
ಬೆಂಗಳೂರು: ಕೊನೆಗೂ ಜೆಡಿಎಸ್ ಕಚೇರಿಯ ಕೀಲಿ ಕೈ ಕಾಂಗ್ರೆಸ್‍ಗೆ ಹಸ್ತಾಂತರಗೊಂಡಿದೆ. ಸೋಮವಾರ ಬೆಳಗಿನ ಜಾವದ ವರೆಗೆ ಕಚೇರಿಯಲ್ಲಿದ್ದ ಸಾಮಾನು-ಸರಂಜಾಮು, ಕಡತ, ಪೀಠೋಪಕರಣ ಗಳನ್ನು ಖುದ್ದು ನಿಂತು ಸಾಗಿಸಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಕಚೇರಿಗೆ ಬೀಗ ಹಾಕಿ ಕೀಲಿಕೈಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಹಸ್ತಾಂತರಿಸುವಂತೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಜೆಡಿಎಸ್ ವಕ್ತಾರರಾದ ರಮೇಶ್ ಬಾಬು ಬೆಳಗ್ಗೆ 10 ಗಂಟೆ ಸುಮಾರಿಗೆ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ತೆರಳಿ ಕಟ್ಟಡದ ಕೀಲಿ ಕೈನ್ನುಹಸ್ತಾಂತರಿಸಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಗೆ ತೆರಳಿ ಕಾಂಗ್ರೆಸ್ ಧ್ವಜ ಹಾರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
Advertisement