ಎಸ್ ಸಿ, ಎಸ್ ಟಿ ಹಾಸ್ಟೆಲ್ ಗಳಲ್ಲಿ ಅವ್ಯವಹಾರ ಕುರಿತು ಸದನದಲ್ಲಿ ಗದ್ದಲ

ವಿಧಾನಪರಿಷತ್ ಕಲಾಪದಲ್ಲಿ ಎಸ್ ಸಿ/ಎಸ್ ಟಿ ಹಾಸ್ಟೆಲ್ ಗಳಲ್ಲಿ ಅವ್ಯವಹಾರ ಪ್ರಕರಣ ಹಾಗೂ ಸಚಿವ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ 11 ಕೋಟಿ...
ಕಲಾಪ
ಕಲಾಪ
Updated on

ಬೆಳಗಾವಿ: ವಿಧಾನಪರಿಷತ್ ಕಲಾಪದಲ್ಲಿ ಎಸ್ ಸಿ/ಎಸ್ ಟಿ ಹಾಸ್ಟೆಲ್ ಗಳಲ್ಲಿ ಅವ್ಯವಹಾರ ಪ್ರಕರಣ ಹಾಗೂ ಸಚಿವ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ 11 ಕೋಟಿ ರೂಪಾಯಿ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ಗದ್ದಲಕ್ಕೆ ಕಾರಣವಾಗಿದೆ.

ಇಂದಿನ ಕಲಾಪ ಆರಂಭದಲ್ಲೇ, ಸಚಿವ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ 11 ಕೋಟಿ ರೂಪಾಯಿ ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ಪ್ರತಿಧ್ವನಿಸಿದೆ. ಪ್ರಕರಣ ಸಂಬಂಧ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸಚಿವರು ಜವಾಬ್ದಾರಿಯುವ ಸ್ಥಾನದಲ್ಲಿದ್ದು, ಈ ರೀತಿ ವರ್ತಿರಿಸಿರುವುದ ಸರಿಯಲ್ಲ. ಇದರ ಬಗ್ಗೆ ತನಿಖೆಯಾಗಬೇಕು ಅಲ್ಲದೇ ಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ನಾಗರಬಾವಿ ನಿವಾಸಿ ಉದ್ಯಮಿ ಅಂಜನಾ ಎ.ಶಾಂತವೀರ ಎಂಬುವವರು ಸಚಿವ ಬಾಬುರಾವ್ ಚಿಂಚನಸೂರ್ ಅವರ ವಿರುದ್ಧ ದೂರು ದಾಖಲಿಸಿದ್ದರು. ಅಂಜನಾ ಅವರಿಂದ ಸಚಿವರು ಸಾಲ ಪಡೆದಿದ್ದರು.

ಇನ್ನೂ ಎಸ್ ಸಿ/ಎಸ್ ಟಿ ಹಾಸ್ಟೆಲ್ ಗಳ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ರಚನೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಧರಣಿ ಮಾಡಿದವು. ಹೀಗಾಗಿ ಹತ್ತು ನಿಮಿಷಗಳ ಕಾಲ ಸದನವನ್ನು ಮುಂದೂಡಿಕೆ ಮಾಡಲಾಯಿತು.

ನಿನ್ನೆ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಹಾಗೂ ಜೆಡಿಎಸ್ ಸದಸ್ಯ ಟಿಎ ಶರವಣ ಎಸ್ ಸಿ /ಎಸ್ ಟಿ ಹಾಸ್ಟೆಲ್ ಗಳ ಹಾಸಿಗೆ, ದಿಂಬು ಖರೀದಿಯಲ್ಲಿ 19 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ನಡುವೆ ಹಾಸ್ಟೆಲ್ ಗಳಲ್ಲಿ ಅವ್ಯವಹಾರ ಆಗಿರುವುದು ನಿಜ ಎಂದಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ, ಪ್ರಕರಣವನ್ನು ಸಿಐಡಿ ವಹಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಸಿಐಡಿ ತನಿಖೆ ಬದಲು ಪ್ರಕರಣ ಸಂಬಂಧ ಸದನದ ಸಮಿತಿ ರಚಿಸಿ ಆ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದವು. ಹೀಗಾಗಿ ಸದನವನ್ನಾ ಸಭಾಪತಿ 10 ನಿಮಿಷ ಮುಂದೂಡಿಕೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com