ವಿಡಿಯೋ ಭಾಷಣಕ್ಕೂ ಅವಕಾಶ ಇಲ್ಲ ತೊಗಾಡಿಯಾ ಭಾಷಣ ಪ್ರಸಾರವಾದರೆ ಶಿಸ್ತುಕ್ರಮ: ಎಂ.ಎನ್. ರೆಡ್ಡಿ ಎಚ್ಚರಿಕೆ

ವಿಎಚ್‍ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‍ಭಾಯಿ ತೊಗಾಡಿಯಾ ಅವರಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದ್ದು, ಈ ನಡುವೆಯೂ...
ಪ್ರವೀಣ್‍ಭಾಯಿ ತೊಗಾಡಿಯಾ
ಪ್ರವೀಣ್‍ಭಾಯಿ ತೊಗಾಡಿಯಾ
Updated on

ಬೆಂಗಳೂರು: ವಿಎಚ್‍ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‍ಭಾಯಿ ತೊಗಾಡಿಯಾ  ಅವರಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದ್ದು, ಈ ನಡುವೆಯೂ ಅವರು ವಿಡಿಯೋ  ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಪ್ರೆಸ್‍ಕ್ಲಬ್  ಆಫ್  ಬೆಂಗಳೂರು ವತಿಯಿಂದ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಭೆ, ಸಮಾರಂಭಗಳಲ್ಲಿ ಯಾರೇ ಆದರೂ ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಸಮಾಜದ ಶಾಂತಿಗೆ ಭಂಗ ತರುವುದು ಭಾರತೀಯ ದಂಡ ಸಂಹಿತೆ ಅಪರಾಧವಾಗಿದೆ. ಹಾಗೆ ಭಾಷಣ ಮಾಡಿದವರ ವಿರುದ್ಧ  ಕ್ರಮಕೈಗೊಳ್ಳುವುದು ಖಚಿತ ಎಂದರು.
ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ಫೆ. 8ರ ಭಾನುವಾರ ನಡೆಯಲಿರುವವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಪ್ರವೀಣ್ ಭಾಯಿ ತೊಗಾಡಿಯಾ  ಅವರಿಗೆ ನಿರ್ಬಂಧ ಹೇರಿದ ಕಾರಣ ವಿಡಿಯೋ  ಕಾನ್ಫರೆನ್ಸ್ ಮೂಲಕ ಅವರು ಭಾಷಣ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಇದುವರೆಗೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಭಾಷಣಕ್ಕೆ ಅನುಮತಿ ಕೋರಿದಲ್ಲಿ ಈ ಬಗ್ಗೆ ಪರಿಶೀಲಿಸಿ, ವಿಡಿಯೋ  ಕಾನ್ಫ ರೆನ್ಸ್ ಮೂಲಕ ಭಾಷಣಕ್ಕೆ ಅವಕಾಶ ಕೊಡಬೇಕೆ, ಬೇಡವೆ ಎಂಬ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ತೊಗಾಡಿಯಾ ಮಾತ್ರವಲ್ಲ ಯಾರೇ ಆದರೂ ಪ್ರಚೋದನಾಕಾರಿ ಭಾಷಣ ಮಾಡಿ, ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡಿದರೆ ಅಂತಹವರ ವಿರುದ್ಧ  ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರವೀಣ್‍ಭಾಯಿ ತೊಗಾಡಿಯಾ ಅವರು ಈ ಹಿಂದೆ ಮಾಡಿರುವ ಭಾಷಣಗಳ ಪರಿಣಾಮದಿಂದಾಗಿ ಹಲವು ಕಡೆ ಕೋಮು ಗಲಭೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಎಚ್‍ಪಿ ಸಮಾಜ್ಯೋತ್ಸವಕ್ಕೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಅವರ ಮೇಲೆ ನಿಷೇಧ ಹೇರಲಾಗಿದೆಯೇ  ಹೊರತು ಇದರ ಹಿಂದೆ ಯಾವುದೇ ರಾಜಕೀಯ ದುರದ್ದೇಶವಿಲ್ಲ. ಈ ನಡುವೆಯೂ ವಿಡಿಯೋ  ಕಾನ್ಫರೆನ್ಸೆ ಮೂಲಕ ಉದ್ರೇಕಕಾರಿ ಭಾಷಣ ಮಾಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಾವೇಶಕ್ಕೆ ಬಿಗಿಭದ್ರತೆ: ತೊಗಾಡಿಯಾ ಅವರು ನಗರ ಪ್ರವೇಶಿಸದಂತೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿಂದೂ ಸಮಾಜೋತ್ಸ ವದ ವೇಳೆ ನಗರದ್ಯಾಂತ ಪೋಲೀಸ್ ಭದ್ರತೆ ಒದಗಿಸಲಾಗಿದೆ. ಕೇಂದ್ರ ಮತ್ತು ದಕ್ಷಿಣ ವಲಯದ 800 ಮಂದಿ ಪೋಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದ 1000 ಸಿಬ್ಬಂದಿ, ಕೇಂದ್ರದ ಕ್ಷಿಪ್ರ ಕಾರ್ಯಾಚರಣೆಯ ಎರಡು ತುಕಡಿ ಸೇರಿದಂತೆ ನಗರದ ಎಲ್ಲ ವಲಯಗಳ ಡಿಸಿಪಿ, ಎಸಿಪಿಗಳಿಗೆ ಸೂಕ್ತ ಭದ್ರತೆ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು  ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

ಆಡಿಯೋ , ವಿಡಿಯೋ ಗೂ ನಿರ್ಬಂಧ
ಬೆಂಗಳೂರು: ವಿಎಚ್‍ಪಿ ಮುಖಂಡ ಪ್ರವೀಣ್ ತೊಗಾಡಿಯಾ ನಗರ ಪ್ರವೇಶಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಆಯೋ ಜಕರು ವಿಡಿಯೋ ಕಾನ್ಪರೆನ್ಸ್ ಮುಖಾಂತರ ತೊಗಾಡಿಯಾ ಭಾಷಣ ಪ್ರಸಾರ ಮಾಡುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ, ಪೋ ಲೀಸರು ವಿಡಿಯೋ ಕಾನ್ಫರೆನ್ಸ್, ಆಡಿಯೋ , ವಿಡಿಯೋ ಎಲ್ಲದಕ್ಕೂ ನಿರ್ಬಂಧ ವಿಧಿಸಿದ್ದಾರೆ. ಸಾರ್ವಜನಿಕ ಸ್ಥಳ ಅಥವಾ ಕಾರ್ಯ ಕ್ರಮದಲ್ಲಿ ಪ್ರವೀಣ್ ತೊಗಾಡಿಯಾ ಭಾಷಣದ ಆಡಿಯೋ  ಅಥವಾ ವಿಡಿಯೋ ವನ್ನು ಪ್ರಸಾರ ಮಾಡದಂತೆ ನಗರ ಪೋಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಹೆಚ್ಚುವರಿ ಪೋಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ 3 ಡಿಸಿಪಿ, 10 ಎಸಿಪಿ, 20 ಇನ್ಸ್‍ಪೆಕ್ಟರ್ ಹಾಗೂ ಎಸ್ಸೈ, ಕಾನ್ಸ್ ಟೇಬಲ್, ಹೆಡ್ ಕಾನ್ಸ್‍ಟೇಬಲ್ ಸೇರಿದಂತೆ 800 ಪೋ ಲೀಸರು ಭದ್ರತೆಗೆ ಇರಲಿದ್ದಾರೆ. ಅಲ್ಲದೇ ಕ್ಷಿಪ್ರ ಕಾರ್ಯ ಪಡೆ, ಕೇಂದ್ರ ಮೀಸಲು ಪಡೆ ಸಿಬ್ಬಂದಿಯನ್ನೂ ಭದ್ರತೆಗೆ ನೇಮಕ ಮಾಡಲಾಗಿದೆ. ಪೋಲೀಸರು ಕುದುರೆ ಮೇಲೂ ಗಸ್ತು ತಿರುಗಲಿದ್ದಾರೆ ಎಂದು ಹಿರಿಯ ಪೋ ಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಶಕ್ಕೆ ಪಡೆದ ಪೋಲೀಸರು: ತಮಿಳುನಾಡಿನ ಹೊಸೂರಿನಲ್ಲಿ ನಡೆಯಲಿದ್ದ ವಿಎಚ್‍ಪಿ ಕಾರ್ಯಕ್ರಮಕ್ಕೆ ಪ್ರವೀಣ್ ತೊಗಾಡಿಯಾ ಆಗಮಿಸಿದ್ದರು. ಬೆಂಗಳೂರು ಪ್ರವೇಶ
ನಿಷೇಧಿಸಿದ್ದರಿಂದ ಅವರು ಶನಿವಾರ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದ ಪೋ ಲೀಸರು ಹೊಸಕೋಟೆ ಮುಖಾಂತರ
ಹೊಸೂರಿಗೆ ಬಿಟ್ಟು ಬಂದಿದ್ದಾರೆ. ಸಮಾಜೋತ್ಸವದಲ್ಲಿ ಕೋಮು ಸೌಹಾರ್ದತೆ ಕದಡುವ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಫೆ.5 ರಿಂದ 11ರವರೆಗೆ ತೊಗಾಡಿಯಾಗೆ ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.

ಸರ್ಕಾರದಿಂದ ದ್ವಿಮುಖ ನೀತಿ


ಬೆಂಗಳೂರು: ಹಿಂದೂಗಳ ಭಾವನೆಗಳನ್ನು ತುಳಿಯುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರನ್ನು ಓಲೈಸುವ ಮೂಲಕ ದ್ವಿಮುಖ ನೀತಿಯನ್ನು ತೋರಿಸುತ್ತಿದೆ ಎಂದು ಶಾಸಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ವಿರಾಟ್ ಹಿಂದೂ ಸಮಾಜೋತ್ಸವ ದಲ್ಲಿ ಪಾಲ್ಗೊಳ್ಳಲು ವಿಶ್ವ ಹಿಂದೂ ಪರಿಷತ್‍ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರಿಗೆ ಅನುಮತಿ ನಿರಾಕರಿಸುವ ಸರ್ಕಾರದ ನಡೆ ಖಂಡನೀಯ. ಪ್ರಚೋದನಕಾರಿ ಭಾಷಣ ಎಂದು ನೆಪ ಹೇಳುವ ಸರ್ಕಾರ, ಅಸಾದುದ್ದೀನ್ ಒವೈಸಿ ಪಕ್ಷದ ಕಾರ್ಯಕ್ರಮಕ್ಕೆನಗರದಲ್ಲಿ ಅವಕಾಶ  ಮಾಡಿಕೊಡಲು ಮುಂದಾಗಿತ್ತು . ಅಲ್ಪ ಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಹಿಂದೂಗಳ ಸಭೆ  ಸಮಾರಂಭಗಳಿಗೆ ಅನುಮತಿ ನೀಡುತ್ತಿಲ್ಲ. ಭಯೋತ್ಪಾದನೆ ಬಗ್ಗೆ ಚಕಾರವೆತ್ತದ ಕಾಂಗ್ರೆಸ್ ಹಿಂದೂಗಳ ಕಾರ್ಯಚಟುವಟಿಕೆಗಳಿಗೆ ಮಾತ್ರ ಅರ್ಕಾವತಿ ಡಿನೋಟಿಫಿಕೇಶನ್   ಪ್ರಕರಣ ಕಾಂಗ್ರೆಸ್ ಅಧಿಕಾರದ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಗರಣದಲ್ಲಿ ನೂರಕ್ಕೆ ನೂರರಷ್ಟು ತಪ್ಪಿತಸ್ಥರಾಗಿದ್ದು, ಪ್ರಕರಣದ ಭೂತ ಸರ್ಕಾರವನ್ನು ಅಧಿಕಾರ ದಿಂದ ಕೆಳಗಿಳಿಸಲಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ, ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com