ದೇಶಪಾಂಡೆ ಕ್ಷಮೆ ಕೇಳಲಿ: ಆರ್. ಅಶೋಕ

ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರವನ್ನು ಬಿಟ್ಟು ಎಡವಟ್ಟು ಮಾಡಿರುವ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ. ದೇಶಪಾಂಡೆಯವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಆಗ್ರಹಿಸಿದ್ದಾರೆ...
ಆರ್.ವಿ. ದೇಶಪಾಂಡೆ
ಆರ್.ವಿ. ದೇಶಪಾಂಡೆ

ಬೆಂಗಳೂರು: ಭಾರತದ ಭೂಪಟದಲ್ಲಿ ಜಮ್ಮು-ಕಾಶ್ಮೀರವನ್ನು ಬಿಟ್ಟು ಎಡವಟ್ಟು ಮಾಡಿರುವ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ. ದೇಶಪಾಂಡೆಯವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಆಗ್ರಹಿಸಿದ್ದಾರೆ.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ವಿಚಾರವಾಗಿ ಹೋರಾಟ ಮಾಡಿ ಶ್ಯಾಮಪ್ರಸಾದ್ ಮುಖರ್ಜಿ ಅವರು ಸೆರೆವಾಸ ಅನುಭವಿಸಿದ್ದರು. ದುರದೃಷ್ಟವೆಂದರೆ, ಮಲೇಶಿಯಾದಲ್ಲಿ ಪತ್ರಿಕೆಗೆ ಪ್ರವಾಸೋದ್ಯಮ ಕುರಿತು ಜಾಹೀರಾತು ನೀಡಿರುವ ನಮ್ಮ ಸರ್ಕಾರವೇ ಜಮ್ಮು-ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರಕಟಿಸಿ ಅಕ್ಷಮ್ಯ ಅಪರಾಧ ಮಾಡಿದೆ.

ಈ ಹಿಂದೆ ಚೀನಾ ದೇಶವು ಭಾರತದ ಭೂಪಟವನ್ನು ತಿರುಚಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ನಮ್ಮವರೇ ತಪ್ಪು ಮಾಡಿದ್ದಾರೆ. ಯಾರ ವಿರುದ್ಧ ಹೋರಾಟ ನಡೆಸುವುದು? ಸಚಿವ ದೇಶಪಾಂಡೆ ಅವರು ನೈತಿಕ ಹೊಣೆ ಹೊತ್ತು ದೇಶದ ಜನರ ಕ್ಷಮೆ ಕೇಳಬೇಕು. ಸಂಬಂಧಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com