ನಗರದೊಳಗೆ ಲೈನ್ ಕಷ್ಟ

ನಗರಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಸಲಾಗುತ್ತಿಲ್ಲ. ವರ್ಷಗಳ ಹಿಂದೆ ಸರಿಯಾದ ಯೋಜನೆ ರೂಪಿಸಿಲ್ಲ. ನಮ್ಮ ಬಳಿ ವಿದ್ಯುತ್ ಇದ್ದರೂ...
ವಿದ್ಯುತ್ ತಂತಿ
ವಿದ್ಯುತ್ ತಂತಿ

ಬೆಂಗಳೂರು: ನಗರಕ್ಕೆ ಅಗತ್ಯವಿರುವ ವಿದ್ಯುತ್ ಪೂರೈಸಲಾಗುತ್ತಿಲ್ಲ. ವರ್ಷಗಳ ಹಿಂದೆ ಸರಿಯಾದ ಯೋಜನೆ ರೂಪಿಸಿಲ್ಲ. ನಮ್ಮ ಬಳಿ ವಿದ್ಯುತ್ ಇದ್ದರೂ ಅದನ್ನು ನಗರದೊಳಗೆ ತರಲು ವಿದ್ಯುತ್ ತಂತಿ ಹಾಕಲು ಆಗುತ್ತಿಲ್ಲ ಹಾಗಾಗಿ ಕೆಪಿಟಿಸಿಎಲ್ ಅಧಿಕಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಸಾರ್ವಜನಿಕರು ಕಂಬಗಳನ್ನು ನೆಡಲು ಜಾಗ ನೀಡುತ್ತಿಲ್ಲ. ಅದನ್ನು ನಾವೇ ಖರೀದಿಸಿ ಹಣ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಹಾಗಾಗಿ ಬಾಡಿಗೆಗೆ ತಮ್ಮ ಜಮೀನು ಅಥವಾ ಸ್ಥಳ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಗರದಲ್ಲಿ ಎಲ್ಲೇ ವಿದ್ಯುತ್ ತಂತಿ ಹಾದುಬಂದರೆ ಮಾರುಕಟ್ಟೆ ದರದಲ್ಲಿ ಶೇ.75ರಷ್ಟು, ಟವರ್ ನಿರ್ಮಾಣ ಮಾಡಿದಲ್ಲಿ ಶೇ.100ರಷ್ಟು ಪರಿಹಾರ ನೀಡಲಾಗುವುದು.

ಗ್ರಾಮೀಣ ಪ್ರದೇಶಗಳಲ್ಲಾದರೆ ತಂತಿ ಹಾದುಬಂದಿರುವ ನಿರ್ದಿಷ್ಟ ಪ್ರದೇಶಕ್ಕೆ ಶೇ.50 ಹಾಗೂ ಟವರ್ ಇದ್ದಲ್ಲಿ ಶೇ.100 ಪರಿಹಾರ ನೀಡಲಾಗುವುದು ಎಂದರು. ವಿವಿಧೆಡೆಯಿಂದ ಆಗಮಿಸಿದ್ದ ಕೈಗಾರಿಕೋದ್ಯಮಿಗಳು ವಿದ್ಯುತ್ ಕೊರತೆ ಬಗ್ಗೆ ಅಹವಾಲು ತೋಡಿಕೊಂಡರು. ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯಕ್, ಕಾಸಿಯಾ ಅಧ್ಯಕ್ಷ ಸಿ.ಎ .ರಾಜಮನೆ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com