ಚರ್ಚ್‍ಸ್ಟ್ರೀಟ್ ಸ್ಫೋಟ ಪ್ರಕರಣ ರಾಜ್ಯ ಪೋಲೀಸರು ವಿಫಲ

ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ ಭೇದಿಸಲು ರಾಜ್ಯ ಪೋಲೀಸರು ವಿಫಲರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಬಿsಪ್ರಾಯಪಟ್ಟಿದೆ...
ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್

ಬೆಂಗಳೂರು: ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ  ಪ್ರಕರಣ ಭೇದಿಸಲು ರಾಜ್ಯ ಪೋಲೀಸರು ವಿಫಲರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಬಿsಪ್ರಾಯಪಟ್ಟಿದೆ. ರಾಜ್ಯಸಭೆಯಲ್ಲಿ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಚುಕ್ಕೆ ರಹಿತ ಪ್ರಶ್ನೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಈ ಉತ್ತರ ನೀಡಿದ್ದಾರೆ. ಚರ್ಚ್‍ಸ್ಟ್ರೀಟ್  ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ ಹಾಗೂ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಿಯೂ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಉತ್ತರಿಸಿದ್ದಾರೆ. ಡಿ.28ರಂದು ಸಂಭವಿಸಿದ್ದ ಬಾಂಬ್  ಸ್ಫೋಟ ಪ್ರಕರಣ ಭೇದಿಸಲು ಕರ್ನಾಟಕ ಪೋಲೀಸರು ಯಶಸ್ವಿಯಾಗಿಲ್ಲ. ಆದರೆ ರಾಜ್ಯ ಸರ್ಕಾರ, ಪೋಲೀಸರು ಹಾಗೂ ಗುಪ್ತಚರದಳದೊಂದಿಗೆ ಗೃಹ ಸಚಿವಾಲಯವೂ ನಿರಂತರ ಸಂಪರ್ಕ ಹೊಂದಿದೆ. ಕಾಲಕಾಲಕ್ಕೆ ಎಲ್ಲ ಮಾ ಹಿತಿಗಳನ್ನು ರಾಜ್ಯ ಪೊಲೀಸರೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಯಾವುದೇ ಗುಪ್ತಚರ ಮಾಹಿತಿಹಾಗೂ ಸೂಕ್ಷ್ಮ ವಿಚಾರಗಳ ವಿನಿಮಯಕ್ಕಾಗಿ ದಿನದ 24 ಗಂಟೆಯೂ `ಮಲ್ಟಿ ಏಜೆನ್ಸಿ ಸೆಂಟರ್' ಕಾರ್ಯನಿರ್ವಹಿಸುತ್ತಿದೆ. ಪರಿಣಾಮವಾಗಿ ಇತ್ತೀಚೆಗೆ ಇಸಿಸ್‍ನ ಟ್ವೀಟರ್ ನಿರ್ವಾಹಕ ಹಾಗೂ ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರನನ್ನು ಬಂಧಿಸಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ವಿಚಾರಣೆಯಲ್ಲಿ ಯಶಸ್ಸು ಸಾಧಿಸಿದೆಯೇ , ಇಲ್ಲವಾದಲ್ಲಿ ರಾಷ್ಟ್ರೀಯ ತನಿಖಾ ದಳದ ನೆರವು ಕೆಳಲಾಗಿದೆಯೇ  ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದರು. ಗೃಹ ಸಚಿವರ ಈ ಉತ್ತರದಿಂದ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ ನೀಡಲು ಹಿಂದೇಟು ಹಾಕುತ್ತಿರುವ ಸಂಗತಿ ಬಹಿರಂಗಗೊಂಡಿದೆ. ಪ್ರಕರಣದಲ್ಲಿ ಪೋ ಲೀಸರು ಕೆಲವರನ್ನು ಬಂಧಿಸಿದ್ದರೂ, ಅವರು ಬಾಂಬ್  ಸ್ಫೋಟ ಪ್ರಕರಣದಲ್ಲಿ ಭಾಗಿಯಾಗದಿರುವ
ಅನುಮಾನ ವ್ಯಕ್ತವಾಗಿರುವುದು ಕೂಡ ಇದರಿಂದ ಬಹಿರಂಗಗೊಂಡಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com