
ಬೆಂಗಳೂರು: ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹೊಸಕೆರೆಹಳ್ಳಿಯ 14 ಎಕರೆ ವಿಸ್ತೀರ್ಣದ ಬೆಟ್ಟವನ್ನೇ ಅನಧಿಕೃತವಾಗಿ ಪರಿವರ್ತನೆ ಮಾಡಿ ರು. 500 ಕೋಟಿ ಅಕ್ರಮ ನಡೆಸಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್ ಆರೋಪಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿ ಸರ್ವೆ ನಂ.168ರಲ್ಲಿರುವ ಹನುಮಗಿರಿ ಬೆಟ್ಟವನ್ನು ಜೆಡಿಎಸ್ ಸರ್ಕಾರ ಅನ„ಕೃತವಾಗಿ
ಖಾಸಗಿ ವ್ಯಕ್ತಿಗೆ ನೀಡಿದ್ದು, ಅದನ್ನು ಖರೀದಿಸಿರುವ ಸಂಸ್ಥೆ ಈಗ ಅಕ್ರಮವಾಗಿ 49 ಅಂತಸ್ತುಗಳ ಅಪಾರ್ಟ್‍ಮೆಂಟ್ ನಿರ್ಮಿಸುತ್ತಿದೆ. ಅಂದಿನ ಜಿಲ್ಲಾ„ಕಾರಿ ಸಾದಿಕ್ ಪಾಷ ಮತ್ತು ವಿಶೇಷ ಆಯುಕ್ತ ರಾಮಾಂಜನೇಯ ಅಕ್ರಮವಾಗಿ ಪರಿವರ್ತನೆ ಮಾಡಿಕೊಡುವ ಮೂಲಕ ಅಕ್ರಮಗಳಿಗೆ ನಾಂದಿ ಹಾಡಿದ್ದಾರೆ. ಇದರ ಹಿಂದೆ ಪ್ರಭಾವಿ ನಾಯಕರಿದ್ದು, ಈ ಬಗ್ಗೆ ಲೋಕಾಯುಕ್ತ ಮತ್ತು ಬಿಎಂಟಿಎಫ್ ಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾನೂನು ಉಲ್ಲಂಘಿ ಸಿ ಹರಾಜು: 14.10 ಎಕರೆ ಪ್ರದೇಶದಲ್ಲಿ ಎರಡು ದೇವಸ್ಥಾನಗಳೊಂದಿಗೆ ವ್ಯಾಪಿಸಿದ್ದ ಹನುಮಗಿರಿ ಬೆಟ್ಟ ಸರ್ಕಾರದ ದಾಖಲೆ ಪ್ರಕಾರ ಸರ್ಕಾರಿಬಿ ಖರಾಬು. ಅಂದರೆ ಈ ಜಾಗವನ್ನು ಸಾರ್ವಜನಿಕ ಉಪಯೋ ಗಕ್ಕೆ ನೀಡಬೇಕಿತ್ತು. ಆದರೆ ಕಾನೂನು ಉಲ್ಲಂಘಿಸಿ ಹರಾಜು ಮಾಡಿ ಖಾಸಗಿ ವ್ಯಕ್ತಿಗೆ ನೀಡಲಾಗಿದೆ.
ಹಾಗೊಂದು ವೇಳೆ ಹರಾಜು ಮಾಡಬೇಕಿತ್ತಾದರೂ ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿ ನಂತರ ಹರಾಜು ಮಾಡಬೇಕಿತ್ತು. ಆದರೆ ಅ„ಕಾರಿಗಳು ಸ್ಥಳ
ಪರಿಶೀಲಿಸದೆ ಇದನ್ನು ಕೃಷಿ ಭೂಮಿ ಎಂದು ಹೇಳಿ, ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಟ್ಟಿದ್ದಾರೆ.
ಎಂದು ರಮೇಶ್ ವಿವರಿಸಿದರು. ಸರ್ಕಾರ ನಡೆಸಿದ ಅಕ್ರಮ ಹರಾಜಿನಲ್ಲಿ ರಾಮಯ್ಯ ರೆಡ್ಡಿ ಎಂಬುವರು ಈ ಬೆಟ್ಟವನ್ನು ಪಡೆದಿದ್ದು, ಬಳಿಕರವೀಂದ್ರ ಎಂಬುವರು ಖರೀದಿಸಿದ್ದಾರೆ. ಇವರು ಅಂದಿನ ಸರ್ಕಾರದ ನೆರವಿನೊಂದಿಗೆ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಈ ಆಸ್ತಿಯನ್ನು ರವೀಂದ್ರ ಅವರಿಂದ ಅಡಮಾನಕ್ಕೆ ಪಡೆದ ರಾಜೇಶ್ ಎಕ್ಸ್ಪೋರ್ಟ್ ಸಂಸ್ಥೆ ಇದನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದೆ. ಅವರೀಗ ಟಾಟಾ ಪ್ರಮೋಂಟರ್ ಹೆಸರಿನಲ್ಲಿ ಅಪಾಟ್ರ್ಮೆಂಟ್ ನಿರ್ಮಿಸುತ್ತಿದ್ದಾರೆ. ಆದರೆ ಇದಕ್ಕೆ ಬಿಡಿಎ ಅಭಿವೃದ್ಧಿ ನಕ್ಷೆಯನ್ನು ಮಂಜೂರು ಮಾಡಿದರೆ, ಬಿಬಿಎಂಪಿ ಖಾತಾ ಮಾಡಿಕೊಟ್ಟಿದೆ. ಇಂಥ ಬೆಟ್ಟದ ಜಾಗವನ್ನು
ಖಾತಾ ಮಾಡುವ ಮುನ್ನ 49 ವರ್ಷಗಳ ಇಸಿಗಳನ್ನು ನೋಡಬೇಕು. ಇದೆಲ್ಲವನ್ನೂ ಗಾಳಿಗೆ ತೂರಿ ಕಟ್ಟಡ ನಿರ್ಮಾಣ ಕ್ಕೆ ಅವಕಾಶ ನೀಡಲಾಗಿದೆ ಎಂದುದೂರಿದರು. ಜೆಡಿಎಸ್ ಕಾಲದಲ್ಲಿ ಆರಂಭವಾದ ಹನುಮಗಿರಿ ಬೆಟ್ಟದ ಅಕ್ರಮ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲೂ ಮುಂದುವರಿಯುತ್ತಾ ಬಂದಿದ್ದು, ಈಗ ಬೆಟ್ಟವನ್ನೇ ಕರಗಿಸಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ, ರಾಜ್ಯಪರಿಸರ ಮಾಲಿನ್ಯ ಮಂಡಳಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅನುಮತಿ ಮತು ನಿರಾಕ್ಷೇಪಣಾಪತ್ರಗಳನ್ನು ಪಡೆಯದೆ ಕಟ್ಟಡ ನಿರ್ಮಿಸಲಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮಕೈಗೊಂಡು ಬೆಟ್ಟದ ಜಾಗವನ್ನುವಾಪಸ್ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರಮೇಶ್ ವಿವರಿಸಿದರು.
Advertisement