
ಬೆಂಗಳೂರು/ವಿಧಾನಪರಿಷತ್: ಆಭರಣ ವ್ಯಾಪಾರಿಯಾಗಿರುವ ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್‌ರಾವ್ ಅವರ ಮಗ ಅಶ್ವಿನ್ ರಾವ್ ಅವರು 25 ಲಕ್ಷ ಮೌಲ್ಯದ ವಜ್ರದಾಭರಣಕ್ಕೆ ಡಿಮ್ಯಾಂಡ್ ಮಾಡಿಗ ಸಂಗತ ಸದನದಲ್ಲಿ ಪ್ರಸ್ತಾಪಗೊಂಡಿತು.
ಲೋಕಾಯುಕ್ತ ಮೇಲೆನಿ ಚರ್ಚೆ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಕೆಲವು ತಿಂಗಳ ಹಿಂದೆ(ಏಪ್ರಿಲ್ 18) ಶರವಣ ಅವರು ಕರೆ ಮಾಡಿ ಲೋಕಾಯುಕ್ತರ ಕಚೇರಿಯಿಂದ ಕರೆ ಬಂದಿದೆ. ಕುಮಾರ ಕೃಪಾ ಗೆಸ್ಟ್ ಹೌಸ್‌ಗೆ ಬರುವಂತೆ ಹೇಳುತ್ತಿದ್ದಾರೆ ಏನು ಮಾಡಲಿ ಎಂದು ಕೇಳಿದರು. ನಾನು ಅನುಮಾನ ವ್ಯಕ್ತಪಡಿಸಿ ಅಲ್ಲಿಗೆ ಹೋಗುವಂತೆ ತಿಳಿಸಿದೆ.
ಶರವಣ ಅವರು ಅಲ್ಲಿಗೆ ಹೋದಾಗ ಲೋಕಾಯುಕ್ತರ ಮಗ 25 ಲಕ್ಷ ರುಪಾಯಿ ಮೌಲ್ಯದ ವಜ್ರದಾಭರಣ ಮಾಡಿಸಿಕೊಡುವಂತೆ ಕೋರಿಕೆ ಇಟ್ಟಿದ್ದಾರೆ. ಏಕೆ ಮಾಡಿಕೊಡಬೇಕೆಂದು ಕೇಳಿದ್ದಾರೆ. ನಂತರ ಕರೆ ಮಾಡಿದರೂ ಶರವಣ ಹೋಗಲಿಲ್ಲ ಎಂದರು. ಈ ಪ್ರಕರಣದ ವಿಷಯ ಕೇಳಿ ಇಡೀ ಸದನ ಹೌಹಾರಿತು.
Advertisement