
ಹಾವೇರಿ: ಸರ್ಕಾರ ಪ್ರತಿ ಟನ್ ಕಬ್ಬಿಗೆ ನೀಡಬೇಕಿದ್ದ ಪ್ರೋತ್ಸಾಹಧನದ ಮೊತ್ತವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಲಾಗಿದ್ದು, ರೈತರಿಗೆ ಹಣ ನೀಡುವ ಪ್ರಕ್ರಿಯೆ ಮವಾರದಿಂದ ಆರಂಭವಾಗಲಿದೆಎಂದು ಸಹಕಾರ ಮತ್ತು ಸಕ್ಕರೆ ಖಾತೆ ಸಚಿವಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.ಹಾವೇರಿಯಲ್ಲಿ ಶನಿವಾರ ಮಾತನಾಡಿದ ಅವರು, 2013-14ನೇ ಸಾಲಿನಲ್ಲಿ ರು. 100ಗಳ ಒಟ್ಟು ರು. 350 ಕೋಟಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಲಾಗಿದೆ. ಕಾರ್ಖಾನೆಗಳು ನೀಡಬೇಕಿರುವ ಬಾಕಿಯನ್ನು ಈ ಮಾಸಾಂತ್ಯದೊಳಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರೈತರಿಗೆ ಬಾಕಿ ನೀಡದ ಕಾರ್ಖಾನೆಗಳ 32 ಗೋದಾಮುಗಳನ್ನು ಜಪ್ತಿ ಮಾಡಿ 9 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ವಶಪಡಿಸಿ ಕೊಳ್ಳಲಾಗಿದೆ. ಬಾಕಿ ಹಣವನ್ನು ಕಾರ್ಖಾನೆ ಯಿಂದಲೇ ಕೊಡಿಸಲು ಕ್ರಮ ಕೈಗೊಳ್ಳಲಾ ಗುವುದು. ಇಲ್ಲದಿದ್ದರೆ ಗೋದಾಮುಗಳಿಂದ ವಶಕ್ಕೆ ಪಡೆದ ಸಕ್ಕರೆ ಮಾರಾಟ ಮಾಡಿ ಹಣ ಪಾವತಿಸಲಾಗು ವುದು. ಸಕ್ಕರೆ ಖರೀದಿಗೆ
ವ್ಯಾಪಾರಸ್ಥರು ಬಾರದಿದ್ದರೆ ಎಂಎಲ್ ಐಎಲ್ ಮೂಲಕವೇ ಖರೀದಿಸಲಾ ಗುವುದು. ಜುಲೈ 31ರೊಳಗೆ ಕಬ್ಬು ಬಾಕಿಯನ್ನು ಸರ್ಕಾರವಾಗಲಿ ಅಥವಾ ಕಾರ್ಖಾನೆಯಿಂದಾಗಲಿ ಪಾವತಿಸಲಿದೆ ಎಂದು ತಿಳಿಸಿದರು. ಕಬ್ಬು ಬೆಳೆಗಾರರ ಸಮಸ್ಯೆ ದೇಶಾದ್ಯಂತ ಇದೆ. ಈ ವರ್ಷ ಟನ್‍ಗೆ ರು. 2123 ಎಫ್ ಆರ್‍ಪಿ ದರ ನಿಗದಿಯಾಗಿದ್ದು, ಸಕ್ಕರೆ ಬೆಲೆ ಕುಸಿತದಿಂದ ಕಾರ್ಖಾನೆ ಮಾಲೀಕರೂ ಸಮಸ್ಯೆಗೆ ಸಿಲುಕಿದ್ದಾರೆ. ಈ ಸಮಸ್ಯೆಗೆ ರಾಷ್ಟ್ರಮಟ್ಟದಲ್ಲಿ ಪರಿಹಾರ ದೊರೆಯ ಬೇಕಿದೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು, ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರಧಾನಿ ಭೇಟಿಗೆ ಸರ್ವಪಕ್ಷಗಳ ನಿಯೋಗ ತೆರಳಲಾಗುವುದು ಎಂದರು.
ಪಕ್ಷದಲ್ಲಿ ಅಸಮಾಧಾನವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಹಾಗೂ ಶಾಸಕಾಂಗ ಪಕ್ಷದ ಸಂಪೂರ್ಣ ಬೆಂಬಲವಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಖ್ಯಮಂತ್ರಿಗಳ ಮೇಲೆ ಅವಿಶ್ವಾಸ ವ್ಯಕ್ತಪಡಿಸುವ ಯಾವುದೇ ರಾಜಕೀಯ ನಡೆಯುತ್ತಿಲ್ಲ ಎಂದು ಸಚಿವ ಮಹದೇವಪ್ರಸಾದ್ ಸ್ಪಷ್ಟಪಡಿಸಿದರು. ಲೋಕಾಯುಕ್ತರ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸಿದೆ. ತನಿಖೆಯನ್ನು ಎಸ್‍ಐಟಿಗೆ ವಹಿಸಲಾಗಿದೆ. ಲೋಕಾಯುಕ್ತ ಕಾಯ್ದೆ ಗೆ ತಿದ್ದುಪಡಿ ಮಾಡದ ಹೊರತು ಸದ್ಯದ ಕಾನೂನಿನ ಪ್ರಕಾರ ಸರ್ಕಾರ ಏನೂ ಮಾಡುವಂತಿಲ್ಲ. ಜು. 24ರ ವರೆಗೆ ನಡೆಯುವ ಅಧಿ ವೇಶನದಲ್ಲೇ ಈ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಮಹದೇವಪ್ರಸಾದ್ ಹೇಳಿದರು.
ರೈತರ ಆತ್ಮಹತ್ಯೆ ತಡೆಯಲು ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಈ ಕಾರ್ಯಪಡೆ
ಪೊಲೀಸ್, ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಲೇವಾದೇವಿದಾರರು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ನೀಡುವುದನ್ನು ಪತ್ತೆಹಚ್ಚಿ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ರೈತರ ಸಾಲಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಲಾಗುವುದು. ಸೋಮವಾರ ಇದನ್ನು ಮುಖ್ಯಮಂತ್ರಿಗಳೇ ಅ„ಕೃತವಾಗಿ ಘೋಷಣೆ ಮಾಡಲಿದ್ದಾರೆ.
-ಎಚ್.ಎಸ್.ಮಹದೇವ ಪ್ರಸಾದ್, ಸಕ್ಕರೆ ಸಚಿವ
Advertisement