ರೈತರಿಗೆ ಸಾಂತ್ವನ ಹೇಳಲು ಬಿಜೆಪಿ ಸನ್ನದ್ಧ

ರೈತರ ಸಮಸ್ಯೆಗಳನ್ನು ಅಳಿಸಲು ಜು.18 ಮತ್ತು 19 ರಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಸರಣಿ ಸಭೆ ನಡೆಸಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ  ಪ್ರಹ್ಲಾದ್ ಜೋಷಿ(ಸಂಗ್ರಹ ಚಿತ್ರ)
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ(ಸಂಗ್ರಹ ಚಿತ್ರ)

ಬೆಂಗಳೂರು: ರೈತರ ಸಮಸ್ಯೆಗಳನ್ನು ಆಲಿಸಲು ಜು.18 ಮತ್ತು 19 ರಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಸರಣಿ ಸಭೆ ನಡೆಸಲಿದೆ. ಅಂದು ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ರೈತರನ್ನು ಖುದ್ದು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸುವವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ಸಭೆಗಳು ನಡೆದ ಬಳಿಕ ಪಕ್ಷ ವರದಿಯೊಂದನ್ನು ಸಿದ್ಧಪಡಿಸಿ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತದೆ ಎಂದು ಹೇಳಿದರು. ಮೊದಲ ತಂಡದಲ್ಲಿ ತಾವು ಸೇರಿದಂತೆ ಸಂಸದ ಶಿವಕ್ಕುಮಾರ್ ಉದಾಸಿ, ಶಾಸಕ ಸುನಿಲ್ ಕುಮಾರ್ ಎರಡನೇ ತಂಡದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಸೋಮಣ್ಣ, ಮೂರನೇ ತಂಡದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಅರವಿಂದ ಲಿಂಬಾವಳಿ, ಗೋ ಮಧುಸೂಧನ್, ನಾಲ್ಕನೇ ತಂಡದಲ್ಲಿ ಆರ್ ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಮಣ್ಣ ಐದನೇ ತಂಡದಲ್ಲಿ ಸಿ.ಟಿ ರವಿ ಬಸವರಾಜ ಬೊಮ್ಮಾಯಿ, ಗಣೇಶ್ ಕಾರ್ಣಿಕ್, ಆರನೇ ತಂದಲ್ಲಿ ಕೆಬಿ ಶಾಣಪ್ಪ ಲಕ್ಷ್ಮಣ ಸವಡಿ, ರಘುನಾಥ್ ಮಲ್ಕಾಪುರೆ ಇರುತ್ತಾರೆ ಎಂದರು.

ಜು.25 ಮತ್ತು 26 ರಂದು ಎರಡು ದಿನಗಳ ಕಾಲ ಆರು ತಂಡವನ್ನು ರಚಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದೇವೆ ಎಂದು ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ. ಕೋರ್ ಕಮಿಟಿ ಸಭೆಗೆ ಯಡಿಯೂರಪ್ಪ ಗೈರುಹಾಜರಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಅವರು ದೆಹಲಿಯಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಹುಲ್ ವಿರುದ್ಧ ಟೀಕೆ: ರೈತರ ಬಗ್ಗೆ ಸಂಸತ್ ನಲ್ಲಿ ಪುಂಖಾನುಪುಂಖವಾಗಿ ಮಾತನಾಡುವ ರಾಹುಲ್ ಗಾಂಧಿ ಅವರು ಕರ್ನಾಟಕದ ರೈತರ ಸರಣಿ ಸಾವಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ, ತಮ್ಮ ಪಕ್ಷಕ್ಕೆ ಮುಜುಗರ ಉಂಟಾಗುವುದನ್ನು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆಯೇ ಎಂದು ಪ್ರಹ್ಲಾದ್ ಜೋಷಿ ತರಾಟೆಗೆ ತೆಗೆದುಕೊಂಡರು.

ದೇಶದ ಯಾವುದೇ ಭಾಗದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಂಡರೂ, ರಾಹುಲ್ ಗಾಂಧಿ ಅಲ್ಲಿಗೆ ಹೋಗುತ್ತಾರೆ. ಆದರೆ ಕರ್ನಾಟಕಕ್ಕೆ ಬಂದಿಲ್ಲ. ಸರ್ಕಾರಕ್ಕೆ ಉಂಟಾಗುವ ಮುಜುಗರ ತಪ್ಪಿಸಲು ಸಿದ್ದರಾಮಯ್ಯ ಅವರೇ ತಮ್ಮೆಲ್ಲಾ ಶಕ್ತಿ ಬಳಸಿ ರಾಹುಲ್ ಗಾಂಧಿ ಇಲ್ಲಿಗೆ ಬರುವುದನ್ನು ತಡೆದಿದ್ದಾರೆ ಎಂದು ಜೋಷಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com