ಸಿದ್ದರಾಮಯ್ಯ ಕಥೆ ಏನಾಗುವುದೋ?

ಸಿದ್ದರಾಮಯ್ಯ ಮೂರು ವರ್ಷವಾದರೂ ಮುಖ್ಯಮಂತ್ರಿಯಾಗಿರಲಿ ಎಂಬ ಆಸೆ ಇತ್ತು. ಆದರೆ, ಇದೀಗ ಅರ್ಕಾವತಿ ಡಿನೋಟಿಫಿಕೇಶನ್...
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ

ಬೆಂಗಳೂರು: ಸಿದ್ದರಾಮಯ್ಯ ಮೂರು ವರ್ಷವಾದರೂ ಮುಖ್ಯಮಂತ್ರಿಯಾಗಿರಲಿ ಎಂಬ ಆಸೆ ಇತ್ತು. ಆದರೆ, ಇದೀಗ ಅರ್ಕಾವತಿ ಡಿನೋಟಿಫಿಕೇಶನ್  ಮೂಲಕ್ಕೆ ಹೋದರೆ ಏನಾಗುವುದೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಕಚೇರಿ ಜಾಗದ ಬಗ್ಗೆ ಮಾತನಾಡಲು ಆಹ್ವಾನಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಅರ್ಕಾವತಿ ಡಿನೋಟಿಫಿಕೇಶನ್ ನಲ್ಲಿ ಸಂಕಷ್ಟ ಎದುರಾಗುವ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆ. ರಾಜ್ಯ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿರುವವರಿಗೆ ಪಕ್ಷದ ಕಚೇರಿಗೆ ಜಾಗ ಕೊಡುವಂತೆ ಅರ್ಜಿ ಸಲ್ಲಿಸು ವುದಿಲ್ಲ ಎಂದು ಪತ್ರಿಕಾ ಗೋಷ್ಠಿ ಯಲ್ಲಿ ಶುಕ್ರವಾರ ತಿಳಿಸಿದರು.
ನನಗೆ ಅಧಿಕಾರ, ಜಾಗದ ಬಗ್ಗೆ ವ್ಯಾಮೋಹ ಇಲ್ಲ. ಎಲ್ಲೂ ನಿವೇಶನ ಸಿಕ್ಕಿಲ್ಲ ಎಂದು ಶೆಡ್ ಹಾಕಲು ಮುಂದಾದೆ. ಜೆಡಿಎಸ್ ಕಚೇರಿ ತೆರವು ಮಾಡುವುದಿಲ್ಲ ಎಂಬ ಅನುಮಾನ ಯಾರಲ್ಲೂ ಬೇಡ. ಬಾಡಿಗೆ ಕಟ್ಟಡ ಸಿಕ್ಕ ತಕ್ಷಣ ಕಚೇರಿ ತೆರವು ಮಾಡಲಾಗುವುದು ಎಂದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆ ವೇಳೆಗೆ ನಿವೃತ್ತಿ ತೆಗೆದುಕೊಂಡು ದೇವರನ್ನು ಹುಡುಕುವ ಪ್ರಯತ್ನ ಮಾಡಲಿದ್ದೇನೆ ಎಂದು ಗೌಡರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com