
ಬೆಂಗಳೂರು: ಜೆಡಿಎಸ್‍ನ ಕುಮಾರಸ್ವಾಮಿ ಹಾಗೂ ಬಿಜೆಪಿಯ ಯಡಿಯೂರಪ್ಪ ಬಿಬಿಎಂಪಿ ಚುನಾವಣೆಗಾಗಿ `ಭಾಯಿ-ಭಾಯಿ' ಆಗಿದ್ದು, ಜನರು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟೀಕಿಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಕೇಂದ್ರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಚ್‍ಡಿಕೆ ಹಾಗೂ ಬಿಎಸ್‍ವೈ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಒಂದಾಗಿದ್ದಾರೆ. ಈ ಇಬ್ಬರು ನಾಯಕರು ಯಾವಾಗ `ಭಾಯಿ' ಆಗುತ್ತಾರೆ, ಯಾವ ಸಮಯದಲ್ಲಿ `ಬೈ' ಹೇಳುತ್ತಾರೆ ಎಂದು ತಿಳಿಯುವುದಿಲ್ಲ.
ಬಿಬಿಎಂಪಿಯಲ್ಲಿ ಬಿಜೆಪಿ 5 ವರ್ಷಗಳಲ್ಲಿ ಒಟ್ಟು ರು.45ಸಾವಿರ ಕೋಟಿ ಮೊತ್ತ ಬಜೆಟ್‍ಗಳನ್ನು ಮಂಡಿಸಿದ್ದು, ರು.18ಸಾವಿರ ಮಾತ್ರ ಯೋಜನೆಗಳಿಗಾಗಿ ಖರ್ಚು ಮಾಡಿದೆ. ಬಿಬಿಎಂಪಿಯಲ್ಲಿ ಇನ್ನೂ ರು.12ಸಾವಿರ ಕೋಟಿ ಸಾಲವಿದೆ. ಚುನಾವಣಾ ಪ್ರಚಾರದ ವೇಳೆ ಪ್ರತಿ ಮನೆಗೂ ಭೇಟಿ ನೀಡಿ ಈ ವಿಚಾರ ತಿಳಿಸಲಾಗುವುದು ಎಂದರು.
Advertisement