವಾಪಸ್ ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ, ಈ ಬಗ್ಗೆ
ಸರ್ಕಾರವೇ ಸೂಕ್ತ ತಿದ್ದುಪಡಿ ತರುವ ಬಗ್ಗೆ ಚಿಂತಿಸುತ್ತಿದೆ ಎಂದರು. ಆದರೂ ಸಭಾಪತಿ ಶಂಕರಮೂರ್ತಿ, ಈ ಬಗ್ಗೆ ಚರ್ಚೆಗೆ ನಂತರದ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದರು.

 ಮಂಗಳಮುಖಿಯರಿಗೆ ಮೀಸಲು ನೀಡಿ
ಬಿಜೆಪಿಯ ತಾರಾ ಅನುರಾಧ ಕೂಡ ಖಾಸಗಿ ವಿಧೇಯಕವೊಂದನ್ನು ಮಂಡಿಸಿ, ಮಂಗಳಮುಖಿಯರಿಗೆ ಮೀಸಲು ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಂಗಳಮುಖಿಯರಿಗೆ ಎಲ್ಲಿಯೂ ಗುರು ತಿನ ಚೀಟಿ ನೀಡುತ್ತಿಲ್ಲ. ಮನೆ ಬಾಡಿಗೆ ನೀಡುತ್ತಿಲ್ಲ.  ದೇವಸ್ಥಾನಗಳ ಪ್ರವೇಶವಿಲ್ಲ .ಅಷ್ಟೇ ಏಕೆ ? ಶೌಚಾಲಯಕ್ಕೂ ಪ್ರವೇಶ ಇಲ್ಲದಂತಾಗಿದೆ. ಆದ್ದರಿಂದ ಅಸ್ಪೃಶ್ಯರಂತೆ ಇರುವ ಇವರಿಗೂ ಬದುಕುವ ಹಕ್ಕು ಕಲ್ಪಿಸಬೇಕು. ಮೊದಲು ಈ ಸಮುದಾಯದ ಸಮೀಕ್ಷೆ  ನಡೆಸಬೇಕು. ನಂತರ  ಇವರಿಗೂ ಮೀಸಲು ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೊಳಿಸ  ಬೇಕೆಂದು ತಾರಾ ಒತ್ತಾ ಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com