
ಬೆಂಗಳೂರು: ಆಸ್ತಿ ವಿವರಗಳ ಬಗ್ಗೆ ಮಾತನಾಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು 1991ರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಎಷ್ಟು ಹಣ ಕೊಟ್ಟಿದ್ದರು? ಗೊಳಿಸಲಿ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ. ಚಂದ್ರಶೇಖರ್ ಪ್ರಧಾನಿ ಆಗುವ ಸಂದ ರ್ಭದಲ್ಲಿ ನಡೆದ ಲೋಕಸಭಾ ಚುನಾವಣೆ ಯಲ್ಲಿ ನಾನು ಚಿತ್ರದುರ್ಗದಲ್ಲಿ ಸ್ಪರ್ಧಿಸಿದ್ದೆ. ದೇವೇಗೌಡರು ಹಾಸನದಿಂದ ಸ್ಪರ್ಧಿಸಿದ್ದರು. ಆಗ ಚಂದ್ರಶೇಖರ್ ಎಷ್ಟು ಹಣ ನೀಡಿದ್ದರು? ಅದನ್ನು ದೇವೇಗೌಡರು ಏನು ಮಾಡಿದರು ಎನ್ನುವುದನ್ನು ನಾನು ಹೇಳುವುದಿಲ್ಲ. ದೇವೇಗೌಡರೇ ಹೇಳಬೇಕು. ಅದೇ ರೀತಿ 1994ರ ಚುನಾವಣೆಯಲ್ಲಿ ದೇವೇಗೌಡರು ನನಗೆ ನೀಡಿದ್ದ ಹಣದಲ್ಲಿ ಎಷ್ಟು ವಾಪಸ್ ನೀಡಿದ್ದೇನೆ ಎನ್ನುವುದನ್ನೂ ಗೌಡರೇ ವಿವರಿಸಬೇಕು. ಇದರಿಂದ ಯಾರು ಎಷ್ಟು ಆಸ್ತಿ ಗಳಿಸಿದ್ದಾರೆ. ಏನು ಮಾಡಿದ್ದಾರೆ ಎನ್ನುವುದು ಬಹಿರಂಗವಾಗಬೇಕು ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ನಾನು ರಾಜಕಾರಣಕ್ಕೆ ಬಂದ ನಂತರ ಒಂದು ಎಕರೆ ಜಮೀನು ಹೆಚ್ಚಾಗಿರಬಹುದು. ಅದೇ ದೇವೇಗೌಡರು, 1962ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ನಂತರ ಆಸ್ತಿ ಎಷ್ಟಾಗಿದೆ? ಅದೇ ರೀತಿ 1983ರಲ್ಲಿ ಮಂತ್ರಿಯಾದಾಗ, 1994ರಲ್ಲಿ ಮುಖ್ಯಮಂತ್ರಿ ಯಾದಾಗ ಮತ್ತು 1996ರಲ್ಲಿ ಪ್ರಧಾನಿಯಾದ ನಂತರ ಎಷ್ಟೆಲ್ಲಾ ಆಸ್ತಿ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಘೋಷಣೆ ಮಾಡಬೇಕು. ಹಾಗೆಯೇ ಅವರ ಪುತ್ರ ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಯಾಗುವ ಮುನ್ನ ಎಷ್ಟು ಆಸ್ತಿ ಇತ್ತು. ಆನಂತರ ಆಸ್ತಿ ಎಷ್ಟಾಗಿದೆ ಎನ್ನುವ ಬಗ್ಗೆ ತನಿಖೆ ಮಾಡಿಸಲಿ. ಬಿಡದಿ ಬಳಿ ಸರ್ಕಾರಿ ಜಾಗ ಒತ್ತುವರಿ ಪ್ರಕರಣ, ಅಕ್ರಮ ಗಣಿಕಾರಿಕೆ,ಗಂಗೇನಹಳ್ಳಿ ಡಿನೋಟಿಫಿಕೇಷನ್ ಸೇರಿದಂತೆ ತಮ್ಮ ಪಕ್ಷದ ಅವಧಿಯಲ್ಲಿ ಆಗಿರುವ ಅಕ್ರಮಗಳನ್ನು ದೇವೇಗೌಡರು ಏಕೆ ಸಿಬಿಐಗೆ ಕೊಡಿ ಎಂದು ಹೇಳುತ್ತಿಲ್ಲ? ಎಲ್ಲಾ ಪ್ರಕರಣ ಗಳಂತೆ ಇವುಗಳನ್ನೂ ಸಿಬಿಐಗೆ ವಹಿಸಿ ಎಂದು ಗೌಡರು ಆದರ್ಶ ಮೆರೆಯಲಿ ಎಂದರು.
Advertisement