ಕೆ.ಜೆ ಜಾರ್ಜ್
ಕೆ.ಜೆ ಜಾರ್ಜ್

ಬಿದರಿ ತಮ್ಮ ಅನುಭವ ಹೇಳಿದ್ದಾರೆ: ಜಾರ್ಜ್ ತಿರುಗೇಟು

ಸರ್ಕಾರಕ್ಕೆ ಮಾಮೂಲಿ ಕೊಟ್ಟರೆ ಮಾತ್ರ ಕೆಲಸ ಎಂದು ಶಂಕರ್ ಬಿದರಿ ನೀಡಿರುವ ಹೇಳಿಕೆ ಖಂಡಿಸಿರುವ ಗೃಹ ಸಚಿವ ಕೆ.ಜೆ ಜಾರ್ಜ್, ಬಿದರಿ ಅವರು ಕರ್ತವ್ಯದಲ್ಲಿದ್ದಾಗಿನ ತಮ್ಮ...

ಮಡಿಕೇರಿ: ಸರ್ಕಾರಕ್ಕೆ ಮಾಮೂಲಿ ಕೊಟ್ಟರೆ ಮಾತ್ರ ಕೆಲಸ ಎಂದು ಶಂಕರ್ ಬಿದರಿ ನೀಡಿರುವ ಹೇಳಿಕೆ ಖಂಡಿಸಿರುವ ಗೃಹ ಸಚಿವ ಕೆ.ಜೆ ಜಾರ್ಜ್, ಬಿದರಿ ಅವರು ಕರ್ತವ್ಯದಲ್ಲಿದ್ದಾಗಿನ ತಮ್ಮ ಅನುಭವವನ್ನು ನೆನಪಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಯಾವುದೇ ರೂಪದಲ್ಲಿ ಭ್ರಷ್ಟಾಚಾರ ನಡೆಸುತ್ತಿಲ್ಲ. ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ನೀಡುವುದು ಕೂಡ ಅಷ್ಟೇ ಅಪರಾಧ. ಲಂಚ ಸ್ವೀಕರಿಸುವವರ ಬಗ್ಗೆ ನಿಖರ ಮಾಹಿತಿ ನೀಡಲಿ. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ನಾನು ಬದ್ಧ. ಬಿದರಿ ಅವರ ಕಾಲದಲ್ಲಿ ಏನೇನಾಗಿದೆ, ಅವರು ಯಾವ ಯಾವ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರು ಎಂಬುದು ನನಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.

ಡಿನೋಟಿಫಿಕೇಷನ್ ವಿಚಾರದಲ್ಲಿ ದಾಖಲೆ ಇದೆ ಎಂದು ಹುಲಿ ಬಂತು ಹುಲಿ ಎನ್ನುವ ರೀತಿ ವರ್ತಿಸಿದ ಬಿಜೆಪಿಗೆ ಇಲಿಯನ್ನೂ ತೋರಿಸಲು ಆಗಲಿಲ್ಲ ಎಂದು ಟೀಕಿಸಿದರು.

Related Stories

No stories found.

Advertisement

X
Kannada Prabha
www.kannadaprabha.com